ಮುಖ್ಯ ಸುದ್ದಿ
SSLC RESULT | ಚಿತ್ರದುರ್ಗ ಜಿಲ್ಲೆ 23ನೇ ಸ್ಥಾನಕ್ಕೆ ತೃಪ್ತಿ | ಇಬ್ಬರು ವಿದ್ಯಾರ್ಥಿಗಳು ಸ್ಟೇಟ್ ಟಾಪರ್ಸ್


CHITRADURGA NEWS | 02 MAY 2025
ಚಿತ್ರದುರ್ಗ: SSLC ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಜಿಲ್ಲೆಯ ಇಬ್ಬರು ವಿದ್ಯಾರ್ಥಗಳು 625ಕ್ಕೆ 625 ಅಂಕ ಪಡೆಯುವ ಮೂಲಕ ಜಿಲ್ಲೆಯ ಹೆಸರು ರಾಜ್ಯಮಟ್ಟದಲ್ಲಿ ಕಾಣಿಸುವಂತೆ ಮಾಡಿದ್ದಾರೆ.
ಹಿರಿಯೂರು ನಗರದ ರಾಷ್ಟ್ರೀಯ ಅಕಾಡೆಮಿ ಶಾಲೆಯ ನಂದನ್ ಎಚ್.ಡಿ ಹಾಗೂ ಮೌಲ್ಯ ಡಿ. ರಾಜ್ 625ಕ್ಕೆ 625 ಅಂಕ ಪಡೆದಿದ್ದಾರೆ.
ಇದನ್ನೂ ಓದಿ: SSLC ICSE | SRS ಹೆರಿಟೇಜ್ ಶಾಲೆಗೆ ಶೇ.100 ಫಲಿತಾಂಶ
ಉಳಿದಂತೆ ಶಿಕ್ಷಣ ಇಲಾಖೆಯ ಸಾಧನೆ ನಿರಾಶದಾಯಕವಾಗಿದ್ದು, ಕಳೆದ ವರ್ಷಕ್ಕಿಂತ ಎರಡು ಸ್ಥಾನ ಕುಸಿದಿದೆ.
2023 ರಲ್ಲಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದ್ದ ಚಿತ್ರದುರ್ಗ 2024ರಲ್ಲಿ ರಾಜ್ಯಮಟ್ಟದಲ್ಲಿ 21ನೇ ಸ್ಥಾನದಲ್ಲಿತ್ತು. ಈ ವರ್ಷ ಜಿಲ್ಲೆ 23ನೇ ಸ್ಥಾನಕ್ಕೆ ಕುಸಿದಿದೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ರಿಸಲ್ಟ್ | ಇವರೇ ನೋಡಿ ಜಿಲ್ಲೆಯ ಟಾಪರ್ಸ್ | ಜಿಲ್ಲೆಗೆ ಶೇ.59.87 ಫಲಿತಾಂಶ
ಜಿಲ್ಲೆಯಲ್ಲಿ 21481 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ ಇದರಲ್ಲಿ 13579 ವಿದ್ಯಾರ್ಥಿಗಳು ಮಾತ್ರ ತೇರ್ಗಡೆಯಾಗಿದ್ದಾರೆ. ಇದರಿಂದ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ.63.21 ಆಗಿದೆ.
ನಿಮ್ಮ ಮಕ್ಕಳ ಎಸ್ಸೆಸ್ಸೆಲ್ಸಿ ಫಲಿತಾಂಶ ತಿಳಿಯಲು ಇಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ https://karresults.nic.in ನೋಡಿಕೊಳ್ಳಬಹುದು.
