Connect with us

    ಮುರುಘಾ ಮಠದಲ್ಲಿ ಪೂರ್ವಭಾವಿ ಸಭೆ | ಅರ್ಥಪೂರ್ಣ ಬಸವ ಜಯಂತಿಗೆ ತೀರ್ಮಾನ

    ಮುರುಘಾ ಮಠದಲ್ಲಿ ಪೂರ್ವಭಾವಿ ಸಭೆ

    ಮುಖ್ಯ ಸುದ್ದಿ

    ಮುರುಘಾ ಮಠದಲ್ಲಿ ಪೂರ್ವಭಾವಿ ಸಭೆ | ಅರ್ಥಪೂರ್ಣ ಬಸವ ಜಯಂತಿಗೆ ತೀರ್ಮಾನ

    CHITRADURGA NEWS | 30 APRIL 2024

    ಚಿತ್ರದುರ್ಗ: ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೇ.10 ರಂದು ಸಾಂಸ್ಕøತಿಕ ನಾಯಕ ಬಸವೇಶ್ವರರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು.

    ಮುರುಘಾ ಮಠದ ಆವರಣದಲ್ಲಿ ಸೋಮವಾರ ಸಂಜೆ ನಡೆದ ಸಭೆಯಲ್ಲಿ ವಿವಿಧ ಮಠಾಧೀಶರು, ಸಮಾಜದ ಪ್ರಮುಖರು ಸೇರಿದಂತೆ ಹಲವರು ಭಾಗವಹಿಸಿ ಬಸವ ಜಯಂತಿ ಆಚರಣೆ ಕುರಿತಂತೆ ಸಲಹೆ, ಸೂಚನೆಗಳನ್ನು ನೀಡಿದರು.

    ಇದನ್ನೂ ಓದಿ: ಮಾರಿ ಕಣಿವೆ ಶ್ರೀ ಕಣಿವೆ ಮಾರಮ್ಮ ದೇವಿ ಜಾತ್ರೆ | ಮೇ.10 ರಂದು ಬ್ರಹ್ಮ ರಥೋತ್ಸವ

    ಎಸ್‍ಜೆಎಂ ವಿದ್ಯಾಪೀಠ ಹಾಗೂ ಮುರುಘಾ ಮಠದ ಆಡಳಿತ ಸಮಿತಿ ಅಧ್ಯಕ್ಷರಾದ ಶಿವಯೋಗಿ ಕಳಸದ್ ಮಾತನಾಡಿ, ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ನಾನು ಅಧಿಕಾರಿಯಾಗಿದ್ದಾಗ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿಸಿದ್ದೆ. ಈಗ ಮಠದಿಂದ ಐತಿಹಾಸಿಕ ಕಾರ್ಯಕ್ರಮ ನಡೆಸಬೇಕು ಎಂದರು.

    ಬಸವಣ್ಣನವರ ಆದರ್ಶಗಳು ನಮ್ಮ ಬದುಕಾಗಬೇಕು. ಬಸವಣ್ಣನವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಬಾರದು. ಅವರು ವಿಶ್ವಮಾನ್ಯರು ಎಂದು ಬಣ್ಣಿಸಿದರು.

    ಇದನ್ನೂ ಓದಿ: ಫಸಲ್ ವಿಮಾ ಯೋಜನೆ | ಅಧಿಕಾರಿಗಳ ಯಡವಟ್ಟು , ರೊಚ್ಚಿಗೆದ್ದ ರೈತರು 

    ಡಾ.ಜಯಬಸವ ಸ್ವಾಮೀಜಿ ಮಾತನಾಡಿ, ಜಯದೇವ ಜಗದ್ಗುರುಗಳ ಒತ್ತಾಸೆಯಿಂದ ಪ್ರಥಮ ಬಾರಿಗೆ ದಾವಣಗೆರೆ ವಿರಕ್ತಮಠದಲ್ಲಿ ಬಸವ ಜಯಂತಿ ಆಚರಿಸಲಾಯಿತು. 1913ರಲ್ಲಿ ಹರ್ಡೇಕರ್ ಮಂಜಪ್ಪ ಬಸವ ಜಯಂತಿ ಆಚರಿಸಿದ್ದರು. ಮೃತ್ಯುಂಜಯ ಅಪ್ಪಗಳು ಇದಕ್ಕೆ ಸಮ್ಮತಿಸಿದ್ದರು ಎಂದರು.

    ಮುರುಘಾ ಮಠದಲ್ಲಿ ಪೂರ್ವಭಾವಿ ಸಭೆ

    ಮುರುಘಾ ಮಠದಲ್ಲಿ ಪೂರ್ವಭಾವಿ ಸಭೆ

    ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕøತಿಕ ನಾಯಕರೆಂದು ಸಾರಿದ್ದು ಸ್ವಾಗತಾರ್ಹ. ಶೂನ್ಯಪೀಠ ಹಾಗು ಮುರುಘಾ ಪರಂಪರೆಗೆ ಅನ್ಯೋನ್ಯ ಸಂಬಂಧವಿದೆ. ಮೇ.10 ರಂದು ಸಂಜೆ ಅನುಭವ ಮಂಟಪದಲ್ಲಿ ಸಭಾ ಕಾರ್ಯಕ್ರಮ, ಮೊದಲ ಎರಡು ದಿನ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ವಚನ ಕಂಠಪಾಠ ಸ್ಪರ್ಧೆ, ವೇಷಭೂಷಣ ಸ್ಪರ್ಧೆ ಮೊದಲಾಗಿ ಮಾಡಬೇಕಿದೆ ಎಂದರು.

