Connect with us

    MADAKARI NAYAKA ; ದುರ್ಗದಲ್ಲಿ ಮದಕರಿ ನಾಯಕರ ಪಟ್ಟಾಭಿಷೇಕ | ಭಾಗವಹಿಸಿದ್ದ ಗಣ್ಯರು ಹೇಳಿದ್ದೇನು..?

    ಮುಖ್ಯ ಸುದ್ದಿ

    MADAKARI NAYAKA ; ದುರ್ಗದಲ್ಲಿ ಮದಕರಿ ನಾಯಕರ ಪಟ್ಟಾಭಿಷೇಕ | ಭಾಗವಹಿಸಿದ್ದ ಗಣ್ಯರು ಹೇಳಿದ್ದೇನು..?

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 02 JULY 2024

    ಚಿತ್ರದುರ್ಗ: ಚಿತ್ರದುರ್ಗದ ದೊರೆ ರಾಜಾವೀರ ಮದಕರಿ ನಾಯಕರ (MADAKARI NAYAKA) ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಬೇಕು. ಪಠ್ಯ ಪುಸ್ತಕದಲ್ಲಿ ಅವರ ಕುರಿತ ಪಠ್ಯ ಸೇರ್ಪಡೆಯಾಗಬೇಕು. ಚಿತ್ರದುರ್ಗದಲ್ಲಿ ಮದಕರಿ ನಾಯಕರ ಥೀಂ ಪಾರ್ಕ್ ನಿರ್ಮಾಣ ಆಗಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಒತ್ತಾಯಿಸಿದರು.

    ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜಾವೀರ ಮದಕರಿ ನಾಯಕರ 270ನೇ ಪಟ್ಟಾಭಿಷೇಕ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಇದನ್ನೂ ಓದಿ: ರಾಜಾವೀರ ಮದಕರಿ ನಾಯಕ ಪಟ್ಟಾಭಿಷೇಕ | ಚಿತ್ರದುರ್ಗದಂತಹ ಕೋಟೆ ಏಷ್ಯಾ ಖಂಡದಲ್ಲೇ ಇಲ್ಲ | ಡಾ.ಎಸ್.ಎನ್.ಮಹಾಂತೇಶ್

    ಮೊಘಲರ ಆಳ್ವಿಕೆಯನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸಿದ ದೊರೆ ಚಿತ್ರದುರ್ಗದ ಮದಕರಿ ನಾಯಕ. ಚಿತ್ರದುರ್ಗಕ್ಕೆ ಅತ್ಯಂತ ಪ್ರಾಚೀನ ಇತಿಹಾಸವಿದೆ. ಪರಂಪರೆಯಿದೆ ಎಂದರು.

    ವಿಜಯನಗರದ ದೊರೆ ಕಲ್ಬುರ್ಗಿ ಗೆದ್ದುಕೊಡುವಂತೆ ಮತ್ತಿ ತಿಮ್ಮಣ್ಣ ನಾಯಕನನ್ನು ಕೇಳಿಕೊಂಡ ಇತಿಹಾಸವಿದೆ. 12 ವರ್ಷದ ಬಾಲಕ ಮದಕರಿ ನಾಯಕನಿಗೆ ಆಡಳಿತದ ಪಟ್ಟ ಕಟ್ಟಿ, ಎರಡು ವರ್ಷಗಳ ಕಾಲ ತರಬೇತಿ ನೀಡಿ ಮೃತಪಟ್ಟ ತಾಯಿ ಗಂಡೋಬಳವ್ವ ನಾಗತಿಯ ಶೌರ್ಯ, ಪರಾಕ್ರಮವನ್ನು ಸದಾ ಸ್ಮರಿಸಬೇಕು ಎಂದು ಶ್ರೀಗಳು ಹೇಳಿದರು.

    ಇದನ್ನೂ ಓದಿ:

    ಚಿತ್ರದುರ್ಗದಲ್ಲಿ ಮದಕರಿ ನಾಯಕ ಥೀಂ ಪಾರ್ಕ್ ಆಗಬೇಕು. ಚಿತ್ರದುರ್ಗವನ್ನು ಆಳಿದ 13 ಪಾಳೇಗಾರರ ಹೆಸರುಗಳನ್ನು ಚಿತ್ರದುರ್ಗದ 13 ವೃತ್ತಗಳಿಗೆ ನಾಮಕರಣ ಮಾಡಬೇಕು.

