Connect with us

    Navratri; ನವರಾತ್ರಿ ಅಂಗವಾಗಿ ಕಬೀರಾನಂದ ಮಠದಲ್ಲಿ ದೇವಿ ಪುರಾಣ ಪಾರಾಯಣ

    ನವರಾತ್ರಿ ಅಂಗವಾಗಿ ಕಬೀರಾನಂದ ಮಠದಲ್ಲಿ ದೇವಿ ಪುರಾಣ ಪಾರಾಯಣ

    ಮುಖ್ಯ ಸುದ್ದಿ

    Navratri; ನವರಾತ್ರಿ ಅಂಗವಾಗಿ ಕಬೀರಾನಂದ ಮಠದಲ್ಲಿ ದೇವಿ ಪುರಾಣ ಪಾರಾಯಣ

    CHITRADURGA NEWS | 04 OCTOBER 2024

    ಚಿತ್ರದುರ್ಗ: ದೇವಿ ಪುರಾಣ ಕೇಳುವ, ವಾಚನ ಮಾಡುವ, ಆಲಿಸುವುದರಿಂದ ನಮ್ಮಲ್ಲಿನ ಚಿಂತೆಯನ್ನು ದೂರ ಮಾಡುವ ಚಿಂತಾಮಣೆಯಾಗಿದೆ ಎಂದು ಸಾಹಿತಿಗಳು, ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ಕಾರ್ಯದರ್ಶಿ ಹುರಳಿ ಬಸವರಾಜು ತಿಳಿಸಿದರು.

    ಕ್ಲಿಕ್ ಮಾಡಿ ಓದಿ: Doctor’s; ವೈದ್ಯರ ಸೇವೆ ನಿಸ್ವಾರ್ಥದಾಗಿರಬೇಕು | ಕಬೀರಾನಂದ ಶ್ರೀಗಳು

    ನಗರದ ಕಬೀರಾನಂದಾಶ್ರಮದ(Kabirananda math) ಶ್ರೀ ಭಗವತಿ ಬಗಳಾಂಬಿಕಾದೇವಿ ದೇವಸ್ಥಾನದಲ್ಲಿ ಇಂದು ಸಂಜೆಯಿಂದ ವಿಜಯದಶಮಿಯವರೆಗೆ ಹಮ್ಮಿಕೊಂಡಿದ್ದ ಶರಣ ನವರಾತ್ರಿ(Navratri) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,

    ನಮ್ಮಲ್ಲಿ ವಿವಿಧವಾದ ಹಬ್ಬಗಳಿಗೆ ಇದನ್ನು ನಮ್ಮ ಪೂರ್ವಜರು ಮಾಡಿದ್ದಾರೆ. ಇದನ್ನು ಮಾಡುವುದರಿಂದ ನಮ್ಮ ಮನೆ ಹಾಗೂ ಮನಗಳು ಶುದ್ದವಾಗಿ ಇರುತ್ತವೆ.

    ಕಾಲ ಕಾಲಕ್ಕೆ ಮಾನವರಾದ ನಾವುಗಳು ಮನೆಯನ್ನು ಶುಚಿ ಮಾಡಲಿ, ಅದೇ ರೀತಿ ಭಗವಂತನ ನಾಮ ಸ್ಮರಣೆ ಮಾಡುವುದರ ಮೂಲಕ ನಮ್ಮ ಮನ ಸಹಾ ಶುಚಿಯಾಗಿ ಇಟ್ಟುಕೊಳ್ಳಲೆಂದು ಹಬ್ಬಗಳನ್ನು ಮಾಡಲಾಗುತ್ತದೆ.

    ಕ್ಲಿಕ್ ಮಾಡಿ ಓದಿ: Free Eye Surgery; ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ

    ಹಿಂದೂ ಧರ್ಮದಲ್ಲಿ ಹಬ್ಬಗಳಿಗೆ ಕೊರತೆ ಇಲ್ಲ ಪ್ರತಿ ದಿನವೂ ಸಹಾ ಹಬ್ಬವಾಗಿದೆ. ಹಬ್ಬಗಳ ಆಚರಣೆಯಿಂದ ಬಂಧು-ಬಳಗದವರು ಸೇರಿಕೊಳ್ಳುವ ರೀತಿಯಲ್ಲಿ ಮಾಡಿದ್ದಾರೆ. ಹಿಂದಿನ ಕಾಲದಲ್ಲಿ ಈ ಜಾಗ ಕರುವಿನ ಕಟ್ಟೆ ಎಂದು ಪ್ರಸಿದ್ದಿಯಾಗಿತ್ತು ಆದರೆ ಈಗ ಇದು ಕರುವಿನ ಕಟ್ಟೆಯಾಗಿ ಎಲ್ಲರಿಗೂ ಅರಿವನ್ನು ನೀಡುವಂತ ಕಟ್ಟೆಯಾಗಿದೆ.

