ಮುಖ್ಯ ಸುದ್ದಿ
2027ರ ವರ್ಷಾಂತ್ಯಕ್ಕೆ ನೇರ ರೈಲ್ವೆ ಕಾಮಗಾರಿ ಪೂರ್ಣ | ಸಚಿವ ವಿ.ಸೋಮಣ್ಣ
CHITRADURGA NEWS | 20 JULY 2024
ಚಿತ್ರದುರ್ಗ: ದಾವಣಗೆರೆ–ಚಿತ್ರದುರ್ಗ– ತುಮಕೂರು ನೇರ ರೈಲ್ವೆ ಕಾಮಗಾರಿಯನ್ನು 2027 ರ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ನಗರದ ನೀಲಕಂಠೇಶ್ವರ ದೇವಾಲಯಕ್ಕೆ ಶನಿವಾರ ಭೇಟಿ ನೀಡಿ ನೀಲಕಂಠೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೇರ ರೈಲ್ವೆ ಮಾರ್ಗಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಈಗಾಗಲೇ ಯೋಜನೆಯನ್ನು ಒಂದು ಹಂತಕ್ಕೆ ತಂದಿದೆ. ದಾವಣಗೆರೆಯಲ್ಲಿ ರೈಲ್ವೆ ಮಾರ್ಗಕ್ಕೆ ಅಗತ್ಯವಾಗಿ ಬೇಕಾದ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ತುಮಕೂರಿನಿಂದ ಚಿತ್ರದುರ್ಗದವರೆಗೂ ಮಾಡಿದ್ದೇವೆ. ಶಿರಾದಿಂದ ಸ್ವಲ್ಪ ಭಾಗ ಭೂಮಿ ವಶಪಡಿಸಿಕೊಳ್ಳಬೇಕಿದೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.
ಇದನ್ನೂ ಓದಿ: ಡೆತ್‌ನೋಟ್ ಓದುತ್ತಿದ್ದಂತೆ ಸಿಎಂ ಮೌನ | ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ
‘ರಾಮದುರ್ಗ– ತುಮಕೂರು 290 ಕಿ.ಮೀ. ದಾವಣಗೆರೆಯಿಂದ ತುಮಕೂರು ನೇರ ರೈಲ್ವೆ ಮಾರ್ಗ 175 ಕಿ.ಮೀ. ಇವೆರಡನ್ನು 2026 ಡಿಸೆಂಬರ್ ಒಳಗಾಗಿ ಪೂರ್ಣ ಮಾಡುವ ಗುರಿ ಇದೆ. ಆದರೂ 2027ರವರೆಗೆ ಸಮಯವನ್ನು ಪಡೆದಿದ್ದೇನೆ’ ಎಂದು ತಿಳಿಸಿದರು.
ಇದನ್ನೂ ಓದಿ: ಕೋಟೆನಾಡಿನಲ್ಲಿ ಚುರುಕಾಯ್ತು ಮಳೆ | ಶೀತಗಾಳಿಗೆ ಜನ ಹೈರಾಣು
ರೇಲ್ವೆ ಅಂಡರ್‌ಪಾಸ್ ಸಮಸ್ಯೆ ಜಿಲ್ಲೆಯಲ್ಲಿ ಹೆಚ್ಚಾಗಿದೆ ಎಂಬುದು ಗಮನಕ್ಕೆ ಬಂದಿದೆ. ಹಂತ ಹಂತವಾಗಿ ಸಮಸ್ಯೆ ಬಗೆಹರಿಸಿ ಜನರಿಗೆ ಅನುಕೂಲ ಮಾಡಲಾಗುತ್ತದೆ ಎಂದರು.
ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ, ಕಾರ್ಯದರ್ಶಿ ಪಿ.ವಿರೇಂದ್ರ ಕುಮಾರ್, ಖಜಾಂಚಿ ಕೆ.ಎಂ.ತಿಪ್ಪೇಸ್ವಾಮಿ, ನಿರ್ದೇಶಕರಾದ ಕೆ.ಎನ್.ವಿಶ್ವನಾಥಯ್ಯ, ಜಿ.ಎಂ.ಪ್ರಕಾಶ್, ಎಸ್.ವಿ.ಸಿದ್ದೇಶ್, ಲತಾ ಉಮೇಶ್, ನಿರಂಜನ ದೇವರಮನೆ, ಎಸ್.ವಿ.ಕೋಟ್ರೇಶ್, ಸಿದ್ದಪ್ಪ, ಗಾಣಿಗ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ, ವಿರೂಪಾಕ್ಷಪ್ಪ, ಅಕ್ಕಮಹಾದೇವಿ ಮಹಿಳಾ ಸಮಾಜದ ಉಪಾಧ್ಯಕ್ಷೆ ಮೋಕ್ಷಾ ರುದ್ರಸ್ವಾಮಿ, ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ ಕಾರ್ಯದರ್ಶಿ ವಿಜಯ ಕುಮಾರ್, ನಿರ್ದೇಶಕ ಪೃಥ್ವೀಶ್ ಇದ್ದರು.