    ಕಾರ್ಯಕ್ರಮದಲ್ಲಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ, ಕಲ್ಲವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ಮದಕರಿ ನಾಯಕ ವಿದ್ಯಾಸಂಸ್ಥೆಯ ಸಂದೀಪ್, ನಗರಸಭೆ ಸದಸ್ಯರಾದ ದೀಪು, ಭಾಸ್ಕರ್, ನಸ್ರುಲ್ಲಾ, ಹರೀಶ್, ಮಾಜಿ ಸದಸ್ಯರಾದ ರಾಘವೇಂದ್ರ, ಫಕೃದ್ದಿನ್, ಶಬ್ಬೀರ್‍ಭಾಷಾ, ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥ ಗೊಪ್ಪೆ, ಗೋನೂರು ಗ್ರಾಪಂ ಅಧ್ಯಕ್ಷೆ ಗುಂಡಮ್ಮ, ಸೂರಣ್ಣ, ಜಾನ್ಹವಿ ನಾಗರಾಜ್, ಕೆಎಸ್‍ಆರ್‍ಟಿಸಿ ಡಿಸಿ ಶ್ರೀನಿವಾಸ್, ಬಿಜೆಪಿ ನಾಯಕಿ ರತ್ನಮ್ಮ, ಗೋಪಾಲಸ್ವಾಮಿ ನಾಯಕ ಮತ್ತಿತರರಿದ್ದರು.

     ಮದಕರಿ ನಾಯಕರ ಪಟ್ಟಾಭಿಷೇಕ

    ಮದಕರಿ ನಾಯಕರ ಪಟ್ಟಾಭಿಷೇಕ

    ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ;

    ಪರಾಕ್ರಮಿ ರಾಜಾವೀರ ಮದಕರಿನಾಯಕನ ಇತಿಹಾಸ, ಸಾಹಸ, ಶೌರ್ಯವನ್ನು ಮುಂದಿನ ಪೀಳಿಗೆಗೆ ತಿಳಿಸುವುದರಿಂದ ಇತಿಹಾಸವನ್ನು ಉಳಿಸಬೇಕಿದೆ. ಚಿತ್ರದುರ್ಗದಲ್ಲಿ ಮದಕರಿನಾಯಕ ಥೀಂ ಪಾರ್ಕ್ ಮಾಡುವ ನಿಟ್ಟಿನಲ್ಲಿ ಎಲ್ಲರೂ ಪಕ್ಷಾತೀತವಾಗಿ ಕೆಲಸ ಮಾಡೋಣ. ಇದರಲ್ಲಿ ಯಾವುದೇ ರಾಜಕೀಯ ಬೇಡ ಎಂದು ಮನವಿ ಮಾಡಿದರು.

    ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್:

    ಮುಂದಿನ ವರ್ಷದ 271 ನೇ ಪಟ್ಟಾಭಿμÉೀಕ ವಾಲ್ಮೀಕಿ ಭವನದಲ್ಲಿ ನಡೆಯಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಚಿತ್ರದುರ್ಗದ ಕೋಟೆಗೆ ಪ್ರವೇಶಿಸಲು ನೇರವಾದ ದಾರಿ ಆಗಬೇಕು. ರಾಜಾವೀರ ಮದಕರಿನಾಯಕನ ಇತಿಹಾಸ ಪಠ್ಯದಲ್ಲಿ ಸೇರಬೇಕೆಂಬ ನಾಯಕ ಸಮಾಜದ ಬೇಡಿಕೆಯನ್ನು ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಅವರ ಮೂಲಕ ಸರ್ಕಾರಕ್ಕೆ ತಲುಪಿಸುತ್ತೇವೆ ಎಂದು ಭರವಸೆ ನೀಡಿದರು.

    ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ:

    ಚಿತ್ರದುರ್ಗದ ಐತಿಹಾಸಿಕ ಕೋಟೆಯನ್ನು ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇದರಿಂದ ಕೆಲವರಿಗೆ ತೊಂದರೆ ಆಗಬಹುದು ಕ್ಷಮೆ ಇರಲಿ ಎಂದರು.

    ಇದನ್ನೂ ಓದಿ: ಜಿಲ್ಲೆಯ 158 ಸಹಕಾರ ಸಂಘಗಳಿಗೆ ಕಂಪ್ಯೂಟರ್ ಅಳವಡಿಕೆ | ಇಲ್ಯಾಸ್‍ ಉಲ್ಲಾ ಷರೀಪ್

    ಮದಕರಿ ನಾಯಕ ಥೀಂ ಪಾರ್ಕ್ ನಿರ್ಮಾಣ ಮಾಡಿಕೊಡುವ ನಿಟ್ಟಿನಲ್ಲಿ ಬಿಜೆಪಿ ನಾಯಕ ಅಮಿತ್ ಶಾ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಂಸದರಾದ ಗೋವಿಂದ ಕಾರಜೋಳ, ಕೇಂದ್ರ ಸಚಿವರಾದ ಕುಮಾರಸ್ವಾಮಿ ಜೊತೆಗೆ ದೆಹಲಿಗೆ ನಿಯೋಗ ತೆರಳೋಣ ಎಂದು ಸಲಹೆ ನೀಡಿದರು.

    ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್:

    ಪಾಳೆಯಗಾರರ ಇತಿಹಾಸವನ್ನು ಮರೆಮಾಚಬಾರದೆನ್ನುವ ಕಾರಣಕ್ಕಾಗಿ ಮದಕರಿನಾಯಕರ ಜಯಂತಿ, ಸ್ಮರಣೋತ್ಸವ, ಪಟ್ಟಾಭಿμÉೀಕ ಆಚರಿಸಿಕೊಂಡು ಬರುತ್ತಿದ್ದೇವೆ. ಇತಿಹಾಸ ಸೃಷ್ಟಿಸಿದವರನ್ನು ಗುರುತಿಸಿ ರಕ್ಷಿಸದಿದ್ದರೆ ಮುಂದಿನ ಪೀಳಿಗೆಗೆ ದ್ರೋಹವೆಸಗಿದಂತಾಗುತ್ತದೆ ಎಂದರು.

