ಮುಖ್ಯ ಸುದ್ದಿ
Chitradurga; ಚಿತ್ರದುರ್ಗದ ಜನಸಂಖ್ಯೆ ಎಷ್ಟು, ಕುಡಿಯಲು ಎಷ್ಟು ನೀರು ಕೊಡುತ್ತಿದ್ದೀರಿ | ಗೋವಿಂದ ಕಾರಜೋಳ ಪ್ರಶ್ನೆಗೆ ಇಂಜಿನಿಯರ್ ತಬ್ಬಿಬ್ಬು
CHITRADURGA NEWS | 12 JULY 2024
ಚಿತ್ರದುರ್ಗ: ಚಿತ್ರದುರ್ಗ ನಗರದ ಜನಸಂಖ್ಯೆ ಎಷ್ಟು ? ಕುಡಿಯಲು ಎಷ್ಟು ನೀರು ಸರಬರಾಜಾಗುತ್ತಿದೆ. ಪ್ರತಿ ವ್ಯಕ್ತಿಗೆ ಎಷ್ಟು ನೀರು ಕೊಡುತ್ತಿದ್ದೀರಿ, ಎಷ್ಟು ದಿನಕ್ಕೊಮ್ಮೆ ನೀರು ಕೊಡುತ್ತಿದ್ದೀರಿ, ಇನ್ನೂ ನೀರಿನ ಅಗತ್ಯತೆ ಇದೆಯಾ..
ಲೋಕಸಭಾ ಸದಸ್ಯ ಗೋವಿಂದ ಕಾರಜೋಳ ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರ ನೀರು ಸರಬರಾಜು ಇಲಾಖೆ ಇಂಜಿನಿಯರ್‍ಗೆ ಕೇಳಿದ ಪ್ರಶ್ನೆಗಳಿವು.
ಇದನ್ನೂ ಓದಿ: ಮುರುಘಾ ಶ್ರೀಗಳ ಬೆಳ್ಳಿ ಪುತ್ಥಳಿ ಕಳ್ಳತನ | ದಾಖಲಾಯ್ತು ದೂರು | ದೂರು ಕೊಟ್ಟಿದ್ಯಾರು ?
ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆಯ ಇಂಜಿನಿಯರ್, ಚಿತ್ರದುರ್ಗ ನಗರದಲ್ಲಿ 1.76 ಲಕ್ಷ ಜನಸಂಖ್ಯೆ ಇದೆ. ಶಾಂತಿ ಸಾಗರದಿಂದ 14 ಎಂಎಲ್‍ಡಿ, ವಿವಿ ಸಾಗರದಿಂದ 6 ಎಂಎಲ್‍ಡಿ ನೀರು ಡ್ರಾ ಮಾಡಿಕೊಳ್ಳುತ್ತಿದ್ದೇವೆ. ಒಟ್ಟು 20 ಎಂಎಲ್‍ಡಿ. ಪ್ರತಿ ವ್ಯಕ್ತಿಗೆ 135 ಲೀ. ನೀರು ಕೊಡುತ್ತಿದ್ದೇವೆ. ನಗರಕ್ಕೆ ಒಟ್ಟ 24 ಎಂಎಲ್‍ಡಿ ನೀರಿನ ಅಗತ್ಯವಿದೆ ಎಂದು ತಿಳಿಸಿದರು.
ಇದನ್ನು ಕೇಳಿದ ಸಂಸದ ಗೋವಿಂದ ಕಾರಜೋಳ. ಇಲ್ಲಿ ನೀವು ಅಸಮರ್ಥರಾಗಿದ್ದೀರಿ ಎನ್ನುವುದು ಗೊತ್ತಾಗುತ್ತಿದೆ. 24 ಎಂಎಲ್‍ಡಿ ನೀರು ತೆಗೆದುಕೊಳ್ಳಲು ಪೈಪ್‍ಲೈನ್ ವ್ಯವಸ್ಥೆ ಇದೆಯೇ, ಇಲ್ಲದಿದ್ದರೆ ಯಾಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ತಪ್ಪು ಮಾಹಿತಿ ನೀಡಬೇಡಿ | ಮೊದಲು ಆರ್‌ಒ ಪ್ಲಾಂಟ್ ದುರಸ್ತಿಗೊಳಿಸಿ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಖಡಕ್ ಸೂಚನೆ
2008ಕ್ಕಿಂತ ಮೊದಲು ಒಟ್ಟು 295 ಕಿ.ಮೀ ಪೈಪ್‍ಲೈನ್ ಮಾಡಿದ್ದು, ಇದರಲ್ಲಿ ಅಷ್ಟು ಪ್ರಮಾಣದ ನೀರು ತೆಗೆದುಕೊಳ್ಳಲು ಆಗುವುದಿಲ್ಲ. ಈಗ ಇರುವ ವ್ಯವಸ್ಥೆಯಲ್ಲಿ ಶೇ.25 ರಷ್ಟು ನೀರು ವ್ಯರ್ಥವಾಗುತ್ತಿದೆ ಎಂದು ಇಂಜಿನಿಯರ್ ತಿಳಿಸಿದರು.
30 ವರ್ಷದ ದೂರದೃಷ್ಟಿಯಿಂದ ಯೋಜನೆ ರೂಪಿಸಿ:
ಸಂಸದರು ಮಾತನಾಡಿ, ಯಾವುದೇ ಯೋಜನೆ ರೂಪಿಸುವಾಗ ಮುಂದಿನ 30 ವರ್ಷದ ಜನಸಂಖ್ಯೆ ಗಮನದಲ್ಲಿಟ್ಟುಕೊಳ್ಳಬೇಕು. ಆದರೆ, ನೀವು ಪೈಪ್‍ಲೈನ್ ಕಾಮಗಾರಿ ಮಾಡಿ 14 ವರ್ಷ ಆಗಿಲ್ಲ. ಆಗಲೇ ಸಮಸ್ಯೆಯಾಗುತ್ತಿದೆ. ಅನೇಕ ವಾರ್ಡ್‍ಗಳಿಗೆ ಪ್ರತಿ ದಿನ ನೀರು ಕೊಡಲು ಆಗುತ್ತಿಲ್ಲ ಎಂದರು.
ಇದನ್ನೂ ಓದಿ: ಜಗದೀಶ್, ರವೀಂದ್ರ ಮನೆ ಮೇಲೆ ಲೋಕಾಯುಕ್ತ ದಾಳಿ | ಪತ್ತೆಯಾದ ಆಸ್ತಿ ಎಷ್ಟು ಗೊತ್ತಾ ?
ಈಗಲೂ ಜನರಿಗೆ ಸರಿಯಾಗಿ ನೀರು ಕೊಡಲು ಆಗುತ್ತಿಲ್ಲ. ಕೊಟ್ಟರೂ ರಾಡಿ ನೀರು ಕೊಡುತ್ತಿದ್ದೀರಿ. ಈ ಸಂಬಂಧ ಸಮಗ್ರವಾಗಿ ಪರಿಶೀಲನೆ ನಡೆಸಿ ಯೋಜನೆ ರೂಪಿಸಿ ಎಂದು ಸೂಚಿಸಿದರು.