ಮುಖ್ಯ ಸುದ್ದಿ
AMBUJAKSHI YOGA AWARD; ಭಜನಾ ಗಾಯಕಿ ಅಂಬುಜಾಕ್ಷಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ

CHITRADURGA NEWS | 23 JULY 2024
ಚಿತ್ರದುರ್ಗ: ಯೋಗ ಶಿಕ್ಷಣ ಸಂಸ್ಥೆಯಿಂದ ನಗರದ ಬ್ಯಾಂಕ್ ಕಾಲೋನಿಯ ಯೋಗ ಕೇಂದ್ರದಲ್ಲಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: GPS ಮತ್ತು ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ | ಟ್ಯಾಕ್ಸಿ, ಆಟೋ ಮಾಲೀಕರ ಖಂಡನೆ
ಈ ವೇಳೆ ಹಲವಾರು ವರ್ಷಗಳಿಂದ ಚಿತ್ರದುರ್ಗ, ಭದ್ರಾವತಿ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಭಜನೆಗಳನ್ನು ಹಾಡುವುದು ಮತ್ತು ಇತರರಿಗೆ ಉಚಿತವಾಗಿ ಭಜನೆ ಕಳಿಸಿ, ಸನಾತನ ಭಜನಾ ಕಲೆಯನ್ನು ಬೆಳೆಸಿಕೊಂಡು ಬಂದಿರುವ ಚಿತ್ರದುರ್ಗದ ಭಜನಾ ಗಾಯಕಿ ಎಲ್.ಹೆಚ್.ಅಂಬುಜಾಕ್ಷಿ ಅವರಿಗೆ ರಾಜ್ಯಮಟ್ಟದ ‘ಭಜನಾ ಶಿರೋಮಣಿ’ ಪ್ರಶಸ್ತಿ (AMBUJAKSHI YOGA AWARD) ಪ್ರಧಾನ ಮಾಡಲಾಯಿತು.
ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ರವಿ ಕೆ.ಅಂಬೇಕರ್ ಮಾತನಾಡಿ, ಹಿಂದೂ ಧರ್ಮದ ಸನಾತನ ಕಲೆಗಳಾಗಿರುವ ಯೋಗ ಮತ್ತು ಭಜನೆ ಆರೋಗ್ಯ ದೃಷ್ಟಿಯಿಂದ ಒಂದೇ ಮುಖದ ಎರಡು ಮುಖಗಳಾಗಿದ್ದು ಭಜನೆ ಹಾಡುತ್ತಾ ಚಪ್ಪಾಳೆ ತಟ್ಟುವುದರಿಂದ ಆರೋಗ್ಯ ಸುಧಾರಿಸುವುದರ ಜೊತೆಗೆ ಅನೇಕ ಕಾಯಿಲೆಗಳನ್ನು ಶಮನ ಮಾಡಬಲ್ಲ ಪರಿಣಾಮಕಾರಿ ವ್ಯಾಯಾಮ ಎನಿಸಿದೆ.
ಇದನ್ನೂ ಓದಿ: EXAM FEES; ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ LAW ವಿದ್ಯಾರ್ಥಿಗಳಿಂದ ಪ್ರತಿಭಟನೆ
ಹೃದಯ ರೋಗ ಮತ್ತು ಅಸ್ತಮಾ ಶ್ವಾಸಕೋಶದ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಇಂತಹ ಅಮೂಲ್ಯ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಅಂಬುಜಾಕ್ಷಿಯವರಿಗೆ ನಮ್ಮ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ರಾಜ್ಯಮಟ್ಟದ ‘ಭಜನ ಶಿರೋಮಣಿ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ ಭಾರತೀಯ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಹಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು.
ಸಂಸ್ಥೆಯ ಗೌರವಾಧ್ಯಕ್ಷ ಆರ್. ಸತ್ಯಣ್ಣ ಮಾತನಾಡಿ, ಗುರುವೆಂದರೆ ಕೇವಲ ವಿದ್ಯೆಯನ್ನು ನೀಡಿದ ಶಿಕ್ಷಕರಷ್ಟೇ ಅಲ್ಲ ಬದುಕಿನಲ್ಲಿ ಸರಿಯಾದ ದಾರಿಯನ್ನು ತೋರುವ ಪ್ರತಿಯೊಬ್ಬರೂ ಗುರುಗಳೇ, ಇಂತಹ ಗುರು ವೃಂದಕ್ಕೆ ಗುರುಪೂರ್ಣಿಮೆಯೆಂದು ಗೌರವ ಸೂಚಿಸುವುದು ಎಲ್ಲರ ಕರ್ತವ್ಯವಾಗಿದೆ.
ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಕೇವಲ ಯೋಗ ಕ್ಷೇತ್ರದ ಸೇವೆಗೆ ಮೀಸಲಾಗದೆ ಕಲೆ ಮತ್ತು ಕಲಾವಿದರನ್ನು, ಸಾಧಕರನ್ನು ಪ್ರೋತ್ಸಾಹಿಸುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Upper Bhadra Project: ಭದ್ರಾ ಮೇಲ್ದಂಡೆ | 25 ರಂದು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ
ಯೋಗ ಶಿಕ್ಷಕರಾದ ಲಲಿತ ಬೇದ್ರೆ, ಸರ್ವದಾ, ಸುಭದ್ರಮ್ಮ, ಕವಿತಾಕವಾಡಿಗರಹಟ್ಟಿ, ಸಮಾಜಸೇವಕರಾದ ಚಿತ್ರದುರ್ಗ ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್. ಸತ್ಯಣ್ಣ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ಎಲ್.ಎಸ್.ಬಸವರಾಜ್, ಹಿರಿಯ ಯೋಗ ಸಾಧಕಿ ವನಜಾಕ್ಷಮ್ಮ ಇತರರು ಭಾಗವಹಿಸಿದ್ದರು.
