Connect with us

    ಆಗಸ್ಟ್ 21ಕ್ಕೆ ಜಿಲ್ಲೆಗೆ ಕೇಂದ್ರ ತಂಡ | ಜಿಪಂ CEO ಎಸ್.ಜೆ.ಸೋಮಶೇಖರ್

    zp ceo somashekhar

    ಮುಖ್ಯ ಸುದ್ದಿ

    ಆಗಸ್ಟ್ 21ಕ್ಕೆ ಜಿಲ್ಲೆಗೆ ಕೇಂದ್ರ ತಂಡ | ಜಿಪಂ CEO ಎಸ್.ಜೆ.ಸೋಮಶೇಖರ್

    CHITRADURGA NEWS | 17 AUGUST 2024

    ಚಿತ್ರದುರ್ಗ: ಜಿಲ್ಲೆಯಲ್ಲಿ ಜಲ ಸಂರಕ್ಷಣೆಗಾಗಿ ಕೈಗೊಂಡಿರುವ ಕಾಮಗಾರಿಗಳನ್ನು ವೀಕ್ಷಿಸಲು ಕೇಂದ್ರ ಸರ್ಕಾರದ ತಂಡ ಆಗಮಿಸಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಎಸ್.ಜೆ.ಸೋಮಶೇಖರ್ ತಿಳಿಸಿದರು.

    ಆ.21 ರಿಂದ 23ರವರೆಗೆ ಮೂರು ದಿನಗಳ ಕಾಲ ಭೇಟಿ ನೀಡುತ್ತಿದ್ದು, ಮಳೆ ನೀರು ಕೊಯ್ಲು ತಂತ್ರಜ್ಞಾನ ಬಳಸಿ ಮಾಡಿರುವ ಕೆಲಸಗಳನ್ನು ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

    ಇದನ್ನೂ ಓದಿ: ವರ ಮಹಾಲಕ್ಷ್ಮೀ ಹಬ್ಬದ ದಿನವೇ ಲಕ್ಷಾಂತರ ಕಳ್ಳತನ | ಮನೆ ಮತ್ತು ಅಡಿಕೆ ಗೋಡಾನ್ ನುಗ್ಗಿದ ಗ್ಯಾಂಗ್

    ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ‘ನಾರಿ ಶಕ್ತಿಯಿಂದ ಜಲ ಶಕ್ತಿ’ ಎನ್ನುವ ಘೋಷವಾಕ್ಯದೊಂದಿಗೆ ಮಳೆ ನೀರು ಹಿಡಿದಿಟ್ಟುಕೊಳ್ಳುವ ಸಲುವಾಗಿ ಜಲಶಕ್ತಿ ಅಭಿಯಾನಕ್ಕೆ ರಾಜ್ಯದಲ್ಲಿ ಚಾಲನೆ ನೀಡಲಾಗಿದೆ ಎಂದರು.

    ಜಲ ಸಂರಕ್ಷಣೆಗೆ ಅಂತರ್ ಇಲಾಖೆ ಸಮನ್ವಯ ಅಗತ್ಯ:

    ಜಲ ಸಂರಕ್ಷಣೆಗೆ ಅಂತರ್ ಇಲಾಖೆ ಸಮನ್ವಯ ಅಗತ್ಯವಾಗಿದೆ ಎಂದು ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಸಭೆಯಲ್ಲಿ ತಿಳಿಸಿದರು.

    ಇದನ್ನೂ ಓದಿ: ಭಾರೀ ಮಳೆಗೆ ಕೊಚ್ಚಿ ಹೋದ ರಸ್ತೆ | ಅಡಿಕೆ ತೊಟ ಜಲಾವೃತ

    ನಗರಾಭಿವೃದ್ಧಿ ಹಾಗೂ ಇತರೆ ಸ್ಥಳೀಯ ಆಡಳಿತ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿನ ಚರಂಡಿ, ಕಲುಷಿತ ಹಾಗೂ ಬೂದು ನೀರನ್ನು ಸ್ವಚ್ಚಗೊಳಿಸಿ ಜಲ ಮೂಲಗಳಿಗೆ ಸೇರುವಂತೆ ನೋಡಿಕೊಳ್ಳಬೇಕು. ಹಸಿರು ಪ್ರದೇಶಗಳ ಅಭಿವೃದ್ಧಿ, ಪುರಾತನ ಜಲ ಮೂಲಗಳ ಮರುಪೂರಣ, ಮಳೆ ನೀರು ಕೊಯ್ಲು, ಜಲ ಸಂರಕ್ಷಣೆಗೆ ವೈಜ್ಞಾನಿಕ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು. ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಭೂದಾಖಲೆಗಳ ಇಲಾಖೆ ಜಲ ಮೂಲಗಳ ಒತ್ತುವರಿಯಾಗದಂತೆ ಕ್ರಮವಹಿಸಬೇಕು.

