ಮುಖ್ಯ ಸುದ್ದಿ
ಆರೋಗ್ಯ ಇಲಾಖೆ | ಲಾರ್ವಾ ಸಮೀಕ್ಷೆಗೆ ಸ್ವಯಂಸೇವಕರ ಆಯ್ಕೆಗೆ ಅರ್ಜಿ ಆಹ್ವಾನ
CHITRADURGA NEWS | 27 JUNE 2024
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ವಿವಿಧ ನಗರ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸಲು ಸ್ವಯಂಸೇವಕರ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
2024-25ನೇ ಸಾಲಿಗೆ ಜಿಲ್ಲೆಯ ವಿವಿಧ ನಗರಗಳ ಸಮಸ್ಯಾತ್ಮಕ ವಾರ್ಡ್‍ಗಳಲ್ಲಿ ಈಡೀಸ್ ಲಾರ್ವಾ ಸಮೀಕ್ಷೆ ಕಾರ್ಯ ನಡೆಸಲು ಉದ್ದೇಶಿಸಲಾಗಿದೆ.
ಇದನ್ನೂ ಓದಿ: 4.80 ಕೋಟಿ ವಂಚಿಸಿ ವಿಯೆಟ್ನಾಂ ಸೇರಿದ್ದ ಆರೋಪಿ ಅಂದರ್ | ಕೋಡೆ ರಮಣಯ್ಯನಿಗೆ ಹೆಡೆಮುರಿ ಕಟ್ಟಿದ ಚಿತ್ರದುರ್ಗ ಪೊಲೀಸ್
ಈ ಹಿನ್ನೆಲೆಯಲ್ಲಿ ಕೇವಲ 100 ದಿನಗಳ ಅವಧಿಗೆ ಮಾತ್ರ ತಾತ್ಕಾಲಿಕವಾಗಿ ನಗರ ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗುವುದು. ಈ ಅವಧಿಯನ್ನು ವಿಸ್ತರಿಸಲಾಗುವುದಿಲ್ಲ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ನಗರ-09, ಚಳ್ಳಕೆರೆ-2, ಹಿರಿಯೂರು-2, ಹೊಸದುರ್ಗ-2 ರಂತೆ ನಗರ ಸ್ವಯಂ ಸೇವಕರು ನಗರ ಪ್ರದೇಶಗಳಲ್ಲಿ ಈಡೀಸ್ ಲಾರ್ವಾ ಸಮೀಕ್ಷೆ ನಡೆಸಬೇಕು.
ಇದನ್ನೂ ಓದಿ: ಈ ವರ್ಷವೂ ಚಿತ್ರದುರ್ಗಕ್ಕೆ ಭದ್ರೆ ಹರಿಯುವುದು ಅನುಮಾನ | ಅಬ್ಬಿನಹೊಳಲು ಬಳಿ ಶೇ.9 ರಷ್ಟು ಮಾತ್ರ ಕಾಮಗಾರಿ
ಪ್ರತಿದಿನ ಕಡ್ಡಾಯವಾಗಿ 100 ಮನೆಗಳಿಗೆ ಬೇಟಿ ನೀಡಿ, ಒಳಾಂಗಣ ಮತ್ತು ಹೊರಾಂಗಣದ ಕೃತಕ ನೀರಿನ ಸಂಗ್ರಹಗಳಲ್ಲಿ ಈಡೀಸ್ ಲಾರ್ವಾ ಸಮೀಕ್ಷೆ ನಡೆಸಬೇಕು. ಇದಕ್ಕಾಗಿ ದಿನಕ್ಕೆ 200 ರೂ. ಭತ್ಯೆಯನ್ನು ಆಯ್ಕೆಯಾದ ಸ್ವಯಂಸೇವಕರ ಬ್ಯಾಂಕ್ ಖಾತೆಗಳಿಗೆ ಪಾವತಿ ಮಾಡಲಾಗುವುದು. ಈ ಸಮೀಕ್ಷೆಗೆ ಸೇರಲು ಆಸಕ್ತಿ ಇರುವ ಅಭ್ಯರ್ಥಿಗಳು ಕನಿಷ್ಠ ಎಸ್ಸೆಸ್ಸೆಲ್ಸಿ ತೇರ್ಗಡೆ ಆಗಿರಬೇಕು.
ತಮ್ಮ ಸ್ವ-ವಿವರಗಳೊಂದಿಗೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಬ್ಯಾಂಕ್ ಪಾಸ್ ಪುಸ್ತಕದ ಮೊದಲನೇ ಪುಟ ಮತ್ತು ಆಧಾರ್ ಕಾರ್ಡ್‍ನ ನಕಲು ಪ್ರತಿಗಳೊಂದಿಗೆ ಜೂನ್ 29 ಸಂಜೆ 4.30ರೊಳಗೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾಗಳ ಕಚೇರಿ ಆವರಣದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ದಾಖಲಾತಿ ಪರಿಶೀಲನೆಗೆ ಖುದ್ದು ಹಾಜರಾಗಬೇಕು.
ಇದನ್ನೂ ಓದಿ: ನಿರ್ಮಿತಿ ಕೇಂದ್ರದ ಹಗರಣ | ಸಿಒಡಿ ತನಿಖೆಗೆ ವಹಿಸಿ | ಸಚಿವ ಡಿ.ಸುಧಾಕರ್
ಹಾಜರಾದ ಅಭ್ಯರ್ಥಿಗಳಿಗೆ ಯಾವುದೇ ಭತ್ಯೆ ನೀಡುವುದಿಲ್ಲ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ರೋಗವಾಹಕಗಳ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.