Connect with us

    ಬುದ್ಧನ ಬೆಳಕು ನಾಟಕ ಪ್ರದರ್ಶನ | ದುರ್ಗದ ಜನರ ಮನಸೂರೆಗೊಂಡ ಅಮೋಘ ಅಭಿನಯ

    ಬುದ್ಧನ ಬೆಳಕು ನಾಟಕ ಪ್ರದರ್ಶನ

    ಮುಖ್ಯ ಸುದ್ದಿ

    ಬುದ್ಧನ ಬೆಳಕು ನಾಟಕ ಪ್ರದರ್ಶನ | ದುರ್ಗದ ಜನರ ಮನಸೂರೆಗೊಂಡ ಅಮೋಘ ಅಭಿನಯ

    ಚಿತ್ರದುರ್ಗ ನ್ಯೂಸ್.ಕಾಂ: ಡಾ.ಬಿ.ಆರ್.ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ನಗರದ ತರಾಸು ರಂಗಮಂದಿರದಲ್ಲಿ ಬುದ್ಧನ ಬೆಳಕು ನಾಟಕ ಪ್ರದರ್ಶನವಾಯಿತು.

    ಯುದ್ಧವೂ ಎಲ್ಲಾ ಕಾಲಕ್ಕೂ ಹಿಂಸೆಯನ್ನೇ ಬೋಧಿಸುತ್ತ ಧರ್ಮ, ಜಾತಿ, ವರ್ಗ, ವರ್ಣ, ಲಿಂಗ ತಾರತಮ್ಯಗಳನ್ನು ಸೃಷ್ಠಿ ಮಾಡುತ್ತ ಮನುಷ್ಯನ ನಡುವೆ ದೊಡ್ಡ ಕಂದಕವನ್ನೇ ಬಿತ್ತುತ್ತಲೇ ಬಂದಿವೆ. ಈ ಸತ್ಯವನ್ನು ಕಂಡುಕೊಂಡ ಅಶೋಕ ಚಕ್ರವರ್ತಿಯು ಕಳಿಂಗ ಯುದ್ಧದ ನಂತರ ತನ್ನಿಂದಾದ ಅನಾಹುತಕ್ಕೆ ಬುದ್ಧ ಧಮ್ಮವನ್ನು ಸ್ವೀಕರಿಸಿದನು ಎಂಬ ಸಂದೇಶ ನಾಟಕದಲ್ಲಿ ಜನಮನಕ್ಕೆ ತಟ್ಟಿತು.

    ಗೌತಮನು ಬುದ್ಧನಾಗುವ ಕಡೆ ಸಾಗಿದ ದಾರಿಯಲ್ಲಿ ಧ್ಯಾನ, ಯೋಗ, ಉಪವಾಸಗಳಂತವನ್ನು ನಿರಾಕರಿಸಿ ಜಾÐನ ಸಾಧನೆಗೆ ಜನರೊಂದಿಗೆ ಬೆರೆತ ಬುದ್ಧ ದುಃಖಕ್ಕೆ ಕಾರಣವಾದ ಬಗೆ ಹಾಗೂ ದುಃಖ ನಿವಾರಣೆಯ ಸಂಗತಿಗಳನ್ನು ಎಳೆ ಎಳೆಯಾಗಿ ಬಿಡಿಸಿತು. ಮನುಷ್ಯನ ಒಳತಿಗಾಗಿ ಶಾಂತಿಯನ್ನು ಮರುಸ್ಥಾಪಿಸುವ ಇಚ್ಛೆಯಿಂದ ರೋಹಿಣಿ ನದಿ ನೀರಿನ ಹಂಚಿಕೆಯ ಸಂಘರ್ಷದಿಂದ ಅರಮನೆಯನ್ನು ತೊರೆಯುವುದು ಬುದ್ಧನ ಮೇಲಿದ್ದ ಇದುವರೆಗಿನ ಮಿಥ್ ಅನ್ನು ಹೊಡೆದು ಹಾಕಿತು.

