Connect with us

    ಒಂದ್ ಕೆಜಿ ರೈಸ್ ನಾ ಎಷ್ಟ್ ಜನ ಊಟ ಮಾಡ್ತಾರೆ ಅಂತಾ ಮೊದ್ಲು ಹೇಳಿ..; ನಗರಸಭೆ ಪರಿಸರ ಎಂಜಿನಿಯರ್ ಗೆ ಡಿಸಿ ಫುಲ್ ಕ್ಲಾಸ್

    ಮುಖ್ಯ ಸುದ್ದಿ

    ಒಂದ್ ಕೆಜಿ ರೈಸ್ ನಾ ಎಷ್ಟ್ ಜನ ಊಟ ಮಾಡ್ತಾರೆ ಅಂತಾ ಮೊದ್ಲು ಹೇಳಿ..; ನಗರಸಭೆ ಪರಿಸರ ಎಂಜಿನಿಯರ್ ಗೆ ಡಿಸಿ ಫುಲ್ ಕ್ಲಾಸ್

    ಚಿತ್ರದುರ್ಗನ್ಯೂಸ್.ಕಾಂ

    ಒಂದ್ ಕೆಜಿ ರೈಸ್ ನಾ ಎಷ್ಟ್ ಜನ ಊಟ ಮಾಡ್ತಾರೆ ಅಂತಾ ಮೊದ್ಲು ಹೇಳಿ..ಅಡುಗೆ ಮಾಡೋರು ನೋಡಿದ್ರೆ ಹೇಳ್ತಾರೆ..ನೀವು ಇಲ್ಲಿಗೆ ಡೈಲಿ ವಿಸಿಟ್ ಮಾಡ್ತಿಲ್ಲ ಅಂತಾ ಇದರಲ್ಲೇ ಗೊತ್ತಾಗ್ತಿದೆ…ಎಲ್ಲ ಲೆಕ್ಕ ಬೆರಳ ತುದಿಲೀ ಇರಬೇಕು..ಯಾವಾತ್ತಾದ್ರೂ ಟೆಸ್ಟ್ ನೋಡಿದ್ದೀರಾ..ಸುಮ್ಮನೆ ಇಂದಿರಾ ಕ್ಯಾಂಟಿನ್ ಗೆ ಜನ ಬರಲ್ಲ ಹೇಳ ಬೇಡಿ..ಟೇಸ್ಟ್ ಆಗಿ ಅಡುಗೆ ಮಾಡಿದ್ರೆ ಬರ್ತಾರೆ…ಟೇಸ್ಟ್ ಅಂದ್ರೆ ಬೇರೆ ಏನೂ ಇಲ್ಲ, ಉಪ್ಪು, ಹುಳಿ ಸರಿಯಾದ ಪ್ರಮಾಣದಲ್ಲಿ ಹಾಕಿದರೆ ಸಾಕು…ಇನ್ನೂ ನಾ ಸುಮ್ಮನೆ ಇರಲ್ಲ…ಹೀಗೆ ನಗರಸಭೆ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ.

    ನಗರದ ಪ್ರವಾಸಿ ಮಂದಿರ ಬಳಿ ಇರುವ ಇಂದಿರಾ ಕ್ಯಾಂಟೀನ್‍ಗೆ ಶನಿವಾರ ಬೆಳ್ಳಂ ಬೆಳಿಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ನಗರಸಭೆ ಪರಿಸರ ಎಂಜಿನಿಯರ್ ಜಾಫರ್ ಅವರಿಗೆ ಕ್ಲಾಸ್ ತೆಗೆದುಕೊಂಡರು.

