Connect with us

    Sneha Public School; ಸ್ನೇಹ ಪಬ್ಲಿಕ್ ಶಾಲೆಯಲ್ಲಿ ಶೈಕ್ಷಣಿಕ ಕಾರ್ಯಕ್ರಮ | ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್ ನಿರ್ದೇಶಕ ಮಲ್ಲಿಕಾರ್ಜುನ ಭಾಗೀ

    ಸ್ನೇಹ ಪಬ್ಲಿಕ್ ಶಾಲೆಯಲ್ಲಿ ಶೈಕ್ಷಣಿಕ ಕಾರ್ಯಕ್ರಮ

    ಹೊಳಲ್ಕೆರೆ

    Sneha Public School; ಸ್ನೇಹ ಪಬ್ಲಿಕ್ ಶಾಲೆಯಲ್ಲಿ ಶೈಕ್ಷಣಿಕ ಕಾರ್ಯಕ್ರಮ | ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್ ನಿರ್ದೇಶಕ ಮಲ್ಲಿಕಾರ್ಜುನ ಭಾಗೀ

    CHITRADURGA NEWS | 14 SEPTEMBER 2024

    ಹೊಳಲ್ಕೆರೆ: ಪಟ್ಟಣದ ಸ್ನೇಹ ಪಬ್ಲಿಕ್ ಶಾಲೆ(Sneha Public School)ಯಲ್ಲಿ ಆಯೋಜಿಸಿದ್ದ ಮಕ್ಕಳ ಶೈಕ್ಷಣಿಕ ಕಾರ್ಯಕ್ರಮವನ್ನು ಮುಂಬೈನ ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕನ ನಿರ್ದೆಶಕರು ಹಾಗೂ ಅರಣ್ಯ ಇಲಾಖೆಯ ಮುಖ್ಯ ಅಧೀಕ್ಷಕ ಜಿ.ಮಲ್ಲಿಕಾರ್ಜನ್ ಉದ್ಘಾಟಿಸಿದರು.

    ಕ್ಲಿಕ್ ಮಾಡಿ ಓದಿ: BJP protest: ರಾಹುಲ್ ಗಾಂಧಿ ‌ದೇಶದ ಜನರ ಕ್ಷಮೆ ಕೇಳಲಿ | ಬಿಜೆಪಿ ಕಾರ್ಯಕರ್ತರ ಆಗ್ರಹ

    ನಂತರ ಮಾತನಾಡಿದ ಅವರು, ಮಕ್ಕಳು ತಮ್ಮ ಗುರಿಯನ್ನು ಸಾಧಿಸಲು ಚಿಕ್ಕ ವಯಸ್ಸಿನಿಂದಲೇ ಶ್ರಮವನ್ನು ಹಾಕಬೇಕಿದೆ, ಇದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುವುದರ ಮೂಲಕ ಜೀವನದಲ್ಲಿ ಪ್ರಗತಿಯನ್ನು ಸಾಧಿಸಬಹುದಾಗಿದೆ ಎಂದರು.

    ಒಂದು ಬೀಜವನ್ನು ಹಾಕಿ ಅದಕ್ಕೆ ಸರಿಯಾದ ರೀತಿಯಲ್ಲಿ ಪೋಷಣೆ ಮಾಡಿದರೆ ಅದು ಮುಂದಿನ ದಿನದಲ್ಲಿ ದೊಡ್ಡದಾದ ಮರವಾಗಲಿದೆ ಅದೇ ರೀತಿ ದೇಶದ ಮುಂದಿನ ಬಾವಿ ಪ್ರಜೆಗಳಾದ ನೀವು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಿದರೆ ನೀವುಗಳ ಸಹಾ ದೇಶದ ಉತ್ತಮ ಪ್ರಜೆಗಳಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ನೀವುಗಳು ದೇಶದ ಉತ್ತಮ ಪ್ರಜೆಗಳಾಗಲು ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡುವುದರ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡ್ಯೂಯಬೇಕಿದೆ ಎಂದರು.

    ಜೀವನ ಎಂದ ಮೇಲೆ ಸುಖ-ಕಷ್ಟಗಳು ಬರುವುದು ಸಾಮಾನ್ಯ, ಇದೇ ರೀತಿ ನಿಮ್ಮ ಶೈಕ್ಷಣಿಕ ವಾತಾವರಣದಲ್ಲಿಯೂ ಸಹಾ ಏಳು-ಬೀಳು ಬರುವುದು ಸಾಮಾನ್ಯ, ಈ ಹಿನ್ನಲೆಯಲ್ಲಿ ಕಷ್ಟ ಬಂದಾಗ ಎಂದೆಗುಂದದೆ ಧೈರ್ಯದಿಂದ ಅದನ್ನು ಎದುರಿಸಬೇಕಿದೆ, ಮುಂದೆ ಅದರ ಫಲ ದೊರಕಲಿದೆ.

