Connect with us

    ಬಸವಣ್ಣನ ಉದಾತ್ತ ಚಿಂತನೆಗಳು ಬುದ್ದಿ, ಮನಸ್ಸನ್ನು  ಕ್ರಿಯಾಶೀಲಾಗೊಳಿಸುತ್ತದೆ | ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

    ಭೋವಿ ಗುರುಪೀಠದಲ್ಲಿ ಬಸವ ಜಯಂತಿ ಆಚರಣೆ

    ಮುಖ್ಯ ಸುದ್ದಿ

    ಬಸವಣ್ಣನ ಉದಾತ್ತ ಚಿಂತನೆಗಳು ಬುದ್ದಿ, ಮನಸ್ಸನ್ನು  ಕ್ರಿಯಾಶೀಲಾಗೊಳಿಸುತ್ತದೆ | ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

    CHITRADURGA NEWS | 10 MAY 2024

    ಚಿತ್ರದುರ್ಗ: ಬಸವಣ್ಣರವರ ಉದಾತ್ತ ಚಿಂತನೆಗಳು ನಮ್ಮ ಬುದ್ದಿ, ಮನಸ್ಸುಗಳನ್ನು ಕ್ರಿಯಾಶೀಲಾಗೊಳಿಸುತ್ತದೆ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.

    ಇದನ್ನೂ ಓದಿ: ಇಂದಿರಾ ಗಾಂಧಿ ವಸತಿ ಶಾಲೆಗೆ ಉತ್ತಮ ಫಲಿತಾಂಶ 

    ನಗರದ ಭೋವಿ ಗುರುಪೀಠದಲ್ಲಿ ಬಸವ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬಸವಣ್ಣರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಶ್ರೀಗಳು,  ಬಸವಣ್ಣನವರು ಸಮಾಜೋ-ಧಾರ್ಮಿಕ ಸುಧಾರಕರು. ಬಸವಣ್ಣನವರ ಜೀವನ ಸಂದೇಶದಿಂದ ಉದಾತ್ತ ನಿಲುವಿನಿಂದ ಅಧ್ಯಯನ ಕೈಗೊಳ್ಳಬೇಕು. ಬಸವಣ್ಣನವರ ಬದುಕು ಸರಳವಾದದ್ದು, ಸತತ ಪ್ರಯತ್ನದಿಂದ ಬದಲಾವಣೆ ತಂದವರು, ಅವರ ವಚನಗಳು ಉದಾತ್ತ ಚಿಂತನೆಗಳಿಂದ ಒಳಗೊಂಡಿದೆ ಎಂದರು.

    ಇದನ್ನೂ ಓದಿ: ಶಿವಶರಣ ಮಾದರ ಚನ್ನಯ್ಯ ಗುರು ಪೀಠಕ್ಕೆ ವಟು ಸ್ವೀಕಾರ | ಜಯಬಸವ ದೇವರೆಂದು ನಾಮಕರಣ 

    ಬಸವಣ್ಣನವರ ವಚನಗಳಲ್ಲಿ ಉಪಮಾನಗಳ ಅಪುರ್ವತೆ ಮತ್ತು ನವೀನತೆ, ಮೃದುಹಾಸ್ಯ, ಶ್ಲೇಷೆ, ವಸ್ತುವಿನ ನೂತನತೆ, ಸಮಾಜದ ನ್ಯೂನತೆ, ಅನುಭಾವಿಕತೆ, ಮೃದುಮಧುರ ಶೈಲಿ, ನಿಷ್ಠಾವಂತರ ನಿಷ್ಠೂರತೆ, ಪ್ರತಿಮಾಯೋಜನೆ, ಸೂಕ್ಷ್ಮ ಪರಿವೀಕ್ಷಣೆ, ಜೀವನದ ಕಟು ಅನುಭವಗಳ ನೈಜನಿರೂಪಣೆ, ಸರಳತೆ, ಅಭಿವ್ಯಕ್ತಿಯ ಪರಿಣಾಮ ರಮಣೀಯತೆ, ಭಕ್ತಿಯ ತೀವ್ರತೆಗಳಿಂದ ವಿಭಿನ್ನ ಮನಸ್ಸುಗಳಿಗೆ ಸಮಾಧಾನದ ವಿವರಣೆ ಸಿಗುತ್ತದೆ.

    ಉದಾತ್ತ ಸಂದೇಶಗಳನ್ನು ಒಳಗೊಂಡ ಅವರ ವಿಚಾರಗಳು ಸಮಗ್ರ ಬೌದ್ಧಿಕ ಮತ್ತು ಭಾವನಾತ್ಮಕ ವಿಚಾರಗಳ ಸಾರ್ಥಕ್ಯವನ್ನು ಪಡೆಯುತ್ತೇವೆ ಎಂದು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ತಿಳಿಸಿದರು.

