ಮುಖ್ಯ ಸುದ್ದಿ
ಟೌನ್ ಕೋ-ಆಪರೇಟಿವ್ ಸೊಸೈಟಿ ಸದಸ್ಯರಿಗೆ ಗುಡ್ ನ್ಯೂಸ್ | ಗೃಹ-ಬಂಗಾರದ ಸಾಲದ ಪ್ರಮಾಣದಲ್ಲಿ ಹೆಚ್ಚಳ
ಚಿತ್ರದುರ್ಗ ನ್ಯೂಸ್:
ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಸದಸ್ಯರ ಅನುಕೂಲಕ್ಕಾಗಿ ಗೃಹ ಸಾಲದ ಪ್ರಮಾಣವನ್ನು 5 ರಿಂದ 15 ಲಕ್ಷ ರೂ.ಗಳಿಗೆ ಹಾಗೂ ಬಂಗಾರದ ಮೇಲಿನ ಸಾಲವನ್ನು 5 ಲಕ್ಷ ರೂ.ಗಳವರೆಗೆ ಹೆಚ್ಚಿಸಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ನಿಶಾನಿ ಎಂ.ಜಯಣ್ಣ ತಿಳಿಸಿದರು.
ನಗರದ ಕಾಟಮ್ಮ ಪಟೇಲ್ ವೀರನಾಗಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 106ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೊಸೈಟಿ ಸದಸ್ಯರಿಗೆ ನೀಡುವ ಕೈ ಸಾಲವನ್ನು 50 ಸಾವಿರದಿಂದ 1 ಲಕ್ಷ ರೂ.ಗಳವರೆಗೆ ನೀಡಲು ತೀರ್ಮಾನಿಸಲಾಗಿದೆ. ಸೊಸೈಟಿ ಸದಸ್ಯರಿಗೆ ವಿಮೆ ಜಾರಿ ಮಾಡಲಾಗುತ್ತಿದ್ದು, ವಿಮಾ ಕಂಪನಿಯ ಜೊತೆಗೆ ಮಾತುಕತೆ ನಡೆದಿದೆ. ಸದಸ್ಯರು 60 ರೂ. ಕಟ್ಟಿದರೆ ಆಕಸ್ಮಿಕ ಅಪಘಾತವಾಗಿ ಮೃತಪಟ್ಟರೆ 1 ಲಕ್ಷ ರೂ., ಗಾಯಗೊಂಡರೆ 50 ಸಾವಿರ ರೂ. ಸಿಗಲಿದೆ ಎಂದು ವಿವರಿಸಿದರು.
112 ವರ್ಷಗಳ ಇತಿಹಾಸ ಹೊಂದಿರುವ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಈ ಹಿಂದೆ ಸಾಲದಲ್ಲಿತ್ತು. ಆದರೆ, ಈಗ ಸೊಸೈಟಿಯನ್ನು ಲಾಭದ ಹಾದಿಗೆ ತರಲಾಗಿದೆ. ಸದಸ್ಯರ ಉಪಯೋಗಕ್ಕಾಗಿ ಲಾಕರ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
2023ರಲ್ಲಿ 2581 ಜನ ಸದಸ್ಯರನ್ನು ಹೊಂದಿದ್ದು, 44,23,000 ರೂ. ಠೇವಣಿ ಹೊಂದಿದೆ. ಕಳೆದ ಸಾಲಿನಲ್ಲಿ ಸಂಘದಲ್ಲಿ3,62,62,023 ಠೇವಣಿಗಳನ್ನು ಹೊಂದಿದ್ದು, ಮಾರ್ಚ್ ಅಂತ್ಯಕ್ಕೆ 4,53,96,690 ಠೇವಣಿಯನ್ನು ಹೊಂದಿದೆ 2202-23ನೇ ಸಾಲಿನಲ್ಲಿ 11,18,326 ರೂ. ಲಾಭ ಬಂದಿದ್ದು, ಇದರಲ್ಲಿ ಸದಸ್ಯರಿಗೆ ಶೇ.13 ರಷ್ಟು ಲಾಭಾಂಶ ವಿತರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ನಿಶಾನಿ ಜಯಣ್ಣ ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸೊಸೈಟಿ ಉಪಾಧ್ಯಕ್ಷ ಸಿ.ಹೆಚ್.ಸೂರ್ಯಪ್ರಕಾಶ್, ನಿರ್ದೆಶಕರಾದ ಬಿ.ಕೆ.ರಹಮತ್ ಉಲ್ಲಾ, ಬಿ.ವಿ.ಶ್ರೀನಿವಾಸ್ ಮೂರ್ತಿ, ಬಿ.ಎಂ. ನಾಗರಾಜ್ ರಾವ್, ಕೆ.ಚಿಕ್ಕಣ್ಣ, ಎಸ್.ವಿ.ಪ್ರಸನ್ನ, ಕೆ.ಪ್ರಕಾಶ್, ಚಂದ್ರಪ್ಪ, ಚಂಪಕ, ಎನ್.ಎಂ.ಪುಷ್ಪವಲ್ಲಿ ಇದ್ದರು.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)