ಹೊಸದುರ್ಗ
ಕೊಬ್ಬರಿ ಗೋದಾಮಿಗೆ ಬೆಂಕಿ | ಲಕ್ಷಾಂತರ ಮೌಲ್ಯದ ಕೊಬ್ಬರಿ ನಷ್ಟ
Published on
CHITRADURGA NEWS | 31 JANUARY 2024
ಹೊಸದುರ್ಗ: ಕೊಬ್ಬರಿ ಗೋದಾಮಿಗೆ ಬೆಂಕಿ ತಗುಲಿ 40 ಸಾವಿರ ಕೊಬ್ಬರಿ ಉಂಡೆಗಳು ಧಗ ಧಗನೆ ಉರಿದಿರುವ ಘಟನೆ ಹೊಸದುರ್ಗ ತಾಲೂಕಿನಲ್ಲಿ ನಡೆದಿದೆ.
ಇಲ್ಲಿನ ಚಿಕ್ಕಬ್ಯಾಲದಕೆರೆ ಗ್ರಾಮದ ಹೊರವಲಯದ ತೋಟದಲ್ಲಿದ್ದ ಜಗಪ್ಪ ಎನ್ನುವವರ ಗೋಡಾನ್‍ಗೆ ಮಂಗಳವಾರ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ.
ಇದನ್ನೂ ಓದಿ: ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದ 18 ಜೋಡಿಗಳನ್ನು ಒಂದಾಗಿಸಿದ ಲೋಕ ಅದಾಲತ್
ಬೆಂಕಿಯ ಕೆನ್ನಾಲಿಗೆಗೆ ಗೋಡಾನ್‍ನಲ್ಲಿ ದಾಸ್ತಾನು ಮಾಡಿದ್ದ ಸುಮಾರು 40 ಸಾವಿದ ಉಂಡೆ ಕೊಬ್ಬರಿಗಳು ಸುಟ್ಟು ಬೂದಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಿ ಬೆಂಕಿ ನಂದಿಸಿ ತಹಬದಿಗೆ ತಂದಿದೆ.
ಘಟನೆಯಿಂದ ರೈತ ಜಗಪ್ಪ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅವಘಡ ನಡೆದಿದೆ.
Continue Reading
You may also like...
Related Topics:Chitradurga, Fire, Hosadurga, Kobbari, Ritha, ಕೊಬ್ಬರಿ, ಚಿತ್ರದುರ್ಗ, ಬೆಂಕಿ, ರೈತ, ಹೊಸದುರ್ಗ
Click to comment