By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಕಾಂಗ್ರೆಸ್ ಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ | ಉಮೇಶ ಕಾರಜೋಳ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಕಾಂಗ್ರೆಸ್ ಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ | ಉಮೇಶ ಕಾರಜೋಳ

ಮುಖ್ಯ ಸುದ್ದಿ

ಕಾಂಗ್ರೆಸ್ ಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ | ಉಮೇಶ ಕಾರಜೋಳ

News Desk Chitradurga News
Last updated: 19 December 2024 20:22
News Desk Chitradurga News
6 months ago
Share
Umesh Karajola
ಉಮೇಶ ಕಾರಜೋಳ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 19 DECEMBER 2024

ಚಿತ್ರದುರ್ಗ: ಅಂಬೇಡ್ಕರ್ ಅವರ ನಿಧನದ ನಂತರ ಅವರ ಪಾರ್ಥಿವ ಶರೀರ ಮಣ್ಣು ಮಾಡಲು ದೆಹಲಿಯಲ್ಲಿ ಕನಿಷ್ಠ ಅಡಿಯ ಜಾಗ ನೀಡದೆ ಮುಂಬೈಗೆ ಅವರ ದೇಹ ಸಾಗಿಸುವ ವ್ಯವಸ್ಥೆ ಮಾಡದೆ ಅವರನ್ನು ತಾತ್ಸಾರವಾಗಿ ನೋಡಿಕೊಂಡ ಕಾಂಗ್ರೆಸ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕು ಇಲ್ಲ ಎಂದು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ಹೇಳಿದ್ದಾರೆ.

ಕ್ಲಿಕ್ ಮಾಡಿ ಓದಿ: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆಗೆ, ಗೋವಿಂದ ಕಾರಜೋಳ ಏನು ಹೇಳಿದ್ದಾರೆ ನೋಡಿ..

ಅಂಬೇಡ್ಕರ್ ಅವರ ಜೀವಿತಾವಧಿಯ ಕಾಲದಲ್ಲಿ ಅವರನ್ನು ನಿರಂತರ ಅಪಮಾನಿಸಿ, ಅವರ ಅರ್ಹತೆ, ವಿದ್ವತ್ತನ್ನು ಗೌರವಿಸದೇ ರಾಜಕೀಯವಾಗಿ ಸಾಮಾಜಿಕವಾಗಿ ತುಳಿದು ಅವರನ್ನು ಚುನಾವಣೆಯಲ್ಲಿ ಸೋಲಿಸಿ ಬಳಿಕ ಅವರನ್ನು ಸೋಲಿಸಿದವರಿಗೆ ಪದ್ಮಭೂಷಣ ನೀಡಿ ಗೌರವಿಸಿತು.

ಕಾಂಗ್ರೆಸ್ ಶೋಷಿತರನ್ನು ಮತ ಬ್ಯಾಂಕ್ ಮಾಡಿಕೊಂಡು ಇದುವರೆಗೂ ಅಧಿಕಾರದ ಸವಿ ಅನುಭವಿಸುತ್ತಾ ಬಂದಿದೆ.

ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಿ ಗೌರವಿಸಿದ ಹೆಗ್ಗಳಿಕೆ ಭಾರತೀಯ ಜನತಾ ಪಾರ್ಟಿಯದ್ದು. ಅಂಬೇಡ್ಕರ್ ಅವರ ಇತಿಹಾಸ ಮುಂದಿನ ಭವಿಷ್ಯದೊಂದಿಗೆ ತಿಳಿಯುವಂತೆ ಸಂವಿಧಾನ ದಿನ ಆಚರಿಸುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದು ಭಾರತೀಯ ಜನತಾ ಪಾರ್ಟಿ.

ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮೆಡಿಕಲ್ ಕಾಲೇಜು ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಕಾಂಗ್ರೆಸ್ ಅಂದು ಅಂಬೇಡ್ಕರ್ ಅವರನ್ನು ಅವಮಾನಿಸಿ ಇಂದು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಅಂಬೇಡ್ಕರ್ ಅವರ ಹೆಸರನ್ನು ಪಟಿಸುತ್ತಿರುವ ಕಾಂಗ್ರೆಸ್ ಗೋಮುಖ ವ್ಯಾಘ್ರತನವನ್ನು ಬಯಲು ಮಾಡುವ ನಿಟ್ಟಿನಲ್ಲಿ ಆಡಿದ ಮಾತುಗಳನ್ನು ತಿರುಚುವ ಮೂಲಕ ಅಪಪ್ರಚಾರ ನಡೆಸಿ ರಾಜಕೀಯ ಬಂಡವಾಳ ಮಾಡಿಕೊಳ್ಳಲು ಹೊರಟಿರುವ ಕಾಂಗ್ರೆಸ್ ನಡೆ ನಾಚಿಕೆಗೇಡಿತನದ ಪರಮಾವಧಿಯಾಗಿದೆ ಎಂದು ಉಮೇಶ್ ಕಾರಜೋಳ ಖಂಡಿಸಿದ್ದಾರೆ.

ರಾಷ್ಟ್ರ ಸಂತ ಡಾ.ಬಿ.ಆರ್ ಅಂಬೇಡ್ಕರ ಅವರನ್ನು ಸರ್ವರಿತಿಯೀಂದಲು ಗೌರವಿಸುವ ದೃಷ್ಟಿಯಿಂದ 2014 ರಲ್ಲಿ‌ ಅಧಿಕಾರಕ್ಕೆ ಬಂದ ಮೋದಿ ಸರ್ಕಾರದ ನೇತೃತ್ವದಲ್ಲಿ ಡಾ. ಬಿ.ಆರ್.ಅಂಬೇಡ್ಕರ ಅವರ ಕೊಡುಗೆಯನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಅಂಬೇಡ್ಕರರಿಗೆ ಸಂಬಂಧಿಸಿದ 5 ಪ್ರಮುಖ ಸ್ಥಾನಗಳನ್ನ ಪಂಚತಿರ್ಥ ಕ್ಷೇತ್ರಗಳು ಎಂದು ಘೋಷಣೆ ಮಾಡಿದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:ambedkarBJPChitradurgaChitradurga newsChitradurga UpdatescongressKannada Latest NewsKannada NewsUmesh KarajolaUnion Home Minister Amit Shahಅಂಬೇಡ್ಕರ್ಉಮೇಶ ಕಾರಜೋಳಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಲೇಟೆಸ್ಟ್ ಸುದ್ದಿಕನ್ನಡ ಸುದ್ದಿಕಾಂಗ್ರೆಸ್ಕೇಂದ್ರ ಗೃಹ ಸಚಿವ ಅಮಿತ್ ಶಾಚಿತ್ರದುರ್ಗಚಿತ್ರದುರ್ಗ ಅಪ್ಡೇಟ್ಸ್ಬಿಜೆಪಿ
Share This Article
Facebook Email Print
Previous Article Chitradurga medical college and Research Institute ಚಿತ್ರದುರ್ಗ ಮೆಡಿಕಲ್ ಕಾಲೇಜು ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ
Next Article arecanut price list ಅಡಿಕೆ ಧಾರಣೆ | ಡಿಸೆಂಬರ್ 19 | ರಾಜ್ಯದ ಪ್ರಮುಖ ಮಾರುಕಟ್ಟೆಗಳ ರೇಟ್
Leave a Comment

Leave a Reply Cancel reply

Your email address will not be published. Required fields are marked *

ಮುರುಘಾಮಠದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಮೊದಲನೇ ಕಾರ್ಯಕಾರಿ ಸಭೆ | ಮಠಾಧೀಶರು ಸೇರಿದಂತೆ ಗಣ್ಯರು ಭಾಗೀ
ಮುಖ್ಯ ಸುದ್ದಿ
ಉಸಿರಾಟದ ಕಾಯಿಲೆಗಳಿಗೆ ಈ ಎಲೆಯನ್ನು ಬಳಸಿ
Life Style
ಹೃದಯಾಘಾತದ ನಂತರ ಈ ತಪ್ಪುಗಳನ್ನು ಮಾಡಬೇಡಿ
Life Style
ಸ್ವಸ್ತಿಕ್ ಚಿಹ್ನೆ ಬಿಡಿಸುವಾಗ ನೀವು ಈ ತಪ್ಪನ್ನು ಮಾಡಬೇಡಿ
Life Style
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up