Connect with us

    BJP protest: ವಕ್ಫ್ ಕಾಯ್ದೆ ದುರ್ಬಳಕೆ | ಲ್ಯಾಂಡ್‌ ಜಿಹಾದ್ ಷಡ್ಯಂತ್ರ | ಬಿಜೆಪಿ ಪ್ರತಿಭಟನೆ

    ವಕ್ಫ್ ಕಾಯ್ದೆ ದುರ್ಬಳಕೆ | ಲ್ಯಾಂಡ್‌ ಜಿಹಾದ್ ಷಡ್ಯಂತ್ರ | ಬಿಜೆಪಿ ಪ್ರತಿಭಟನೆ

    ಮುಖ್ಯ ಸುದ್ದಿ

    BJP protest: ವಕ್ಫ್ ಕಾಯ್ದೆ ದುರ್ಬಳಕೆ | ಲ್ಯಾಂಡ್‌ ಜಿಹಾದ್ ಷಡ್ಯಂತ್ರ | ಬಿಜೆಪಿ ಪ್ರತಿಭಟನೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 05 NOVEMBER 2024

    ಚಿತ್ರದುರ್ಗ: ಲ್ಯಾಂಡ್ ಜಿಹಾದ್ ನೆಪದಲ್ಲಿ ರಾಜ್ಯ ಸರ್ಕಾರ ವಕ್ಫ್ ಅಕ್ರಮ ನಡೆಸುತ್ತಿರುವುದನ್ನು ವಿರೋಧಿಸಿ ಬಿಜೆಪಿ(BJP)ಯಿಂದ ಒನಕೆ ಓಬವ್ವ ವೃತ್ತದಲ್ಲಿ ಮಂಗಳವಾರ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿ ಉಪವಿಭಾಗಧಿಕಾರಿ ಎಂ.ಕಾರ್ತಿಕ್ ಅವರಿಗೆ ಮನವಿ ಸಲ್ಲಿಸಲಾಯಿತು.

    ಕ್ಲಿಕ್ ಮಾಡಿ ಓದಿ: ವಿಧಾನಸಭೆ ಉಪಚುನಾವಣೆ | NDA ಅಭ್ಯರ್ಥಿ ನಿಖಿಲ್ ಪರ ಶಾಸಕ ಎಂ.ಚಂದ್ರಪ್ಪ ಪ್ರಚಾರ

    ಈ ವೇಳೆ ಕಾರ್ಯದರ್ಶಿ ಜಿಂಕಲ್ ಬಸವರಾಜ್ ಮಾತನಾಡಿ, ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರ ಜಮೀನುಗಳನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಬಿ.ಝಡ್.ಜಮೀರ್ ಇವರುಗಳು ವಶಪಡಿಸಿಕೊಳ್ಳಲು ಹೊರಟಿದ್ದಾರೆ.

    ಎಸ್ಸಿ.ಎಸ್ಟಿ. ಹಾಗೂ ಸ್ಮಾರಕಗಳಿರುವ ಸಾವಿರಾರು ಎಕರೆ ಜಮೀನುಗಳನ್ನು ಕಬಳಿಸಿ ವಕ್ಫ್ ಎಂದು ನಮೂದಿಸಲು ಹೊರಟಿದೆ. ಸುಲಭವಾಗಿ ಪಹಣಿ ಬದಲಾಗುವುದಿಲ್ಲ. ಮುಟೇಷನ್ ಆಗಬೇಕು. ಮಠ ಮಾನ್ಯ, ಸ್ಕೂಲ್, ಚರ್ಚ್‍ಗೆ ಸೇರಿದ ಜಮೀನನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಹುನ್ನಾರವಿದು. 1974 ರ ವಕ್ಫ್ ಕಾಯಿದೆಯನ್ನು ಕೂಡಲೆ ರದ್ದುಪಡಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆಂದು ಎಚ್ಚರಿಸಿದರು.

    ಚಳ್ಳಕೆರೆ ಎಂ.ಶಿವಮೂರ್ತಿ ಮಾತನಾಡಿ, ಚಳ್ಳಕೆರೆ ತಾಲ್ಲೂಕಿನಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ಭೂಮಿಯನ್ನು ವಕ್ಫ್ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಹೊರಟಿದೆ. ವಕ್ಫ್ ಬಂದಿದ್ದು 1995 ರಲ್ಲಿ. ನಮಗೆ ಜಮೀನು ನೀಡಿರುವುದು 1959 ರಲ್ಲಿ ಒಂದಕ್ಕೊಂದು ತಾಳೆಯಿಲ್ಲವಾದರೂ ರಾಜ್ಯ ಸರ್ಕಾರ ಜಮೀನುಗಳನ್ನು ಕಬಳಿಸಲು ಹೊರಟಿದೆ.

    ಕ್ಲಿಕ್ ಮಾಡಿ ಓದಿ: Ronald Colas Harmony Award: ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳಿಗೆ ರೊನಾಲ್ಡ್ ಕೊಲಾಸ್ ಸಾಮರಸ್ಯ ಪ್ರಶಸ್ತಿ

    ವಸತಿ ಸಚಿವ ಜಮೀರ್ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್‍ಗಳನ್ನು ಬೆದರಿಸುತ್ತಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ರೈತರ ಜಮೀನುಗಳು ಉಳಿಯಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೊಂದು ಕಡೆ ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಶೋಭೆಯಲ್ಲ. ರಕ್ತಕ್ರಾಂತಿಯಾಗಲಿ ಒಂದಿಚು ಜಮೀನು ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಭೀಮಸಮುದ್ರದ ಜಿ.ಎಸ್.ಅನಿತ್‍ಕುಮಾರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ರೀತಿಯ ಹಗರಣದಲ್ಲೆ ಮುಳುಗಿರುವುದು ಸಾಕಾಗದೆ ಈಗ ವಕ್ಫ್ ಖ್ಯಾತೆ ಶುರು ಮಾಡಿದೆ. ಮುಡಾ, ವಾಲ್ಮೀಕಿ ಹಗರಣ ಮುಚ್ಚಿ ಹಾಕಲು ಲ್ಯಾಂಡ್ ಜಿಹಾದ್ ಕೈಗೆತ್ತಿಕೊಂಡಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಜಮೀರ್ ಅಹಮದ್‍ ಖಾನ್ ಇವರುಗಳನ್ನು ಅಧಿಕಾರದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.

    ಗುಡ್ಡದರಂಗವ್ವನಹಳ್ಳಿ ಬಳಿಯಿರುವ ವಿಶ್ವವಿದ್ಯಾಲಯದ ಜಾಗವನ್ನು ವಕ್ಫ್‍ಗೆ ಸೇರಿಸಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಜಮೀನನ್ನು ವಶಪಡಿಸಿಕೊಳ್ಳುವುದಿಲ್ಲವೆಂದು ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು. ರಾತ್ರೋ ರಾತ್ರಿ ಜಮೀನಿನ ಖಾತೆಗಳು ಬದಲಾವಣೆಯಾಗುತ್ತಿರುವುದರಿಂದ ಸಿ.ಎಂ. ಮತ್ತು ವಸತಿ ಸಚಿವ ಇಬ್ಬರು ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಬೃಹತ್ ಹೋರಾಟ ನಡೆಸಲಾಗುವುದೆಂದರು.

    ಕ್ಲಿಕ್ ಮಾಡಿ ಓದಿ: APMC: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್

    ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್‍ಕುಮಾರ್, ರಾಂದಾಸ್, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಭಾರ್ಗವಿ ದ್ರಾವಿಡ್ ಸೇರಿದಂತೆ ಇತರರು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top