Connect with us

    Ayyappaswamy; ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ | 12 ವರ್ಷಗಳ ನಂತರ 18 ಮೆಟ್ಟಿಲು ಹತ್ತುವ ಅವಕಾಶ | ಮಹಿಳೆಯರಿಗೂ ಅಪರೂಪದ ಅವಕಾಶ

    Shri Ayyappaswamy temple chitradurga

    ಮುಖ್ಯ ಸುದ್ದಿ

    Ayyappaswamy; ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ | 12 ವರ್ಷಗಳ ನಂತರ 18 ಮೆಟ್ಟಿಲು ಹತ್ತುವ ಅವಕಾಶ | ಮಹಿಳೆಯರಿಗೂ ಅಪರೂಪದ ಅವಕಾಶ

    CHITRADURGA NEWS | 09 JULY 2024

    ಚಿತ್ರದುರ್ಗ: ಶಬರಿ ಮಲೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನೇ ಹೋಲುವ ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಈಗ ರಜತ ಮಹೋತ್ಸವದ ಸಂಭ್ರಮ.

    ಕಳೆದ ನಾಲ್ಕು ದಿನಗಳಿಂದ ದೇವಸ್ಥಾನದ ಆವರಣದಲ್ಲಿ ರಜತ ಮಹೋತ್ಸವ ಹಾಗೂ ಎರಡನೇ ಕುಂಬಾಭಿಷೇಕ ನಡೆಯುತ್ತಿದೆ.

    ಇದನ್ನೂ ಓದಿ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತಾ ಮಹೋತ್ಸವ | ಒಂದು ವಾರ ಧಾರ್ಮಿಕ ಕಾರ್ಯಕ್ರಮಗಳು | ಭಕ್ತಿ ಕುಸುಮಾಂಜಲಿ

    ಈ ಸಂದರ್ಭದಲ್ಲಿ ದೇವಸ್ಥಾನದ ಮುಂಭಾಗದಲ್ಲಿರುವ 18 ಮೆಟ್ಟಿಲುಗಳನ್ನು ಹತ್ತಲು 12 ವರ್ಷಗಳ ನಂತರ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಸುವರ್ಣಾವಕಾಶ ಕಲ್ಪಿಸಿದೆ.

    ಜುಲೈ 10 ಬುಧವಾರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ದೇವಸ್ಥಾನದ ಮುಂಭಾಗದ 18 ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪನ ದರ್ಶನ ಮಾಡಬಹುದಾಗಿದೆ.

    ಇದನ್ನೂ ಓದಿ: ಐತಿಹಾಸಿಕ ಕೋಟೆಗೆ ಧ್ವನಿ ಬೆಳಕಿನ ವೈಭವ | ಜಿಲ್ಲಾಧಿಕಾರಿ ಟಿ.ವೆಂಕಟೇಶ್

    ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಅಯ್ಯಪ್ಪ ಸ್ವಾಮಿ ದವಸ್ಥಾನಗಳಿವೆ. ಅದರಲ್ಲಿ ಥೇಟ್ ಶಬರಿ ಮಲೆ ಮಾದರಿಯಲ್ಲೇ ನಿರ್ಮಾಣವಾಗಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನ ಚಿತ್ರದುರ್ಗದಲ್ಲಿದೆ. ಅದರಲ್ಲೂ 18 ಮೆಟ್ಟಿಲುಗಳಿರುವ ರಾಜ್ಯದ ಬೆರಳೆಣಿಕೆಯ ದೇವಸ್ಥಾನಗಳಲ್ಲಿ ದುರ್ಗದ ದೇಗುಲವೂ ಒಂದಾಗಿದೆ.

