Connect with us

    ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಿ | ಎಂ.ಫಣಿಂಧರ್ ಕುಮಾರ್

    ವಿಜ್ಞಾನ ದಿನಾಚರಣೆ ನಿಮಿತ್ತ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ

    ಚಳ್ಳಕೆರೆ

    ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಿ | ಎಂ.ಫಣಿಂಧರ್ ಕುಮಾರ್

    CHITRADURGA NEWS | 02 MACH 2024

    ನಾಯಕನಹಟ್ಟಿ: ವಿದ್ಯಾರ್ಥಿಗಳು ಆರಂಭಿಕ ಹಂತದಲ್ಲಿ ಸಣ್ಣ ಸಣ್ಣ ಪ್ರಯೋಗಗಳು ಮತ್ತು ಮಾದರಿಗಳನ್ನು ರಚಿಸಲು ಮುಂದಾಗಬೇಕು. ಆಗ ವಿಜ್ಞಾನದ ಪರಿಚಯವಾಗಿ ವೈಜ್ಞಾನಿಕ ಮನೋಭಾವನೆಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಎಸ್.ಟಿ.ಎಸ್.ಆರ್ ವಿದ್ಯಾಸಂಸ್ಥೆಯ ಶಿಕ್ಷಕ ಎಂ.ಫಣೀಂಧರ್ ಕುಮಾರ್ ಹೇಳಿದರು.

    ಇದನ್ನೂ ಓದಿ: ಯುವ ಸೌರಭ ಕೇವಲ ಒಂದು ದಿನಕ್ಕೆ ಸೀಮತವಾಗಬಾರದು | ಡಾ.ಎಂ.ಯು. ಲೋಕೇಶ್

    ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳಿಂದ ರಚಿತವಾದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

    ವಿಧ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣದಿಂದ ಮೂಲ ವಿಜ್ಞಾನದ ಅಧ್ಯಯನದಲ್ಲಿ ತೊಡಗಬೇಕು, ವೈಜ್ಞಾನಿಕ ಚಿಂತನೆ ಮತ್ತು ವೈಚಾರಿಕ ಸಾಮಥ್ರ್ಯ ಲಭಿಸುತ್ತದೆ. ಆಗ ಮೌಢ್ಯತೆಗಳು, ಕಂದಾಚಾರಗಳು, ಮೂಢನಂಬಿಕೆಗಳ ಹಿಂದೆ ಇರುವ ತರ್ಕ ಅರ್ಥವಾಗಿ ಮೋಸ ಹೋಗುವುದು ತಪ್ಪುತ್ತದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಗಮನವಿಟ್ಟು ವಿಜ್ಞಾನ ತರಗತಿಗಳನ್ನು ಕೇಳಬೇಕು. ಮತ್ತು ಆಸಕ್ತಿವಹಿಸಿ ವಿಜ್ಞಾನ ವಿಷಯವನ್ನು ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಇದನ್ನೂ ಓದಿ: ಪತ್ಯೇಕ ಚುನಾವಣೆ ಕಚೇರಿ ತೆರೆದರೆ ನಿರಾಸೆ ಕಟ್ಟಿಟ್ಟ ಬುತ್ತಿ | ಬಿಜೆಪಿ ನಾಯಕ ಪ್ರೀತಂ ಗೌಡ ಎಚ್ಚರಿಕೆ

    ಸಮಾಜದಲ್ಲಿರುವ ಮೌಢ್ಯ ಅಂಧಕಾರವನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ವಿನಾಶಮಾಡಲು ವಿಜ್ಞಾನ ಅತ್ಯಂತ ಸಹಕಾರಿಯಾಗಲಿದೆ ಎಂದರು.

    ಪ.ಪಂ.ಸದಸ್ಯ ಸೈಯದ್‍ಅನ್ವರ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಕಣ್ಮನ ಸೆಳೆಯುವ ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶನ ನೀಡುತ್ತಿರುವುದು ತುಂಬಾ ಸಂತಸದ ಸಂಗತಿ. ಹಾಗೇ ಶಾಲಾ ಹಂತದಲ್ಲಿ ಪ್ರತಿ ಮಗುವೂ ಎಲ್ಲ ವಿಷಯಗಳಲ್ಲಿ ತೀವ್ರ ಕುತೂಹಲಿಗಳಾಗಿರಬೇಕು. ಕುತೂಹಲ ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಅದರಲ್ಲೂ ವಿಜ್ಞಾನ ಅಧ್ಯಯನ ಕ್ರಮಬದ್ಧ ಮತ್ತು ಶಿಸ್ತು ಕಲಿಕೆಗೆ ಪೂರಕವಾಗಿರುತ್ತದೆ ಎಂದರು.

    ಇದನ್ನೂ ಓದಿ: ಆಸ್ಪತ್ರೆಯಲ್ಲಿ ಬಿಜೆಪಿ ನಾಯಕಿ ಭಾರ್ಗವಿ ದ್ರಾವಿಡ್ ಆರೋಗ್ಯ ವಿಚಾರಿಸಿದ | ಜಿ.ಹೆಚ್.ತಿಪ್ಪಾರೆಡ್ಡಿ

    ಡಾನ್‍ಬಾಸ್ಕೋ ಶಾಲೆ ಕಾರ್ಯದರ್ಶಿ ಎಸ್.ಟಿ.ಬೋರಸ್ವಾಮಿ ಮಾತನಾಡಿದರು.

    ಈ ಸಂದರ್ಭದಲ್ಲಿ ಶಾಲಾ ಹಿರಿಯ ಮುಖ್ಯ ಶಿಕ್ಷಕಿ ಎನ್.ಇಂದಿರಮ್ಮ, ಶಿಕ್ಷಕ ತೀರ್ಥಕುಮಾರ್, ಇಸಿಒ ಈರಸ್ವಾಮಿ, ಸಿಆರ್‍ಪಿ ಈಶ್ವರಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಮಲತಾ, ಸದಸ್ಯರಾದ ರಾಜಣ್ಣ, ಸುಮಯ್ಯ, ಅನಿತಾ, ನಾಗರತ್ನಮ್ಮ ಶಿಕ್ಷಕರಾದ ಗಾಯಿತ್ರಮ್ಮ, ಮಂಜುಳಮ್ಮ, ಶಿಲ್ಪ, ಕೃಷ್ಣರೆಡ್ಡಿ, ಮಂಜುನಾಥ್, ಉಷಾ, ಸುಮಾ ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಚಳ್ಳಕೆರೆ

    To Top