    ಇದನ್ನೂ ಓದಿ: ವೇದಾವತಿ ನದಿಗೆ ಬಾಗೀನ ಅರ್ಪಿಸಿದ ಬಿ.ಜಿ.ಗೋವಿಂದಪ್ಪ

    ಸಿದ್ಧಾರ್ಥ ಅರಮನೆ ತೊರೆಯುವುದು, ಸತ್ಯ ಶೋಧನೆಯ ಹುಡುಕಾಟ, ಯಜ್ಞಯಾಗಾದಿಗಳು, ಅಸ್ಪøಶ್ಯತೆ, ಅಸಮಾನತೆ, ಲಿಂಗತಾರತಮ್ಯ ಮುಂತಾದ ಪರಂಪರೆಯ ಸಾಮಾಜಿಕ ಮಹಾರೋಗಗಳಿಗೆ, ಸಂಕಟಗಳಿಗೆ ತನ್ನರಿವಿನ ಬೆಳಕಿನ ಔಷಧಿಯನ್ನು ನೀಡುತ್ತ ಬಿಕ್ಕುಗಳನ್ನು ಹೊಂದುತ್ತ ಸಾಗುವ ಹಾದಿಗಳ ಘಟನೆಗಳು ಪ್ರೇಕ್ಷಕರನ್ನು ಮೂಕವಾಗಿಸಿತ್ತು. ಪ್ರತಿ ಸನ್ನಿವೇಶದಲ್ಲೂ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕುತ್ತಲೇ ಬುದ್ಧನ ಸಮಾನತೆಯ ತತ್ವಗಳ ಬೋಧನೆ ಸಂವಿಧಾನದಲ್ಲಿ ರೂಪುಗೊಂಡಂತೆ ಭಾಸವಾಯಿತು.

    ಬುದ್ಧನ ಬೆಳಕು ನಾಟಕ ಪ್ರದರ್ಶನ

    ಬುದ್ಧನ ಬೆಳಕು ನಾಟಕ ಪ್ರದರ್ಶನ

    ನಾಟಕದಲ್ಲಿ ಮುಟ್ಟಾದ ಹೆಂಗಸ್ಸಿನ ಪ್ರಸಂಗವನ್ನು ಪ್ರಕೃತಿಗೆ ಸಮೀಕರಿಸಿ ಹೇಳುವ ಪ್ರಸಂಗ, ಮೌಢ್ಯಾಚರಣೆ, ಅಸಂಬದ್ಧ ವಿಷಯಗಳಿಗೆ ಮದ್ದು ನೀಡುತ್ತ ಸಾಗುವ ಬುದ್ಧನ ಹಾದಿ ಪ್ರೇಕ್ಷಕರ ಪಾಲಿಗೆ ಅರಿವಿನ ತೆರನ್ನು ಎಳೆಯಿತು. ನಾಟಕದ ಕೊನೆಯ ಭಾಗದಲ್ಲಿ ಅಂಬೇಡ್ಕರ್ ಬೌದ್ಧ ಧಮ್ಮವನ್ನು ಸ್ವೀಕರಿಸುವುದು, ಕೆಳವರ್ಗ ಶ್ರಮಿಕ ಅಂಚಿನ ಸಮುದಾಯದ ಜಾಡಮಾಲಿಗೆ ಅಂಬೇಡ್ಕರ್ ಸಂವಿಧಾನ ಕೃತಿ ನೀಡಿ ಅಕ್ಷರದ ಮಹತ್ವವನ್ನು ಸಾರಿ ದಾರಿ ತೋರಿಸುವ ಸಾಂಕೇತಿಕ ದೃಶ್ಯ ಪ್ರೇಕ್ಷಕರಲ್ಲಿ ಶಿಳ್ಳೆ ಕೇಕೆಗಳ ಕರತಾಡನವೇ ತುಂಬಿತು.

    ಡಾ.ಬಿ.ಆರ್.ಅಂಬೇಡ್ಕರ್ ವಿಚಾರ ವೇದಿಕೆಯ ಸದಸ್ಯರಾದ ವೇದಾಂತ ಏಳಂಜಿ, ಸಿದ್ದೇಶ್.ಕೆ., ಹನುಮಂತಪ್ಪ ಜಿ, ಡಾ.ಸಂಜೀವಕುಮಾರ್ ಪೋತೆ, ಕುಮಾರ್ ಹೆಚ್, ಶ್ರೀನಿವಾಸರಾಜು, ಮಂಜುನಾಥ ಆರ್, ವಿಶ್ವಾನಂದ ವದ್ದಿಕೆರೆ, ಲಿಂಗೇಶ್ವರ್, ರಮೇಶ್, ಪರುಶರಾಮ್, ಶ್ರೀನಿವಾಸ್, ಡಾ.ಗಿರೀಶ್ ಮತ್ತಿತರರಿದ್ದರು.

     

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top