    ಇದನ್ನೂ ಓದಿ: ಬದುಕು ಬೋರಾದಾಗ ರಿಫ್ರೆಶ್ ಆಗಲು ಜೋಗಿಮಟ್ಟಿಗೆ ಬನ್ನಿ | ಇಲ್ಲಿನ ಹಸಿರು, ಗಾಳಿ, ನೋಟ ನಿಮ್ಮನ್ನು ರೀಚಾರ್ಜ್ ಮಾಡುತ್ತೆ

    ಚಿತ್ರದುರ್ಗದ ಕೋಟೆ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಬೇಕು, ಅದೇ ರೀತಿ ಚಿತ್ರದುರ್ಗದಲ್ಲಿ ಮದಕರಿನಾಯಕ ಥೀಂ ಪಾರ್ಕ್ ನಿರ್ಮಾಣ ಮಾಡುವುದಾಗಿ ಬಿಜೆಪಿ ಹಿರಿಯರೊಬ್ಬರು ಇಲ್ಲಿಗೆ ಬಂದಾಗ ಆಶ್ವಾಸನೆ ನೀಡಿದ್ದರು. ಇದುವರೆವಿಗೂ ಆಗಿಲ್ಲ. ಕೋಟೆಗೆ ನೇರ ದಾರಿಯಾದರೆ ಚಿತ್ರದುರ್ಗ ಕೂಡ ಹಂಪಿ ಮಾದರಿಯಲ್ಲಿ ಅಭಿವೃದ್ದಿಯಾಗಲಿದೆ ಇದಕ್ಕೆ ರಾಜಕಾರಣಿಗಳು ಪಕ್ಷ ಬೇಧ ಮರೆತು ಶ್ರಮಿಸಬೇಕು ಎಂದು ಮನವಿ ಮಾಡಿದರು.

    ವೀರ ಮದಕರಿ ನಾಯಕ

    ವೀರ ಮದಕರಿ ನಾಯಕ

    ಮದಕರಿ ನಾಯಕರ ಧಾರಾವಾಹಿ:
    ಡಿ.ಎಸ್.ಸುರೇಶ್‍ಬಾಬು (ಸೈಟ್ ಬಾಬಣ್ಣ) ಮಾತನಾಡುತ್ತಾ, ಮದಕರಿ ನಾಯಕರ ಕಥೆ ಆಧಾರಿತವಾಗಿ ಬಾಹುಬಲಿಯಂತೆ ಸಿನಿಮಾ ನಿರ್ಮಾಣ ಆಗಬೇಕು. ಆದರೆ, ಅಷ್ಟು ದೊಡ್ಡ ಪ್ರಮಾಣದ ಹಣ ಹೊಂದಿಸುವುದು ಕಷ್ಟವಾದ್ದರಿಂದ ಮೊದಲು ಧಾರಾವಾಹಿ ಮಾಡೋಣ. ಇದಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ. ಇದರ ಯಶಸ್ಸು ನೋಡಿಕೊಂಡು ಮುಂದೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕೋಣ ಎಂದು ಅಭಿಪ್ರಾಯಪಟ್ಟರು.

    ಮದಕರಿ ನಾಯಕರ ಪ್ರತಿಮೆಗೆ ವಿಶೇಷ ಅಲಂಕಾರ:

    271ನೇ ಪಟ್ಟಾಭಿಷೇಕದ ಹಿನ್ನೆಲೆಯಲ್ಲಿ ನಗರದ ಮದಕರಿ ವೃತ್ತದಲ್ಲಿರುವ ರಾಜಾವೀರ ಮದಕರಿ ನಾಯಕರ ಪ್ರತಿಮೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸುತ್ತಲೂ ವಿದ್ಯುತ್ ದೀಪಗಳನ್ನು ಅಳವಡಿಸಿ ರಾತ್ರಿಯಿಂದಲೇ ಸಾರ್ವಜನಿಕರಿಗೆ ವಿಶೇಷ ಗಮನ ಸೆಳೆಯುವಂತೆ ಮಾಡಲಾಗಿತ್ತು.

    ಇದನ್ನೂ ಓದಿ: ಬಯಲು ಸೀಮೆಯ ಊಟಿ | ಸ್ವರ್ಗವ ನಾಚಿಸುವ ಜೋಗಿಮಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು..!

    ಬೆಳಗ್ಗೆ ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಕ್ರೇನ್ ಮೂಲಕ ಬೃಹತ್ ಹೂವಿನ ಮಾಲೆಯನ್ನು ಪ್ರತಿಮೆಗೆ ಅರ್ಪಣೆ ಮಾಡಲಾಯಿತು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top