    ಕ್ಲಿಕ್ ಮಾಡಿ ಓದಿ: Restriction; ಸೆಪ್ಟೆಂಬರ್ 15 ರಂದು ಹೆದ್ದಾರಿಯ ಎಡ ಭಾಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ | ಯಾಕೆ ಗೊತ್ತಾ…

    ನಾವು ಮಾಡುವ ಕೆಲಸವನ್ನು ಪ್ರಮಾಣಿಕ, ನಿಷ್ಠೆಯಿಂದ ಮಾಡಬೇಕಿದೆ, ಅಗ ಮಾತ್ರ ಜೀವನದಲ್ಲಿ ಯಶಸ್ಸು ದೊರಕಲು ಸಾಧ್ಯವಿದೆ. ನಿಮ್ಮ ಸಾಧನೆಯ ಹಿಂದೆ ನಿಮ್ಮ ಪೋಷಕರು, ಶಿಕ್ಷಕರ ಶ್ರಮ ಇದೆ. ಅದನ್ನು ಮರೆಯಬೇಡಿ. ನಮ್ಮ ದೇಶದಲ್ಲಿ ಶಿಕ್ಷಕರಿಗೆ ಸರಿಯಾದ ರೀತಿಯ ಸ್ಥಾನ ಸಿಗುತ್ತಿಲ್ಲ, ಇದರಿಂದ ಬೇಸರವಾಗದೆ ಅದರೂ ಸಹಾ ನಿಮ್ಮ ಪಾಲಿನ ಕೆಲಸವನ್ನು ಚಾಚು ತಪ್ಪದೆ ಮಾಡಬೇಕಿದೆ ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.

    ಬಾಲ್ಯದಲ್ಲಿಯೇ ಮುಂದೆ ನೀವು ಏನಾಗಬೇಕೆಂದು ಕನಸುಗಳನ್ನು ಕಾಣಬೇಕಿದೆ ಸಣ್ಣ-ಪುಟ್ಟ ಕನಸನ್ನು ಕಾಣದೆ ದೊಡ್ಡದಾದ ಕನಸನ್ನು ಕಾಣಿ ಅಲ್ಲದೆ ಅದನ್ನು ನನಸು ಮಾಡುವಲ್ಲಿ ಸಹಾ ಶ್ರಮವನ್ನು ಹಾಕಬೇಕಿದೆ. ಮಕ್ಕಳ ಕನಸನ್ನು ಶಿಕ್ಷಕರು ಹಾಗೂ ಪೋಷಕರು ನನಸು ಮಾಡುವಲ್ಲಿ ಮುಂದಾಗಬೇಕಿದೆ ಎಂದು ತಿಳಿಸಿದರು.

    ಶಿಕ್ಷಣ ಮಹಾ ವಿದ್ಯಾಲಯದ ಉಪನ್ಯಾಸಕ ಹಾಲೇಶ್ ಮಾತನಾಡಿ, ನಮಗೆ ಆಸಕ್ತಿ ಇರುವ ವಿಷಯದ ಕಡೆಗೆ ಹೆಚ್ಚಿನ ಗಮನವನ್ನು ನೀಡುವುದರ ಮೂಲಕ ಅದರಲ್ಲಿ ಸಾಧನೆಯನ್ನು ಮಾಡಿ ಮುಂದೆ ನಾನೇಗಾಬೇಕು ಎಂದು ಈಗಲೇ ತೀರ್ಮಾನವನ್ನು ಮಾಡಿ ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಿ ಎಂದು ಮಕ್ಕಳಿಗೆ ಹೇಳಿದರು.

    ಕ್ಲಿಕ್ ಮಾಡಿ ಓದಿ: TEMPLE: ವದ್ದಿಕೆರೆ ಶ್ರೀ ಸಿದ್ದೇಶ್ವರ ದೇವಸ್ಥಾನದ ಹುಂಡಿ ಎಣಿಕೆ | 96.32 ಲಕ್ಷ ರೂ.ಸಂಗ್ರಹ

    ಸ್ನೇಹ ಪಬ್ಲಿಕ್ ಶಾಲೆಯ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಮಕ್ಕಳಿಗೆ ಮುಂದೆ ನಾವೇನಾಗಬೇಕು ಎಂಬ ಗೊಂದಲ ಇರಬಾರದು ಅದು ಪೂರ್ಣವಾಗಿ ನಿವಾರಣೆಯಾಗಬೇಕೆಂಬ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಇದರ ಲಾಭವನ್ನು ಎಲ್ಲರು ಪಡೆಯಬೇಕಿದೆ ಎಂದರು.

    ಕಾರ್ಯಕ್ರಮದಲ್ಲಿ ದಾವಣಗೆರೆ ವಿವಿಧ ಸಹಾಯಕ ಪ್ರಾಧ್ಯಾಪಕ ಡಾ.ಪ್ರಸನ್ನ, ಸ್ನೇಹ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ವಸಂತ್, ಆಡಳಿತಾಧಿಕಾರಿ ಛಾಯಾ ಮಂಜುನಾಥ್ ಉಪಸ್ಥಿತರಿದ್ದರು.

    ನಯನ ಪ್ರಾರ್ಥಿಸಿದರು, ಪ್ರಾಂಶುಪಾಲ ವೇಣುಗೋಪಾಲ್ ಸ್ವಾಗತಿಸಿದರು, ಅರುಣ್ ವಂದಿಸಿದರು, ಮನಿಷಾ ಕಾರ್ಯಕ್ರಮ ನಿರೂಪಿಸಿದರು.

    Click to comment

    Leave a Reply

    Your email address will not be published. Required fields are marked *

    More in ಹೊಳಲ್ಕೆರೆ

    To Top