ಮುಖ್ಯ ಸುದ್ದಿ
ಸಿಟಿ ಇನ್ಸ್ಟಿಟ್ಯೂಟ್(City club) ಚುನಾವಣೆ | ನಿರ್ದೇಶಕರ ಫಲಿತಾಂಶ ಪ್ರಕಟ
CHITRADURGA NEWS | 01 DECEMBER 2024
ಚಿತ್ರದುರ್ಗ: ಜಿಲ್ಲೆಯ ಪ್ರತಿಷ್ಠಿತ ಸಿಟಿ ಇನ್ಸ್ಟಿಟ್ಯೂಟ್ (City club) ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿದೆ.
ನ.30 ಶನಿವಾರ ನಡೆದ ಚುನಾವಣೆಯಲ್ಲಿ ಕಾರ್ಯದರ್ಶಿಯಾಗಿ ಎನ್.ಎಲ್.ವೆಂಕಟೇಶ ರೆಡ್ಡಿ, ಉಪಾಧ್ಯಕ್ಷರಾಗಿ ಟಿ.ಎಸ್.ಎನ್.ಜಯ್ಯಣ್ಣ ಹಾಗೂ ಖಜಾಂಚಿಯಾಗಿ ಅಜಿತ್ ಕುಮಾರ್ ಜೈನ್ ಆಯ್ಕೆಯಾಗಿದ್ದರು.
ಇನ್ನೂ ಕ್ಲಬ್ ನ ಏಳು ಜನ ನಿರ್ದೇಶಕರ ಫಲಿತಾಂಶ ಪ್ರಕಟವಾಗುವುದು ವಿಳಂಬವಾಗಿತ್ತು.
ಈಗ ನಿಮ್ಮ ಚಿತ್ರದುರ್ಗ ನ್ಯೂಸ್ ಗೆ ಸಿಟಿ ಇನ್ಸ್ಟಿಟ್ಯೂಟ್ ನಿರ್ದೇಶಕರಾಗಿ ಆಯ್ಕೆಯಾದವರ ಪಲಿತಾಂಶ ಲಭ್ಯವಾಗಿದೆ.
ಒಟ್ಟು ಏಳು ನಿರ್ದೇಶಕರ ಹುದ್ದೆಗಳಿಗೆ 15 ಮಂದಿ ಸ್ಪರ್ಧೆ ಮಾಡಿದ್ದರು.
ನಿರ್ದೇಶಕರ ವಿವರ:
ಡಾ.ಮಧುಸೂದನ ರೆಡ್ಡಿ ಎಸ್.ವೈ. (ಪಡೆದ ಮತಗಳು 306).
ಎಚ್.ರಾಮಮೂರ್ತಿ (ಪಡೆದ ಮತಗಳು 269)
ನ್ಯಾಯವಾದಿ ಚಂದ್ರಶೇಖರ್ ಎನ್ (ಪಡೆದ ಮತಗಳು 257)
ಲೋಕೇಶ್ ಎಚ್.ಎನ್. (ಪಡೆದ ಮತಗಳು 203)
ದೇವರಾಜ ಎಸ್ (ಪಡೆದ ಮತಗಳು 200)
ಟಿ.ಇ.ವಿಜಯಕುಮಾರ್ (ಪಡೆದ ಮತಗಳು 197)
ಸಿ.ಚಂದ್ರಪ್ಪ (ಡಿಶ್ ಚಂದ್ರು) (ಪಡೆದ ಮತಗಳು 194).
ಇದನ್ನೂ ಓದಿ: ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಮಾಲತೇಶ್ ಮುದ್ದಜ್ಜಿ ಅವಿರೋಧ | ರಾಜ್ಯ ಪರಿಷತ್ತಿಗೆ ಮೂಡದ ಒಮ್ಮತ
ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಕಾರ್ಯನಿರ್ವಹಿಸಿದ್ದರು.