ಮುಖ್ಯ ಸುದ್ದಿ
ಫೋನ್‌ಪೇ ಆ್ಯಕ್ಟಿವೇಷನ್ ಕಾಲ್ | ಕೆಲವೇ ನಿಮಿಷಕ್ಕೆ ₹ 1.75 ಲಕ್ಷ ವಂಚನೆ

CHITRADURGA NEWS | 09 JUNE 2024
ಚಿತ್ರದುರ್ಗ: ಫೋನ್‌ಪೇ ಖಾತೆ ಆ್ಯಕ್ಟಿವೇಷನ್ ಮಾಡಬೇಕಿದೆ ಎಂದು ಹೇಳಿ ಕೆಲವೇ ನಿಮಿಷಗಳಲ್ಲಿ ₹1.75 ಲಕ್ಷ ವಂಚಿಸಿದ್ದಾರೆ ಸೈಬರ್ ಕಳ್ಳರು.
ಚಿಕ್ಕಜಾಜೂರು ಸಮೀಪದ ಹಿರೇಕಂದವಾಡಿ ಗ್ರಾಮದ ವಕೀಲ ಎಂ.ನಟರಾಜ್ ಅವರ ಮೊಬೈಲ್‌ಗೆ ಮೇ 17ರಂದು ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ನಾನು ಕೆನರಾ ಬ್ಯಾಂಕ್ ಅಧಿಕಾರಿ ಎಂದು ಹೇಳಿದ್ದಾನೆ. ಬಳಿಕ ಫೋನ್‌ಪೇ ಖಾತೆ ಆ್ಯಕ್ಟಿವೇಷನ್ ಮಾಡಬೇಕೆಂದು ಹೇಳಿ ಬ್ಯಾಂಕ್ ಖಾತೆಯಿಂದ ₹1.75 ಲಕ್ಷವನ್ನು ಎಗರಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ಖರ್ಚಿಲ್ಲದೆ ಪ್ರಕರಣ ಬಗೆಹರಿಸಿಕೊಳ್ಳಿ | ಜಿಲ್ಲಾ ನ್ಯಾಯಾಲಯದಿಂದ ಸುರ್ವಣಾವಕಾಶ

ನಟರಾಜ್ ಅವರ ಆಧಾರ್ ನಂಬರ್ ಭೀಮಸಮುದ್ರ ಕೆನರಾಬ್ಯಾಂಕ್ ಶಾಖೆಯ ಉಳಿತಾಯ ಖಾತೆಯ ಸಂಖ್ಯೆ ಪಡೆದಿದ್ದಾನೆ. ನಂತರ ಮೊಬೈಲ್‌ಗೆ ರವಾನೆಯಾಗಿದ್ದ ಓಟಿಪಿ ಪಡೆದಿದ್ದಾನೆ. ಇದಾದ ಕೆಲವೇ ನಿಮಿಷಗಳಲ್ಲಿ ನಟರಾಜ್ ಅವರ ಖಾತೆಯಿಂದ ₹50,000, ₹25,000, ₹49,000 ₹48,000, ₹3,200 ಸೇರಿ ಒಟ್ಟು ₹1,75,200 ಮೊತ್ತ ಕಡಿತಗೊಂಡಿದೆ.
ಏಕಾಏಕಿ ಹಣ ಕಡಿತವಾಗಿದ್ದನ್ನು ಗಮನಿಸಿ 1930ಕ್ಕೆ ಕರೆಮಾಡಿ ದೂರು ಸಹ ಸಲ್ಲಿಸಿದ್ದಾರೆ. ಬಳಿಕ ಚಿಕ್ಕಜಾಜೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

