ಹಿರಿಯೂರು
ಯಲ್ಲದಕೆರೆ-ಹಿರಿಯೂರು ಮಾರ್ಗಕ್ಕೆ KSRTC ಬಸ್ ಸೌಲಭ್ಯ
CHITRADURGA NEWS | 16 AUGUST 2024
ಚಿತ್ರದುರ್ಗ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯಲ್ಲದಕೆರೆ-ಹಿರಿಯೂರು ಮಾರ್ಗದಲ್ಲಿ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಚಿತ್ರದುರ್ಗ ಜಿಲ್ಲಾ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಮೂರ್ತಿ ತಿಳಿಸಿದ್ದಾರೆ.
ಯಲ್ಲದಕೆರೆ-ಹಿರಿಯೂರು ಮಾರ್ಗದಲ್ಲಿ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗಿದೆ ಎಂಬುದಾಗಿ ಕೆಲ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿರುತ್ತದೆ.
ಇದನ್ನೂ ಓದಿ: ತಡರಾತ್ರಿ ಚಿರತೆಯ ಅಟ್ಟಹಾಸ | ಬೆಚ್ಚಿದ ಗ್ರಾಮಸ್ಥರು
ಹಿರಿಯೂರು-ದಿಂಡಾವರ-ಚಿಗಳಿಕಟ್ಟೆ-ಯಲ್ಲದಕೆರೆ ಮಾರ್ಗದಲ್ಲಿ 2 ಸಿಂಗಲ್ ಹಾಗೂ ಹಿರಿಯೂರು-ಯಲ್ಲದಕೆರೆ-ಕೆ.ಕೆ.ಹಟ್ಟಿ-ಚಿಗಳಿಕಟ್ಟೆ-ಬ್ಯಾರಮಡು-ಶೇಷಪ್ಪನಹಳ್ಳಿ-ದಸೂಡಿ-ಹೊಯ್ಸಳಕಟ್ಟೆ ಮಾರ್ಗದಲ್ಲಿ 06 ಸಿಂಗಲ್ ಸಾರಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ.
ಚಿತ್ರದುರ್ಗ-ಹಿರಿಯೂರು-ಹುಳಿಯಾರು ಮಾರ್ಗವಾಗಿ ಮೈಸೂರಿಗೆ ಕಾರ್ಯಾಚರಣೆಯಾಗುವ ಎಲ್ಲ ಸಾರಿಗೆಗಳು ಯಲ್ಲದಕೆರೆಯಲ್ಲಿ ನಿಲುಗಡೆ ಸೌಲಭ್ಯ ಕಲ್ಪಿಸಲಾಗಿರುತ್ತದೆ.
ಇದನ್ನೂ ಓದಿ: ವಿವಿ ಸಾಗರಕ್ಕೆ ಹರಿದು ಬಂತು 1 ಸಾವಿರ ಕ್ಯೂಸೆಕ್ ನೀರು
ವಿಭಾಗದಲ್ಲಿ ಸಂಪನ್ಮೂಲಗಳ ಕೊರತೆ ಇರುವುದರಿಂದ ಸಂಪನ್ಮೂಲಗಳ ಲಭ್ಯತೆ ಮೇರೆಗೆ ಹಿರಿಯೂರು-ಹುಳಿಯಾರು ಮಾರ್ಗದಲ್ಲಿ ಹೆಚ್ಚುವರಿ ಸಾರಿಗೆ ಸೌಲಭ್ಯ ಕಲ್ಪಿಸಲು ಪರಿಶೀಲಿಸಲಾಗುತ್ತಿದೆ ಎಂದು ksrtc ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.