ಮುಖ್ಯ ಸುದ್ದಿ
ಕೋಟೆನಾಡಿನಲ್ಲಿ ವರಮಹಾಲಕ್ಷ್ಮೀ ಗೆ ಭವ್ಯ ಸ್ವಾಗತ: ಚಿತ್ರದುರ್ಗದ ಅಧಿದೇವತೆಯರಿಗೆ ವೈಭವದ ಅಲಂಕಾರ

ಚಿತ್ರದುರ್ಗ ನ್ಯೂಸ್: ಶ್ರಾವಣ ಮಾಸದ ಎರಡನೇ ಶುಕ್ರವಾರದ ವರಮಹಾಲಕ್ಷ್ಮೀ ಹಬ್ಬವನ್ನು ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ದೇವಸ್ಥಾನಗಳಲ್ಲಿ ಪೂಜಾ ಕಾರ್ಯಗಳು ಪ್ರಾರಂಭವಾಗಿದ್ದವು.
ಮಹಿಳೆಯರು ಮನೆಗಳಲ್ಲಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ, ಶುಭ್ರ ವಸ್ತ್ರ ಧರಿಸಿ, ದೇವರನ್ನು ಆಭರಣಗಳಿಂದ ಸಿಂಗರಿಸಿ ಮಹಾಲಕ್ಷ್ಮಿಗೆ ಪ್ರಿಯವಾದ ಹಸಿರು ಬಳೆ, ಹೂವು, ಹಣ್ಣು ಅರ್ಪಿಸಿದರು. ದೀಪ ದೂಪ ಹಚ್ಚಿ, ಭಕ್ಷ್ಯ ಭೋಜನ ತಯಾರಿಸಿ ನೈವೇದ್ಯೆ ಅರ್ಪಿಸಿ ದೇವಿಗೆ ಮಹಾಮಂಗಳಾರತಿ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.
ಇದನ್ನು ಓದಿ: ಅಡಕೆ ಬೆಳೆಗಾರ ರೈತರೇ ಇಲ್ಲಿ ಗಮನಿಸಿ | ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆ ಪಾಲಿಸಿ
ದುರ್ಗದ ಅಧಿದೇವತೆ ಏಕನಾಥೇಶ್ವರಿ, ನಗರದೇವತೆಗಳಾದ ಉಚ್ಚಂಗಿಯಲ್ಲಮ್ಮ, ಬರಗೇರಮ್ಮ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮಿ, ಗೌರಸಂದ್ರ ಮಾರಮ್ಮ, ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ, ಅಂತರಘಟ್ಟಮ್ಮ, ಚೌಡೇಶ್ವರಿ, ಸಂತೆಹೊಂಡದ ಬಳಿಯ ಬನ್ನಿ ಮಹಾಕಾಳಿ, ವಾಸವಿ ಮಹಲ್ ರಸ್ತೆಯ ಕನ್ಯಕಾ ಪರಮೇಶ್ವರಿ ದೇವಿ, ಅಂಬಾ ಭವಾನಿ ಸೇರಿದಂತೆ ಬಹುತೇಕ ಎಲ್ಲ ಎಲ್ಲಾ ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ಪೂಜಾ ಕಾರ್ಯಗಳು ಪ್ರಾರಂಭವಾದವು. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
