ಮುಖ್ಯ ಸುದ್ದಿ
POLICE; ಕಳೆದುಕೊಂಡಿದ್ದ 80 ಮೊಬೈಲ್ ಹುಡುಕಿಕೊಟ್ಟ ಪೊಲೀಸರು
CHITRADURGA NEWS | 08 JULY 2024
ಚಿತ್ರದುರ್ಗ: ಹಲವು ಕಡೆಗಳಲ್ಲಿ ಕಳ್ಳತನವಾಗಿದ್ದ 80 ಮೊಬೈಲ್‍ಗಳನ್ನು ಪತ್ತೆ ಹಚ್ಚಿ ಪೊಲೀಸರು (POLICE) ಕಳೆದುಕೊಂಡವರಿಗೆ ವಾಪಾಸು ಮಾಡಿದ್ದಾರೆ.
ಸುಮಾರು 8 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 80 ಮೊಬೈಲುಗಳನ್ನು ಪೊಲೀಸರು ಆಧುನಿಕ CEIR ತಂತ್ರಜ್ಞಾನದ ನೆರವಿನಿಂದ ಪತ್ತೆ ಮಾಡಿ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ವಾರುಸುದಾರರಿಗೆ ಹಸ್ತಾಂತರ ಮಾಡಿದರು.
ಇದನ್ನೂ ಓದಿ: ಆತಂಕ ಸೃಷ್ಟಿಸಿದ ಡೆಂಗ್ಯೂ | ಕೋವಿಡ್ ಮಾದರಿಯಲ್ಲಿ ನಿಯಂತ್ರಣಕ್ಕೆ ಸಜ್ಜು
ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಕಳ್ಳತನ ಸಾಮಾನ್ಯ ಎನ್ನುವಂತಾಗಿದೆ. ಹೀಗೆ ಕಳೆದುಕೊಂಡವರು ಹತ್ತಿರದ ಪೊಲೀಸ್ ಠಾಣೆ ಅಥವಾ ಸೈಬರ್ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ ಪರಿಣಾಮವಾಗಿ ಮೊಬೈಲ್ ಪತ್ತೆಯಾಗಿವೆ.
ಕಳುವಾಗಿದ್ದ ಮೊಬೈಲ್‍ಗಳು ಯಾವ ರಾಜ್ಯದಲ್ಲಿ ಪತ್ತೆ:
ಕ್ರ.ಸಂ | ರಾಜ್ಯ | ಮೊಬೈಲ್ ಸಂಖ್ಯೆ |
1 | ಕರ್ನಾಟಕ | 54 |
2 | ಕೇರಳಾ | 18 |
3 | ಆಂಧ್ರಪ್ರದೇಶ | 06 |
4 | ಗೋವಾ | 02 |
ಒಟ್ಟು | 80 |
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಕಳೆದುಕೊಂಡಿದ್ದವರಿಗೆ ಮೊಬೈಲ್‍ಗಳನ್ನು ಮರಳಿಸಿದರು.
ಇದನ್ನೂ ಓದಿ: ವೀರಶೈವ ಮಹಾಸಭಾ ಜಿಲ್ಲಾ ಘಟಕದ ಚುನಾವಣೆ | 9 ಜನರಿಂದ ನಾಮಪತ್ರ ಸಲ್ಲಿಕೆ | ನಾಮಪತ್ರ ಹಿಂಪಡೆಯಲು ಇಂದು ಕೊನೆ ದಿನ | ಜು.21 ರಂದು ಮತದಾನ
ಇದೇ ವೇಳೆ ಮೊಬೈಲ್ ಪತ್ತೆ ಮಾಡಿದ ಸೈಬರ್ ಪೊಲೀಸ್ ಠಾಣೆಯ ಪಿಐ ಎನ್.ವೆಂಕಟೇಶ್, ಸಿಪಿಸಿ ಭೀಮನಗೌಡ ಅವರ ಕಾರ್ಯವನ್ನು ಶ್ಲಾಘಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಮತ್ತಿತರೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು.