Connect with us

    ಸಿರಿಧಾನ್ಯ ಬಳಕೆಯಿಂದ ಸಕ್ಕರೆ ಕಾಯಿಲೆ ನಿಯಂತ್ರಣ ಸಾಧ್ಯ | ಡಾ.ಬ್ರಿಜೇಶ್

    ಮಧುಮೇಹ ನಿಯಂತ್ರಣ ಮಾಹಿತಿ ಕಾರ್ಯಾಗಾರ

    ಮುಖ್ಯ ಸುದ್ದಿ

    ಸಿರಿಧಾನ್ಯ ಬಳಕೆಯಿಂದ ಸಕ್ಕರೆ ಕಾಯಿಲೆ ನಿಯಂತ್ರಣ ಸಾಧ್ಯ | ಡಾ.ಬ್ರಿಜೇಶ್

    CHITRADURGA NEWS | 18 MARCH 2024

    ಚಿತ್ರದುರ್ಗ: ಸಿರಿಧಾನ್ಯಗಳಾದ ರಾಗಿ, ಜೋಳ, ಸಜ್ಜೆ, ನವಣೆ, ಬರಗು, ಸಾಮೆ, ಆರ್ಕ, ಊದಲು, ಕೊರಲೆ ಇವುಗಳನ್ನು ಹೆಚ್ಚು ಬಳಸುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡಬಹುದು ಎಂದು ಎಂಡೋಕ್ರೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಬ್ರಿಜೇಶ್ ಸಲಹೆ ನೀಡಿದರು.

    ಇದನ್ನೂ ಓದಿ: ದುರ್ಗದ ಎಂಪಿ ಟಿಕೇಟ್ ಯಾರಿಗೆ

    ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ. ಟ್ರಸ್ಟ್, ಧರ್ಮಸ್ಥಳ ಸಿರಿ ಮಿಲೆಟ್ ಎಂಡೋಕ್ರೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪತಂಜಲಿ ಯೋಗ ಕೇಂದ್ರಗಳ ಸಹಯೋಗದೊಂದಿಗೆ ವಾಸವಿ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ ಪೌಷ್ಠಿಕಾಂಶ ಭರಿತ ಸಿರಿಧಾನ್ಯ ಆಹಾರದಿಂದ ಮಧುಮೇಹ ನಿಯಂತ್ರಣ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ.

    ಸಕ್ಕರೆ ಕಾಯಿಲೆ ಇರುವವರಿಗೆ ಅತಿಯಾದ ಮೂತ್ರ ವಿಸರ್ಜನೆ ಯಾಗುತ್ತಿರುತ್ತದೆ, ಬಾಯಾರಿಕೆ, ದೇಹದ ತೂಕದಲ್ಲಿ ಏರುಪೇರು, ಆಯಾಸವಾಗುವುದು ಇವು ಸಕ್ಕರೆ ಕಾಯಿಲೆಯ ಲಕ್ಷಣಗಳಾಗಿದ್ದು, ಇದರ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿಸಬೇಕಿದೆ.

    ಇದನ್ನೂ ಓದಿ: ಹನುಮಲಿ ಷಣ್ಮುಖಪ್ಪ ಅವರಿಗೆ ಎಂಎಲ್‍ಸಿ ಸ್ಥಾನ ಕೊಡಿ

    ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳದಿದ್ದರೆ ಹೃದಯಾಘಾತ, ಪಾಶ್ರ್ವವಾಯು, ಕಣ್ಣು ಮತ್ತು ನಗರಗಳ ಸಮಸ್ಯೆಗಳಿಗೆ ಬಲಿಯಾಗಬಹುದು ಎಂದರು.

    ಧರ್ಮಸ್ಥಳ ಸಿರಿ ಮಿಲೆಟ್ ನಿರ್ದೇಶಕ ದಿನೇಶ್ ಮಾತನಾಡಿ, ಹಿಂದಿನ ಕಾಲದಲ್ಲಿ ಪೂರ್ವಜರು ಮಕ್ಕಳಿಗೆ ನೀಡುತ್ತಿದ್ದ ಆಹಾರ ಈಗ ಇಲ್ಲದಂತಾಗುತ್ತಿದೆ. ದೇಹ ದಂಡನೆಯಾಗುತ್ತಿಲ್ಲ, ಎಲ್ಲರೂ ವೈಯಕ್ತಿಕ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು, ಈ ಮೊದಲು ಕೊಟ್ಟಿಗೆ ಗೊಬ್ಬರ ಬಳಿಸಿ ಆಹಾರ ಧಾನ್ಯಗಳನ್ನು ರೈತರು ಬೆಳೆಯುತ್ತಿದ್ದರು ಆದರೆ ಆಹಾರವೆನ್ನುವುದು ಈಗ ವಿಷವಾಗಿ ವ್ಯಾಪಾರಿಕರಣ, ಹಣ ಗಳಿಸುವ ದಂದೆಯಾಗಿರುವುದರಿಂದ ಪೌಷ್ಠಿಕಾಂಶವಿಲ್ಲದ ಆಹಾರ ಸೇವಿಸುತ್ತಿರುವ ಮನುಷ್ಯ ಒಂದಲ್ಲ ಒಂದು ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾನೆಂದು ಹೇಳಿದರು.

    ಇದನ್ನೂ ಓದಿ: ಸಂವಿಧಾನದಿಂದ ಬದುಕು ನೆಮ್ಮದಿ

    ಕೊಪ್ಪಳ, ದಾವಣಗೆರೆ, ಚಿಕ್ಕನಾಯಕನಹಳ್ಳಿಯಲ್ಲಿ ರೈತರಿಂದ ಸಿರಿಧಾನ್ಯ ಬೆಳೆಸಿ ರೈತೋತ್ಪಾದಕ ಕಂಪನಿ ಆರಂಭಿಸಿದ್ದೇವೆ. ಸಿರಿಧಾನ್ಯ ಬೆಳೆಗಾರರ ಸಂಘ ರಾಜ್ಯದಲ್ಲಿದೆ. ರಾಸಾಯನಿಕ ಭೂಮಿಗೆ ಬೀಳಬಾರದು, ಆಗ ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳುವುದಿಲ್ಲ. ಕೀಟನಾಶಕಗಳ ಕಂಪನಿ ಜಾಸ್ತಿಯಾಗಿದೆ. ಸಿರಿಧಾನ್ಯಗಳ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

    ಇದನ್ನೂ ಓದಿ: ಗಡಿಯಲ್ಲಿ ಪೊಲೀಸ್ ಸರ್ಪಗಾವಲು

    ಈ ಸಂದರ್ಭದಲ್ಲಿ ಎಲ್ಲರಿಗೂ ರಕ್ತ ತಪಾಸಣೆ ನಡೆಸಲಾಯಿತು.

    ಕಾರ್ಯಗಾರದಲ್ಲಿ ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷರಾದ ಸತ್ಯನಾರಾಯಣಶೆಟ್ಟಿ , ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಕೆ.ಆರ್.ಮಂಜುನಾಥ್, ಸದಸ್ಯೆ ರೂಪ ಜನಾರ್ಧನ್, ತಾಲ್ಲೂಕು ಯೋಜನಾಧಿಕಾರಿ ಬಿ.ಅಶೋಕ್ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top