    ಇದನ್ನೂ ಓದಿ: ನರೇಗಾ ಕಾಮಗಾರಿ | ಕೇಂದ್ರ ಪರಿಶೀಲನಾ ತಂಡದ ಅಧಿಕಾರಿ ಘನಶಾಮ್‌ ಮೀನಾ ಭೇಟಿ 

    ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮೇಳಗಳ ಮೂಲಕ ಜಲ ಸಂರಕ್ಷಣೆಯ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಬೇಕು. ಶಿಕ್ಷಣ ಇಲಾಖೆ ಪ್ರತಿ ಶಾಲೆಗಳಲ್ಲಿ ಜಲದೂತ ಅಭಿಯಾನ ಆರಂಭಿಸಿ ಮಕ್ಕಳಲ್ಲಿ ಜಲ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು.

    ಗ್ರಾಮ ಪಂಚಾಯಿತಿಗಳು ಮನರೇಗಾದಡಿ ಜಲ ಸಂರಕ್ಷಣೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಜಲ ಸಂರಕ್ಷಣೆಗೆ ತಾಂತ್ರಿಕವಾಗಿ ನೆರವು ನೀಡಬೇಕು.

    ಇದನ್ನೂ ಓದಿ: 13.90 ಕೋಟಿ ಕಾಮಗಾರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೂಮಿ ಪೂಜೆ 

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವ ಮೂಲಕ ಜಲ ಸಂರಕ್ಷಣೆ ಹಾಗೂ ಜಲ ನಿಯಂತ್ರಣದಲ್ಲಿ ಲಿಂಗ ಸಮಾನತೆ ಮೂಡಿಸಲು ಶ್ರಮಿಸಬೇಕು. 2024ರ ಜಲ ಸಂರಕ್ಷಣೆಯ ಘೋಷವಾಕ್ಯವೇ ‘ನಾರಿ ಶಕ್ತಿಯಿಂದ ಜಲ ಶಕ್ತಿ’ ಎನ್ನುವುದಾಗಿದೆ. ಈ ಇಲಾಖೆಗಳೊಂದಿಗೆ ಯುವಜನ ಕ್ರೀಡಾ ಇಲಾಖೆ ಮೇರಾ ಯುವ ಭಾರತ್ ಎನ್ನುವ ಸ್ವಯಂ ಸೇವಕ ಗುಂಪುಗಳನ್ನು ಸೃಜಿಸಿ ಜಾಗೃತಿ ಮೂಡಿಸಬೇಕು ಎಂದರು.

    ನೋಡಲ್ ಅಧಿಕಾರಿಗಳ ನೇಮಕ: ಕೇಂದ್ರ ತಂಡಕ್ಕೆ ಮಾಹಿತಿ ನೀಡುವ ಸಲುವಾಗಿ ಹಾಗೂ ತಂಡ ಭೇಟಿ ನೀಡುವ ಸ್ಥಳಗಳನ್ನು ಗುರುತಿಸುವ ಸಲುವಾಗಿ ಸಭೆಯಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಯಿತು.

    ಇದನ್ನೂ ಓದಿ: ಆರ್ಭಟಿಸಿದ ಸಿಡಿಲು | ಉಸಿರು ನಿಲ್ಲಿಸಿದ ನೂರಾರು ಕುರಿ

    ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರರು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳಾಗಿದ್ದು, ಎಲ್ಲಾ ತಾಲ್ಲೂಕುಗಳಿಂದ ಮಾಹಿತಿ ಪಡೆದುಕೊಳ್ಳಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಚಿತ್ರದುರ್ಗ ಹಾಗೂ ಹೊಳಲ್ಕೆರೆ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಹೊಸದುರ್ಗ ಮತ್ತು ಹಿರಿಯೂರು, ಕೃಷಿ ಇಲಾಖೆ ಉಪನಿರ್ದೇಶಕರನ್ನು ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

    ಇವರೊಂದಿಗೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರ ಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಹ ಕೇಂದ್ರ ತಂಡಕ್ಕೆ ಮಾಹಿತಿ ಒದಗಿಸುವಂತೆ ಸಭೆಯಲ್ಲಿ ತಿಳಿಸಲಾಯಿತು.

    ಇದನ್ನೂ ಓದಿ: ಈರುಳ್ಳಿ ಬೆಳೆ | ರೋಗ ತಡೆಗಟ್ಟಲು ಇಲ್ಲಿವೆ ನಿರ್ವಹಣಾ ಕ್ರಮಗಳು

    ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ತಿಮ್ಮಪ್ಪ, ನಾಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್ ಸೇರಿದಂತೆ ಮತ್ತಿತರರು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top