    ಇದನ್ನೂ ಓದಿ: ಮೇ.27 ರವರೆಗೆ ಶಿವಮೂರ್ತಿ ಶರಣರು ನ್ಯಾಯಾಂಗ ಬಂಧನಕ್ಕೆ | ಮತ್ತೆ ಚಿತ್ರದುರ್ಗ ಕಾರಾಗೃಹ ಸೇರಿದ ಮುರುಘಾಶ್ರೀ

    ಛಲವಾದಿ ಗುರುಪೀಠದ ಶ್ರೀ ಬಸವನಾಗೀದೇವ ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಶ್ರೀ ಬಸವರಮಾನಂದ ಸ್ವಾಮಿಗಳು, ಕೆ.ಸಿ. ನಾಗರಾಜ್, ರಂಗಸ್ವಾಮಿ ಜೆ.ಎನ್.ಕೋಟೆ, ಚಂದ್ರಶೇಖರ್, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಜಯದೇವಮೂರ್ತಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷೆ ಆರ್.ಶೈಲಜಾ ಬಾಬು, ಮುಖಂಡ ನಾಗರಾಜ ಸಂಗಂ, ವೀರಶೈವ ಸಮಾಜದ ಕಾರ್ಯದರ್ಶಿ ಪಿ.ವೀರೇಂದ್ರಕುಮಾರ್, ಶ್ರೀ ಬಸವಪ್ರಭು ಸ್ವಾಮಿಗಳು, ಶ್ರೀ ಬಸವರಮಾನಂದ ಸ್ವಾಮಿಗಳು ಹೆಗ್ಗುಂದ, ಶ್ರೀ ಬಸವನಾಗಿದೇವ ಸ್ವಾಮಿಗಳು ಛಲವಾದಿ ಗುರುಪೀಠ, ಶ್ರೀ ಬಸವಕಬೀರ ಸ್ವಾಮಿಗಳು ಕಲಬುರ್ಗಿ, ಶ್ರೀ ಬಸವಮಹಾಂತ ಸ್ವಾಮಿಗಳು ಶಿರಸಂಗಿ, ಶ್ರೀ ಬಸವಪ್ರಸಾದ ಸ್ವಾಮಿಗಳು ಮಾನವಿ, ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು ನಿಪ್ಪಾಣಿ, ಶ್ರೀ ಬಸವಲಿಂಗಮೂರ್ತಿ ಸ್ವಾಮಿಗಳು ಮೈಸೂರು, ಶ್ರೀ ಬಸವ ಮಹಾಲಿಂಗ ಸ್ವಾಮಿಗಳು ತುಮಕೂರು, ಶ್ರೀ ತಿಪ್ಪೇರುದ್ರಸ್ವಾಮಿಗಳು ನಾಯಕನಹಟ್ಟಿ, ಶ್ರೀ ಬಸವಭೂಷಣ ಸ್ವಾಮಿಗಳು ಸಿಂಧನೂರು, ಆರತಿ ಮಹಡಿ ಶಿವಮೂರ್ತಿ, ತಿಪ್ಪೇಸ್ವಾಮಿ, ರುದ್ರೇಶ್ ಐಗಳ್, ಶ್ರೀಮತಿ ಮೋಕ್ಷ ರುದ್ರಸ್ವಾಮಿ, ವಾಗೀಶಬಾಬು, ಎನ್.ಬಿ. ವಿಶ್ವನಾಥ್, ಜಿ.ಎಸ್. ಉಜ್ಜಿನಪ್ಪ, ವಿಜಯಕುಮಾರ್, ಪೈಲ್ವಾನ್ ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

    ಇದನ್ನೂ ಓದಿ: ಮೇ.1ರಂದು (ನಾಳೆ) ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯ

    ಬಸವಣ್ಣನ ಪುತ್ಥಳಿಗೆ 5 ಲಕ್ಷ ದೇಣಿಗೆ:

    ವೀರಶೈವ ಸಮಾಜದ ಮುಖಂಡ ಸುರೇಶ್‍ಬಾಬು ಮಾತನಾಡಿ, ಎರಡು ದಿನ ಶ್ರೀಮಠದಲ್ಲಿ ಮತ್ತು ಒಂದು ದಿನ ನೀಲಕಂಠೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

    ಮುಂದಿನ ಬಸವ ಜಯಂತಿಯೊಳಗೆ ಬಸವಣ್ಣನವರ ಪುತ್ಥಳಿ ನಿರ್ಮಾಣ ಮಾಡಬೇಕು ಅಂದುಕೊಂಡಿದ್ದೇವೆ. ಈ ಕಾರ್ಯಕ್ಕೆ ನಾನು 5 ಲಕ್ಷ ರೂ., ಶಾಸಕರಾದ ಕೆ.ಸಿ.ವೀರೇಂದ್ರ(ಪಪ್ಪಿ) 5 ಲಕ್ಷ ರೂ. ಮತ್ತು ವೀರಶೈವ ಸಮಾಜದಿಂದ ಸಹಕಾರ ಕೋರಲಾಗುವುದು ಎಂದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top