    12 ವರ್ಷಗಳ ನಂತರ ಮೆಟ್ಟಿಲು ಹತ್ತುವ ಅವಕಾಶ:

    ಸಾಮಾನ್ಯವಾಗಿ 12 ವರ್ಷಗಳಿಗೊಮ್ಮೆ ದೇವಸ್ಥಾನಗಳಿಗೆ ಕುಂಬಾಭಿಷೇಕ ನಡೆಯಲಿದೆ. ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರಾರಂಭವಾಗಿ 25 ವರ್ಷ ಸಂದಿದೆ. ರಜತ ಮಹೋತ್ಸವದೊಂದಿಗೆ ಈಗ ಎರಡನೇ ಕುಂಬಾಭಿಷೇಕ ನಡೆಯುತ್ತಲಿದೆ.

    ಇದನ್ನೂ ಓದಿ: ಶ್ರೀ ಅಯ್ಯಪ್ಪ ಸ್ವಾಮಿ ಪ್ರತಿಷ್ಠಾಪನಾ ರಜತ ಮಹೋತ್ಸವ | ಸಚಿವ ಡಿ.ಸುಧಾಕರ್ ಭಾಗೀ

    ಈ ಹಿಂದೆ 2012ರಲ್ಲಿ ಕುಂಬಾಭಿಷೇಕ ನಡೆದಾಗ ಅಂದೂ ಕೂಡಾ ಮಹಿಳೆ, ಪುರುಷರು ಸೇರಿದಂತೆ ಎಲ್ಲ ವಯೋಮಾನದವರಿಗೂ ಶ್ರೀ ಅಯ್ಯಪ್ಪನ 18 ಮೆಟ್ಟಿಲುಗಳನ್ನು ಹತ್ತುವ ಅವಕಾಶ ಕಲ್ಪಿಸಲಾಗಿತ್ತು.

    ಶ್ರೀ ಅಯ್ಯಪ್ಪ ಸ್ವಾಮಿ

    ಶ್ರೀ ಅಯ್ಯಪ್ಪ ಸ್ವಾಮಿ

    ಈಗ 2024 ರಲಿ ಮತ್ತೊಮ್ಮೆ ಅಂಥದ್ದೇ ಸಂದರ್ಭ ಒದಗಿ ಬಂದಿದೆ. ಇಂದು ಜು.10 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮುಕ್ತವಾಗಿ ಭಕ್ತಿ, ಭಾವ ಪರವಶರಾಗಿ, ಸಂಕಲ್ಪದೊಂದಿಗೆ 18 ಮೆಟ್ಟಿಲು ಹತ್ತುವ ಅವಕಾಶ ಒದಗಿ ಬಂದಿದೆ. ಈ ಅವಕಾಶ ಕಳೆದುಕೊಂಡರೆ ಮತ್ತ 12 ವರ್ಷಗಳವರೆಗೆ ಕಾಯಬೇಕಾಗುತ್ತದೆ.

    ಇದನ್ನೂ ಓದಿ: ಅಯ್ಯಪ್ಪಸ್ವಾಮಿ ಜಾತಿಗೆ ಸೀಮಿತವಲ್ಲ | ಭಜರಂಗದಳ ದಕ್ಷಿಣ ಪ್ರಾಂತೀಯ ಸಂಚಾಲಕ ಪ್ರಭಂಜನ್‌

    ಚಿತ್ರದುರ್ಗದಲ್ಲಿ ಬಹಳ ಅಪರೂಪದ ಕಾರ್ಯಕ್ರಮ ನಡೆಯುತ್ತಿದ್ದು, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತ ಮಹೋತ್ಸವ ಹಾಗೂ ಎರಡನೇ ಕುಂಬಾಭಿಷೇಕ ನಡೆಯುತ್ತಿದೆ. ಈ ವೇಳೆ ಎಲ್ಲರಿಗೂ 18 ಮೆಟ್ಟಿಲು ಹತ್ತುವ ಸುವರ್ಣಾವಕಾಶ ಲಭಿಸಿದೆ. ಇದೇ ವೇಳೆ ಸುಮಾರು 25 ಸಾವಿರ ಜನರಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.

    | ಶರಣ್ ಕುಮಾರ್, ಅಧ್ಯಕ್ಷರು, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top