ಚಳ್ಳಕೆರೆ
ದ್ಯಾಮಲಾಂಭ ದೇವಿಯ ಜಾತ್ರೆ | ವಿಜೃಂಭಣೆಯಿಂದ ಜರುಗಿದ ಹೂವಿನ ಪಲ್ಲಕ್ಕಿ ಉತ್ಸವ
ಚಳ್ಳಕೆರೆ: ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ದ್ಯಾಮಲಾಂಭ ದೇವಿಯ ಜಾತ್ರೆಯ ಹೂವಿನ ಪಲ್ಲಕ್ಕಿ ಉತ್ಸವ ಸಂಭ್ರಮ ಸಡಗರದಿಂದ ಗ್ರಾಮಸ್ಥರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ | ಕಾರು ಚಾಲಕ ರವಿ ಪೊಲೀಸರಿಗೆ ಶರಣಾಗತಿ
ದ್ಯಾಮಲಾಂಭ ದೇವಿಯ ಜಾತ್ರೆಯು ಮೂರು ದಿನಗಳಿಂದ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು.
ದ್ಯಾಮಲಾಂಭ ದೇವಿಯ ಜಾತ್ರೆಯನ್ನು ಹದಿನಾಲ್ಕು ವರ್ಷಗಳ ನಂತರ ಆಚರಣೆ ಮಾಡಲಾಗುತ್ತಿದ್ದು, ದೇವಿಯ ಜಾತ್ರೆಯ ಮೊದಲ ದಿನ ನಾರಾಯಣಪುರದ ವೇದಾವತಿ ನದಿಯ ಹತ್ತಿರ ಕರೆದುಕೊಂಡು ಹೋಗಿ ಗಂಗಾ ಪೂಜೆ ನೆರವೇರಿಸಿಕೂಂಡು ಬಂದು. ದ್ಯಾಮಲಾಂಭ ದೇವಿಯ ಪಕ್ಕದಲ್ಲಿ ಇರುವ ಮತಂಗೇಮ್ಮ ದೇವಿಗೆ ಕಳಸರೋಹಣ ನೆರವೆರಿಸಾಲಾಯಿತು ಎಂದು ಪುರೋಹಿತರಾದ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ: ತಂಬಾಕು ಮಾರುವವರ ಮೇಲೆ 11 ಪ್ರಕರಣ | ದಂಡ ವಸೂಲಿ
ಪ್ರತಿ ಮನೆಯಿಂದ 200ಕ್ಕೂ ಹೆಚ್ಚು ಭಕ್ತರು ಆರತಿ ಹಿಡಿದುಕೊಂಡು ಬಂದು ಆರತಿ ಬೆಳಗಿ ದೇವಿ ಕೃಪೆಗೆ ಪಾತ್ರರಾಗಿದ್ದಾರೆ. ಸಂಜೆ ಸಮಯದಲ್ಲಿ ಹೂವಿನ ಪಲ್ಲಕ್ಕಿ ಉತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು, ಈ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಗ್ರಾಮದ ತುಂಬೆಲ್ಲ ಮಾವಿನ-ತೋರಣ ವಿದ್ಯುತ್ ದೀಪಗಳು ಮತ್ತು ವಿವಿಧ ಬಗೆಯ ಹೂಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿತ್ತು. ದೇವರಿಗೆ, ಹಾಲು-ತುಪ್ಪದ ಅಭಿಷೇಕ, ವಿವಿಧ ಬಗೆಯ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ಭಕ್ತರು ದೇವಿಯ ದರ್ಶನ ಪಡೆಯಲು ಹೂವಿನ ಹಾರ, ಪೂಜಾ ಸಾಮಗ್ರಿಗಳೊಂದಿಗೆ ವಿವಿಧ ಜಿಲ್ಲೆಯ, ಗ್ರಾಮದ ಸಮಸ್ತ ಭಕ್ತರು ದೇವಸ್ಥಾನಕ್ಕೆ ಬಂದು ದರ್ಶನವನ್ನು ಪಡೆದಿದ್ದಾರೆ.
ಇದನ್ನೂ ಓದಿ: ಭದ್ರಾ, ರೈಲು ಮಾರ್ಗ ಕಾಮಗಾರಿಗೆ ಆದ್ಯತೆ | ಸಂಸದ ಗೋವಿಂದ ಎಂ.ಕಾರಜೋಳ
ದ್ಯಾಮಲಾಂಭ ದೇವಿ ಚಿತ್ರದುರ್ಗ ಸಮೀಪದ ಹಿರೇಗುಂಟನೂರು ಗ್ರಾಮದಲ್ಲಿ ನೆಲೆಸಿದ್ದು ಗೋಪನಹಳ್ಳಿ ಗ್ರಾಮದ 300ಕ್ಕೊ ಹೆಚ್ಚು ಮನೆಗಳಿಗೆ ಆರಾಧ್ಯ ದೇವತೆ ಆಗಿದ್ದಾಳೆ.ಮದ್ಯ ಸೇವನೆ, ಮಾಂಸ ತಿಂದು ದೇವಸ್ಥಾನ ಒಳಗೆ ಯಾರು ಬರುವುದಿಲ್ಲ ಅಂತಹಾ ಶಕ್ತಿ ಪಾವಡ ಹೊಂದಿದ್ದಾಳೆ. ಪ್ರತಿ ವರ್ಷ ಹಿರೇಗುಂಟನೂರಿನಲ್ಲಿ ಜಾತ್ರೆ ನಡೆಯುತ್ತದೆ ಆಗ ದೇವಿಗೆ ತವರು ಮನೆಯ ರೀತಿಯಂತೆ ಗೋಪನಹಳ್ಳಿ ಯಿಂದ ಕರೆ ತರಲಾಗುತ್ತದೆ ಎಂದು ಕೆಂಗದ್ಯಾಮಣ್ಣ ತಿಳಿಸಿದ್ದಾರೆ.