Connect with us

    ಆಸ್ಪತ್ರೆಯಲ್ಲಿ ಬಿಜೆಪಿ ನಾಯಕಿ ಭಾರ್ಗವಿ ದ್ರಾವಿಡ್ ಅರೋಗ್ಯ ವಿಚಾರಿಸಿದ | ಜಿ.ಹೆಚ್. ತಿಪ್ಪಾರೆಡ್ಡಿ

    ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

    ಮುಖ್ಯ ಸುದ್ದಿ

    ಆಸ್ಪತ್ರೆಯಲ್ಲಿ ಬಿಜೆಪಿ ನಾಯಕಿ ಭಾರ್ಗವಿ ದ್ರಾವಿಡ್ ಅರೋಗ್ಯ ವಿಚಾರಿಸಿದ | ಜಿ.ಹೆಚ್. ತಿಪ್ಪಾರೆಡ್ಡಿ

    CHITRADURGA NEWS | 01 MARCH 2024

    ಚಿತ್ರದುರ್ಗ: ಬಿಜೆಪಿ ವತಿಯಿಂದ ಕಾಂಗ್ರೆಸ್ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಪೋಲಿಸ್ ತಳ್ಳಿದ ಹಿನ್ನಲೆಯಲ್ಲಿ ಗಾಯಗೊಂಡಿದ್ದ ಬಿಜೆಪಿ ಯುವ ಘಟಕದ ರಾಜ್ಯ ಕಾರ್ಯದರ್ಶಿ ಭಾರ್ಗವಿ ದ್ರಾವಿಡ್ ಅವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು. ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಗುರುವಾರ ಅವರ ಅರೋಗ್ಯ ವಿಚಾರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

    ಇದನ್ನೂ ಓದಿ: ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿ| ಅರ್ಜಿ ಆಹ್ವಾನ

    ರಾಜ್ಯ ಸಭಾ ಚುನಾವಣೆಯಲ್ಲಿ ವಿಧಾನಸೌಧದಲ್ಲಿ ದೇಶದ್ರೋಹಿಗಳು ಮಾಡುವ ಕೆಲಸವಾಗಿದೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವುದು ಮಾಧ್ಯಮಗಳಲ್ಲಿ ಕಂಡು ಬಂದಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಇದರ ಬಗ್ಗೆ ಪರೀಶೀಲನೆಗೆ ಕಳುಹಿಸಲಾಗಿದೆ ಎಂಬ ಉತ್ತರ ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ ಇದರ ವಿಷಯವಾಗಿ ಉಪ ಮುಖ್ಯಮಂತ್ರಿಗಳು ಈ ರೀತಿ ಆಗಿಲ್ಲ ಎಂದು ಹೇಳುತ್ತಿದ್ದಾರೆ.

    ಸುರ್ಜಿವಾಲ ರವರು ಇದರ ಬಗ್ಗೆ ತೀರ್ಮಾನವನ್ನು ನೀಡಿ, ಇದು ಸುಳ್ಳು ರಾಜಕೀಯದಿಂದ ಪ್ರೇರಿತವಾದದು, ಹೇಳಿ ಮಾಡಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದಾಗ ಅವರ ಪಕ್ಕದಲ್ಲಿದ್ದ ವ್ಯಕ್ತಿಯೂರ್ವ ಅವರ ಬಾಯಿಯನ್ನು ಮುಚ್ಚುತ್ತಾನೆ, ರಾಷ್ಟ್ರಕ್ಕೆ ವಿರೋಧವಾಗಿ ಕೂಗಿರುವ ವಿಚಾರವನ್ನು ಅಪರಾಧಿಯನ್ನು ಕಾಂಗ್ರೆಸ್ ಪಕ್ಷ ರಕ್ಷಣೆ ಮಾಡುತ್ತಿದೆ. ನಿಜವಾಗಲು ದುರ್ದೈವವಾಗಿದೆ ಎಂದರು.

    ಇದನ್ನೂ ಓದಿ: ಪಿಡಿಓ ವಿರುದ್ಧ ಅಸಮಧಾನ| ಸಾಮೂಹಿಕ ರಾಜಿನಾಮೆಗೆ ಮುಂದಾದ ಗ್ರಾಮ ಪಂಚಾಯಿತಿ ಸದಸ್ಯರು

    ಪಕ್ಷದ ಆದೇಶ ಮೇರೆಗೆ ಪ್ರತಿಭಟನೆಯನ್ನು ಮಾಡಲಾಗುತ್ತಿತ್ತು ದಲಿತ ಮಹಿಳೆಯ ಭಾರ್ಗವಿಯ ಮೇಲೆ ಮಹಿಳಾ ಪೋಲಿಸ್  ಪೇದೇಯಿಂದ ದೂಕಲಾಗಿದೆ. ಇದರಿಂದ ಕೆಳಗೆ ಬಿದ್ದು ಮೂರ್ಛೆ ಹೋಗಿದ್ದಾಳೆ. ಈ ಸರ್ಕಾರದಲ್ಲಿ ಮಹಿಳೆಯರಿಗೆ ಅದರಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯನ್ನು ಮಾಡುವ ಅವಕಾಶವನ್ನು ನೀಡದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು. ಇದರ ಬಗ್ಗೆ ಮುಂದಿನ ದಿನಮಾನದಲ್ಲಿ ದೊಡ್ಡದಾದ ಪ್ರತಿಭಟನೆ ಮಾಡಲಾಗುವುದು ಎಂದರು.

    ಈ ಪ್ರಕರಣದ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳ ಜೊತೆ ಮಾತನಾಡಿದ್ದೇನೆ ಇದರ ಬಗ್ಗೆ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ್ದೇನೆ ಅಲ್ಲದೆ ಸಂತ್ರಸ್ಥರಿಂದ ಹೇಳಿಕೆಯನ್ನು ಸಹಾ ಪಡೆಯುವಂತೆ ತಿಳಿಸಿದ್ದೇನೆ ಎಂದರು.

    ಇದನ್ನೂ ಓದಿ: 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಿ| ಡಾ.ಅಭಿನವ್

    ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎ.ಮುರಳಿ, ರಾಜ್ಯ ರೈತ ಮೊರ್ಚಾ ಪ್ರಧಾನ ಕಾರ್ಯದರ್ಶಿಗಳಾದ ನವೀನ್,  ರಾಜೇಶ ಬುರುಡೆಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಸಿದ್ದಾಪುರ, ಸಂಪತ್ ಕುಮಾರ್, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ತಿಪ್ಪೇಸ್ವಾಮಿ, ಛಲವಾದಿ ಯುವ ಮೊರ್ಚಾ ಡಿ.ಕೆ ಜಯ್ಯಣ್ಣ, ಕಾರ್ಯದರ್ಶಿ ರಾಮು, ಕಿರಣ್ ಗೀರೀಶ್ ,ತಿಮ್ಮಣ್ಣ, ನವೀನ,ಅರುಣ್ ,ಪರುಶರಾಂ , ಸೂರಮ್ಮನಹಳ್ಳಿ ನಾಗರಾಜ್, ಬೋಸಯ್ಯ ಸೇರಿದಂತೆ ಹಲವು ಮುಖಂಡರು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top