    ಇದನ್ನೂ ಓದಿ: ನಗರಸಭೆ ಆಸ್ತಿ ಒತ್ತುವರಿ ಮಾಡಿದ್ದೀರಾ ಹಾಗಾದ್ರೆ ಈ ಸುದ್ದಿ ಓದಿ..

    ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮಿಜಿ ಮಾತನಾಡಿ, ಹನ್ನೆರಡನೆ ಶತಮಾನದಲ್ಲಿ ಕನ್ನಡನಾಡಿನಲ್ಲಿ ಮಹಾತ್ಮಾ ಬಸವೇಶ್ವರರು ಹಾಗೂ ಅವರನ್ನು ಅನುಸರಿಸಿದ ಅಸಂಖ್ಯಾತ ಶಿವಶರಣರ ವಿಚಾರಧಾರೆಗಳು ಮಾತ್ರ ಅತ್ಯಂತ ಶ್ರೇಷ್ಠ ಮಾರ್ಗವನ್ನು ಹಾಕಿಕೊಟ್ಟಿವೆ ಎಂಬುದು ಮಾತ್ರ ಸತ್ಯ ಸಂಗತಿ.

    ಬಸವ ಮಾರ್ಗ ಸರಳ ಸಹಜ ಮಾರ್ಗ, ಈ ಮಾರ್ಗದ ಪ್ರಕಾರ ಸ್ವರ್ಗ ಮತ್ತು ಭೂಲೋಕಗಳು ಬೇರೆಯಾಗಿ ಇಲ್ಲ. ಬದುಕಿನ ಶುದ್ಧಿಗಾಗಿ ಮನಸ್ಸಿನ ಶುದ್ದಿ ಅವಶ್ಯಕ. ಮನಸ್ಸು ಶುದ್ದಿಯಾದಾಗ ನಮ್ಮ ನಡೆ-ನುಡಿಗಳು ಶುದ್ಧವಾಗುತ್ತವೆ. ನಡೆ-ನುಡಿಗಳು ಶುದ್ಧಿಯಾದಾಗ ಅಂಥವನಿಗೆ ಆತ್ಮ ತೃಪ್ತಿಯ ಜೊತೆಗೆ ಸಾಮಾಜಿಕ ನೆಮ್ಮದಿಯೂ ಉಂಟಾಗುತ್ತದೆ. ಹೀಗೆ ವ್ಯಕ್ತಿ ಮತ್ತು ಸಮಾಜ ಎರಡರ ನೆಮ್ಮದಿ ಹಾಗೂ ಶಯೋಭಿವೃದ್ಧಿಯು ನಮ್ಮ ಶುದ್ಧ ನಡೆ-ನುಡಿಯಲ್ಲಿ ಆಡಗಿವೆ ಎಂದರು.

    ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯ ಎಸ್ ಎಸ್ ಎಲ್ ಸಿ ಟಾಪರ್ಸ್ ಇವರೇ ನೋಡಿ 

    ಈ ವೇಳೆ ಹೊಸದುರ್ಗ ಭಗಿರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ , ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಹಂಪಿಯ ಮಾತಂಗಮುನಿ ಮಠದ ಶ್ರೀ ಮಾತಂಗಮುನಿ ಸ್ವಾಮೀಜಿ, ಲಂಬಾಣಿ ಗುರುಪೀಠದ ಶ್ರೀ ನಂದ ಮಸಂದ ಸ್ವಾಮೀಜಿ, ಶ್ರೀ ವೇದಾರ ಗುರುಪೀಠದ ಕೇತೇಶ್ವರ ಸ್ವಾಮೀಜಿ, ಕೊರಟಗೆರೆಯ ಶ್ರೀ ಮಹಾಲಿಂಗ ಸ್ವಾಮೀಜಿ, ರಾಣೆಬೆನ್ನೂರಿನ ಶ್ರೀ ಗಜದಂಡ ಸ್ವಾಮಿಗಳು, ಸಿದ್ದಾರೂಢ ಆಶ್ರಮದ ಶ್ರೀ ಜಯದೇವ ಸ್ವಾಮೀಜಿ, ತಿಳುವಳ್ಳಿಯ ಶ್ರೀ ನಿರಂಜನಾಂದ ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮಿಗಳು  ಸತ್ಯಕ್ಕ ಜಯದೇವಿತಾಯಿ ಶ್ರೀ ಪೂರ್ಣಾನಂದ ಸ್ವಾಮಿಗಳು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top