ತಾಲೂಕು
ವಿದ್ಯಾರ್ಥಿಗಳು ಅಸ್ವಸ್ಥ ಪ್ರಕರಣ: ಉಡುವಳ್ಳಿ ನವೋದಯ ವಿದ್ಯಾಲಯ ಪ್ರಾಚಾರ್ಯರ ಸ್ಪಷ್ಟನೆ
Published on
ಚಿತ್ರದುರ್ಗ ನ್ಯೂಸ್.ಕಾಂ: ಉಡುವಳ್ಳಿ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಚಾರ್ಯರು ಸ್ಪಷ್ಟನೆ ನೀಡಿದ್ದು, ಘಟನೆಗೆ ವಿದ್ಯಾಲಯದ ಮೆಸ್‍ನಲ್ಲಿ ಸೇವಿಸಿದ ಉಪಹಾರ ಕಾರಣವಲ್ಲ ಎಂದು ತಿಳಿಸಿದ್ದಾರೆ.
ಹಿರಿಯೂರು ತಾಲೂಕು ಉಡುವಳ್ಳಿ ಜವಾಹರ್ ನವೋದಯ ವಿದ್ಯಾಲಯದಲ್ಲಿ ಫುಡ್‍ಫಾಯಿಸನ್‍ನಿಂದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು.
ವಿದ್ಯಾಲಯದಲ್ಲಿ ಮಂಗಳವಾರ ಬೆಳಗ್ಗೆ ಇಡ್ಲಿ, ಚಟ್ನಿ ಹಾಗೂ ಸಾಂಬಾರ್ ಸೇವಿಸಿದ ನಂತರ ಹೀಗಾಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು.
ಈ ಹಿನ್ನೆಲೆಯಲ್ಲಿ ಹಿರಿಯೂರು ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೆಸ್‍ನಲ್ಲಿ ಸೇವಿಸಿದ ಇಡ್ಲಿಯಿಂದ ಈ ಘಟನೆ ಸಂಭವಿಸಿಲ್ಲ ಎಂದು ವರದಿ ನೀಡಿದ್ದಾರೆ ಎಂದು ನವೋದಯ ವಿದ್ಯಾಲಯದ ಪ್ರಾಚಾರ್ಯರು ಸ್ಪಷ್ಟಪಡಿಸಿದ್ದಾರೆ.
Continue Reading
You may also like...
Related Topics:Chitradurga, Clear, Hiriyur, Kannada Latest News, Navodaya Vidyalaya, Sick, Students, ಅಸ್ವಸ್ಥ, ಕನ್ನಡ ಲೇಟೆಸ್ಟ್ ನ್ಯೂಸ್, ಚಿತ್ರದುರ್ಗ, ನವೋದಯ ವಿದ್ಯಾಲಯ, ವಿದ್ಯಾರ್ಥಿಗಳು, ಸ್ಪಷ್ಟನೆ, ಹಿರಿಯೂರು
2 Comments
Swamy
27 September 2023 at 20:40
ಮತೆ ಯಾವುದರಿಂದ ಆಗಿದೆ ಅಂತೆ
chitradurganews.com
28 September 2023 at 20:14
waiting for medical report