ಕ್ರೈಂ ಸುದ್ದಿ
ವಿದ್ಯುತ್ ಶಾಕ್ | ತಾಯಿ, ಮಗು ಸಾವು
CHITRADURGA NEWS | 03 APRIL 2025
ಮೊಳಕಾಲ್ಮೂರು: ವಿದ್ಯುತ್ ವೈಯರ್ ನಿಂದ ಶಾಕ್ ಹೊಡೆದು ತಾಯಿ, ಮಗ ಮೃತಪಟ್ಟಿರುವ ಘಟನೆ ಮೊಳಕಾಲ್ಮೂರು ತಾಲೂಕಿನಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ತುಮಕೂರ್ಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ತಾಯಿ ಬೋರಮ್ಮ(25) ಹಾಗೂ ಮಗು ಅಜಯ್(05) ಮೃತಪಟ್ಟಿದ್ದಾರೆ.
ಬಾತ್ ರೂಂ ಗೆ ತೆರಳುತ್ತಿದ್ದಾಗ ವಿದ್ಯುತ್ ವೈಯರ್ ತಗುಲಿದ್ದು, ವಿದ್ಯುತ್ ಪ್ರವಹಿಸಿ ಇಬ್ಬರು ಮೃತಪಟ್ಟಿದ್ದಾರೆ.
ಗ್ರಾಮದಲ್ಲಿ ಆಕ್ರಂಧನ ಮುಗಿಲು ಮುಟ್ಟಿದೆ.
ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಹಾಗೂ ಪಿಎಸ್ಐ ಪಾಂಡುರಂಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.