    ಅಡುಗೆ ತಯಾರಿಕೆ ಕೊಠಡಿಗೆ ಭೇಟಿ ನೀಡಿ, ಆಹಾರದ ಗುಣಮಟ್ಟ, ಶುಚಿ-ರುಚಿ ಕೊರತೆ, ದಾಖಲೆಗಳ ಅಸಮರ್ಪಕ ನಿರ್ವಹಣೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ.  ಕ್ಯಾಂಟೀನ್‍ನಲ್ಲಿ ಉಪಹಾರ ಹಾಗೂ ಊಟದ ತಯಾರಿಕೆ ಉತ್ತಮವಾಗಿಲ್ಲ, ಉಪಹಾರ ರುಚಿಕಟ್ಟಾಗಲು ಅಗತ್ಯವಿರುವ ಸಾಮಗ್ರಿಗಳ ಸಮರ್ಪಕ ಬಳಕೆಯಾಗುತ್ತಿಲ್ಲ, ಹೀಗಾಗಿ ಸಾರ್ವಜನಿಕರು ಇಂದಿರಾ ಕ್ಯಾಂಟೀನ್‍ಗೆ ಹೆಚ್ಚು ಬರುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ಕಡಿಮೆ ದರದಲ್ಲಿ ಬಡವರಿಗೆ ಉತ್ತಮ ಗುಣಮಟ್ಟದ ಹಾಗೂ ರುಚಿಯಾದ ಊಟೋಪಹಾರ ಒದಗಿಸಬೇಕು ಎಂಬ ಸದುದ್ದೇಶದಿಂದ ಸರ್ಕಾರ ವಿವಿಧೆಡೆ ಇಂದಿರಾ ಕ್ಯಾಂಟೀನ್ ಗಳನ್ನು ಪ್ರಾರಂಭಿಸಿ, ನಡೆಸಲಾಗುತ್ತಿದೆ.  ಆದರೆ ಸಿಬ್ಬಂದಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕ್ಯಾಂಟೀನ್ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ.  ಕ್ಯಾಂಟೀನ್‍ಗೆ ಎಷ್ಟು ಆಹಾರ ಧಾನ್ಯ ಹಾಗೂ ಅಡುಗೆ ಸಾಮಗ್ರಿ ಸ್ವೀಕರಿಸಲಾಗಿದೆ, ಎಷ್ಟು ಪ್ರಮಾಣದಲ್ಲಿ ಎಷ್ಟು ಜನರಿಗೆ ಊಟೋಪಹಾರ ವಿತರಿಸಲಾಗಿದೆ ಎಂಬುದರ ಬಗ್ಗೆ ಸಮರ್ಪಕವಾಗಿ ದಾಖಲೆಗಳನ್ನು ನಿರ್ವಹಿಸಿಲ್ಲ ಎಂದು
    ಅಸಮಧಾನ ವ್ಯಕ್ತಪಡಿಸಿದರು.

    ಇಂದಿರಾ ಕ್ಯಾಂಟೀನ್‍ಗೆ ಆಹಾರದ ಗುಣಮಟ್ಟ ಪರಿಶೀಲನೆಗೆ ಸಂಬಂಧಪಟ್ಟ ಅಧಿಕಾರಿ ಪ್ರತಿ ನಿತ್ಯ ಭೇಟಿ ಮಾಡಿ ಪರಿಶೀಲಿಸಬೇಕು,  ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ಪೌರಾಯುಕ್ತರು, ಮುಖ್ಯಾಧಿಕಾರಿಗಳು ವಾರಕ್ಕೊಮ್ಮೆ ಕ್ಯಾಂಟೀನ್‍ಗೆ ಭೇಟಿ ನೀಡಿ, ಅಲ್ಲಿಯೇ ಉಪಹಾರ ಮತ್ತು ಊಟ ಸೇವಿಸಿ ಪರಿಶೀಲಿಸಬೇಕು.  ಅಲ್ಲದೆ ಅಡುಗೆ ಸಾಮಗ್ರಿಗಳ ದಾಸ್ತಾನು, ಬಳಕೆ, ಊಟೋಪಹಾರ ವಿತರಣೆ ಪ್ರಮಾಣ ಕುರಿತಂತೆ ನಿತ್ಯ ರಿಜಿಸ್ಟರ್ ನಲ್ಲಿ ಮಾಹಿತಿ ದಾಖಲಾಗಬೇಕು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

    ಜಿಲ್ಲಾಧಿಕಾರಿ ದಿವ್ಯಪ್ರಭು ತರಾಟೆಗೆ ತೆಗೆದುಕೊಂಡ ವೀಡಿಯೋ ನೋಡಿ.

    ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆರೋಗ್ಯ ನಿರೀಕ್ಷಕರು ಸ್ವಚ್ಛತೆ ಹಾಗೂ ಶುಚಿತ್ವ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಿಗಳು ನಿತ್ಯ ಕ್ಯಾಂಟೀನ್‍ನಲ್ಲಿನ ಸ್ವಚ್ಛತೆ ಬಗ್ಗೆ ಪರಿಶೀಲಿಸಬೇಕು ಎಂದು ತಾಕೀತು ಮಾಡಿದರು.

    ಜಿಲ್ಲೆಯಲ್ಲಿನ ಇಂದಿರಾ ಕ್ಯಾಂಟೀನ್‍ಗಳಿಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು, ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಪಟ್ಟ ಸಿಬ್ಬಂದಿ, ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು  ಹೇಳಿದರು.

    ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ನಗರಸಭೆ ಪೌರಾಯುಕ್ತೆ ರೇಣುಕಾ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top