ಮುಖ್ಯ ಸುದ್ದಿ
RETIREMENT; ವಯೋನಿವೃತ್ತಿ ಹೊಂದಿದ ಪ್ರೊ.ಎಂ.ವಿ.ಗೋವಿoದರಾಜು ಅವರಿಗೆ ಬೀಳ್ಕೊಡುಗೆ
ಚಿತ್ರದುರ್ಗ: ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ವತಿಯಿಂದ ವಯೋನಿವೃತ್ತಿ(RETIREMENT) ಹೊಂದಿದ ಪ್ರೊ.ಎಂ.ವಿ.ಗೋವಿoದರಾಜು ಅವರಿಗೆ ಬೀಳ್ಕೊಡುಗೆ ನೀಡಲಾಯಿತು.
ಕ್ಲಿಕ್ ಮಾಡಿ ಓದಿ: SCAM; ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣ | ಸಿಎಂ ರಾಜೀನಾಮೆ ನೀಡದೆ ಭಂಡತನಕ್ಕೆ ಬಿದ್ದಿದ್ದಾರೆ | ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
ಈ ವೇಳೆ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚoದನ್ ಮಾತನಾಡಿ, ಸದೃಢ ಸಮಾಜ ನಿರ್ಮಿಸಬೇಕಾಗಿರುವ ಶಿಕ್ಷಕರುಗಳೆ ಕಲುಷಿತಗೊಂಡರೆ ಸಮಾಜವನ್ನು ತಿದ್ದುವರ‍್ಯಾರು ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ದೇಶದಲ್ಲಿ ಮಾದರಿ ಶಿಕ್ಷಕರುಗಳ ಕೊರತೆಯಿರುವುದನ್ನು ನೋಡಿದರೆ ನಿಮ್ಮಿಂದ ಶಿಕ್ಷಣ ಕಲಿತವರ ಗತಿಯೇನು? ನಮ್ಮ ದೇಶದ ಜನ ಅಮೇರಿಕಾ, ಯುರೋಪ್ ಸಂಸ್ಕೃತಿಯನ್ನು ಅನುಸರಿಸುತ್ತಿರುವುದು ನಿಜಕ್ಕೂ ನೋವಿನ ಸಂಗತಿ. ವ್ಯವಸ್ಥೆಯನ್ನು ತಿದ್ದಿಕೊಂಡು ಸಾಗಿದಾಗ ಮಾತ್ರ ದೇಶ ಬಲಿಷ್ಟವಾಗಲು ಸಾಧ್ಯ ಎಂದು ಹೇಳಿದರು.
ಇಡೀ ಪ್ರಪಂಚವನ್ನೆ ಎದುರಿಸುವಷ್ಟು ಶಕ್ತಿಶಾಲಿಯಾಗಿ ಚೈನಾ ಬೆಳೆದಿದೆಯೆಂದರೆ ಅವರಲ್ಲಿರುವ ಶಿಸ್ತು ಕಾರಣ. ಚೈನಾದಲ್ಲಿ ಹಾವು ಕಪ್ಪೆ ತಿನ್ನುತ್ತಾರೆಂದು ಮಾತನಾಡಿಕೊಳ್ಳುವುದಕ್ಕಿಂತ ಮುಖ್ಯವಾಗಿ ಅಲ್ಲಿಗೆ ಹೋಗಿ ನೋಡಿದಾಗ ಅವರಲ್ಲಿರುವ ಶಿಸ್ತು, ಸಮಯ ಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ.
ನಮ್ಮ ಶಿಕ್ಷಣ ಸಂಸ್ಥೆಗೆ ಪ್ರೊ.ಎಂ.ವಿ.ಗೋವಿoದರಾಜು ರವರದು ಅಪ್ರತಿಮೆ ಸೇವೆ ಸಲ್ಲಿಸಿದ್ದಾರೆ ಎಂದರು.
ಕ್ಲಿಕ್ ಮಾಡಿ ಓದಿ: SP TRANSFER; SP ಧರ್ಮೇಂದರ್ ಕುಮಾರ್ ಮೀನಾ ವರ್ಗಾವಣೆ | ಸಂಶೋಧನಾ ಸಂಸ್ಥೆಯ ವಿಜ್ಞಾನಿಯಾಗಿ ನೇಮಕ
ಈ ಸಂದರ್ಭದಲ್ಲಿ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಅನಂತರಾಮ್ ಬಿ.ಸಿ. ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಂಯೋಜಕ ಆರ್. ಎಸ್.ರಾಜು, ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕ್ರಿಕೆಟ್ ಕೋಚ್ ಮನ್ಸೂರ್ ಅಹಮದ್, ಎಸ್.ಜೆ.ಎಂ.ವಿದ್ಯಾಪೀಠದ ನಿವೃತ್ತ ದೈಹಿಕ ಶಿಕ್ಷಕ ಮಕ್ಸೂದ್ ಅಹಮದ್, ದಾವಣಗೆರೆ ವಿಶ್ವವಿದ್ಯಾನಿಲಯದ ಕ್ರೀಡಾ ನಿರ್ದೇಶಕ ರಾಜ್‌ಕುಮಾರ್, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ನಿವೃತ್ತ ಪ್ರಾಂಶುಪಾಲ ರುದ್ರಮುನಿ, ಡಾ.ಜೆ.ಇ.ಭೈರಸಿದ್ದಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.