ಕ್ರೈಂ ಸುದ್ದಿ
ಹಳೆಯ ವೈಷಮ್ಯಕ್ಕೆ ಮಹಿಳೆಯ ಕೊಲೆ
Published on
ಚಿತ್ರದುರ್ಗ ನ್ಯೂಸ್.ಕಾಂ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರ ಕೊಲೆ ನಡೆದಿದೆ.
ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾದೇವನಕಟ್ಟೆ ಗ್ರಾಮದ 46 ವರ್ಷದ ಭಾಗ್ಯಮ್ಮ ಕೊಲೆಯಾದ ಮಹಿಳೆ.
ಗ್ರಾಮದ ವೀರಭದ್ರಪ್ಪ ಎಂಬುವವರ ಜಮೀನಿನ ಬಳಿ ಕೊಲೆಯಾದ ಮಹಿಳೆಯ ಶವ ಪತ್ತೆಯಾಗಿದೆ.
ಎರಡು ದಿನಗಳ ಹಿಂದೆಯೇ ಮಹಿಳೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
Continue Reading
Related Topics:Chitradurga Latest News, Chitradurga Police, crime, Murder, ಅಪರಾಧ, ಕೊಲೆ, ಕ್ರೈಂ, ಚಿತ್ರದುರ್ಗ ಪೊಲೀಸ್, ಮಹಾದೇವನಕಟ್ಟೆ, ಮಹಿಳೆ
Click to comment