    ಕಬೀರಾನಂದ ಆಶ್ರಮವೂ ಶಿವರಾತ್ರಿ ಮಹೋತ್ಸವದಡಿಯಲ್ಲಿ ಏಳು ದಿನಗಳ ಕಾಲ ವಿವಿಧ ವಿದ್ವಾಂಸರಿಂದ ಪಂಡಿತರಿಂದ ಸಾಹಿತಿಗಳಿಂದ ಜ್ಞಾನದ ದಾಸೋಹವನ್ನು ನೀಡುತ್ತಾರೆ. ಅದೇ ರೀತಿ ಈ ನವರಾತ್ರಿಯ 10 ದಿನಗಳ ಕಾಲ ದೇವಿಯ ಪುರಾಣವನ್ನು ವಾಚನ ಮಾಡಿಸುವುದರ ಮೂಲಕ ಭಕ್ತಾಧಿಗಳಿಗೆ ದೇವಿಯ ಸ್ಮರಣೆಯನ್ನು ಮಾಡಿಸುತ್ತಾರೆ. ಇದರಿಂದ ಕರುವಿನಕಟ್ಟೆ ಇಂದು ಎಲ್ಲರ ಅರಿವಿನ ಕಟ್ಟೆಯಾಗಿದೆ ಎಂದು ತಿಳಿಸಿದರು.

    ದೇವಿಯೂ ವಿವಿಧೆಡೆಗಳಲ್ಲಿ ವಿವಿಧ ಹೆಸರಿನಿಂದ ಭಕ್ತರಿಂದ ಪೂಜೆಯನ್ನು ಸ್ವೀಕಾರ ಮಾಡುತ್ತಾಳೆ, ಕಾಳಿ, ದುರ್ಗಾ, ಪಾರ್ವತಿ, ದೇವಿ ಹೀಗೆ ವಿವಿಧ ಹೆಸರಿನಲ್ಲಿ ಪೂಜೆಯನ್ನು ಪಡೆಯುವ ದೇವಿಯ ಆರಾಧನೆಯನ್ನು ಈ 9 ದಿನಗಳ ಮಾಡುವುದರ ಮೂಲಕ ತಮ್ಮ ಇಷ್ಠಾರ್ಥಗಳನ್ನು ಪಡೆಯಬಹುದಾಗಿದೆ.

    ದೇವಿ ಪುರಾಣ ಪಾರಾಯಣ ಮಾಡುವುದಿಂದ ನಮ್ಮ ಶತೃಗಳು ನಾಶವಾಗುತ್ತಾರೆ, ನಮ್ಮಲ್ಲಿನ ಭಯ ದೂರವಾಗುತ್ತದೆ, ಶಾಂತಿ ನೆಮ್ಮದಿ ಮೂಡುತ್ತದೆ, ವರ್ಷ ಪೂರ್ತಿಯಾಗಿ ಈ ದೇವಿಯ ಪುರಾಣ ವಾಚನ ಮಾಡುವುದರಿಂದ ಮನೆ ಹಾಗೂ ಮನದಲ್ಲಿ ನೆಮ್ಮದಿಯ ವಾತಾವರಣ ಮೂಡುತ್ತದೆ ಎಂದು ಹುರುಳಿ ಬಸವರಾಜು ಹೇಳಿದರು.

    ಕ್ಲಿಕ್ ಮಾಡಿ ಓದಿ: ಖಾಯಾಂ ಉಪನ್ಯಾಸಕರ ನೇಮಕಾತಿಗೆ ABVP ಆಗ್ರಹ

    ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು ವಹಿಸಿದ್ದರು.

    ಗೊಲ್ಲರಹಟ್ಟಿಯ ಸಿ ಈರಣ್ಣ ಮಲ್ಲಾಪುರರವರು ದೇವಿಯ ಚರಿತ್ರೆಯನ್ನು ಪಠಿಸಿದರು.

    ಅ.7 ಸೋಮವಾರ ಬೆಳಿಗ್ಗೆ 7.30 ರಿಂದ 10.30ರವರೆಗೆ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಸಂಸ್ಕೃತ ಪಾಠಶಾಲೆಯ ಶಿಕ್ಷಕ ಸುಬ್ರಾಯ ತಿಮ್ಮಣ್ಣ ಭಟ್ಟರಿಂದ ಚಂಡಿಕಾ ಹೋಮ ನಡೆಯಲಿದೆ.

    ಕ್ಲಿಕ್ ಮಾಡಿ ಓದಿ: APMC: ಮಾರುಕಟ್ಟೆ ಧಾರಣೆ | ಶೇಂಗಾ, ಮೆಕ್ಕೆಜೋಳದ ಧಾರಣೆ ಎಷ್ಟಿದೆ ?

    ಅ.12ರಂದು ಸಂಜೆ 5 ಗಂಟೆಗೆ ಶ್ರೀ ಮಠದ ಕತೃಗಳಾದ ಶ್ರೀ ಸದ್ಗುರು ಕಬೀರಾನಂದ ಶ್ರೀಗಳ 118ನೇ ವರ್ಷದ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ನಿತ್ಯ ಸಂಜೆ ಸಂಸ್ಕೃತ ಪಾಠಶಾಲೆಯ ಶಿಕ್ಷಕಿಯಾದ ಬಿ.ಕೆ.ಸುಮನ ಅವರಿಂದ ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ ನಡೆಯಲಿದೆ.

    ಅ.12ರ ಸಂಜೆ ಬನ್ನಿ ಮುಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top