Connect with us

    ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಸನ್ಮಾನ | ಶಿಕ್ಷಕರಿಂದ ತುಂಬಿ ತುಳುಕಿದ ತರಾಸು ರಂಗಮಂದಿರ

    ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಸನ್ಮಾನ

    ಮುಖ್ಯ ಸುದ್ದಿ

    ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಸನ್ಮಾನ | ಶಿಕ್ಷಕರಿಂದ ತುಂಬಿ ತುಳುಕಿದ ತರಾಸು ರಂಗಮಂದಿರ

    ಚಿತ್ರದುರ್ಗ ನ್ಯೂಸ್.ಕಾಂ: ಜಿಲ್ಲಾಡಳಿತ, ಶಿಕ್ಷಣ ಇಲಾಖೆಯಿಂದ ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರ ಜಯಂತಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಅದ್ದೂರಿಯಾಗಿ ನೆರವೇರಿತು. ಶಿಕ್ಷಕರನ್ನು ಸ್ಮರಿಸುವ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಶಿಕ್ಷಕರು, ವಿದ್ಯಾರ್ಥಿಗಳು, ಕುಟುಂಬದವರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು.

    ಶಿಕ್ಷಕರಿಂದ ತರಾಸು ರಂಗಮಂದಿರ ತುಂಬಿ ತುಳುಕುತ್ತಿತ್ತು. ರಂಗಮಂದಿರದ ಒಳಗೆ ಜಾಗ ಸಾಲದಾಗಿ ಹೊರಗೆ ಎಲ್‍ಇಡಿ ಪರದೆ ಅಳವಡಿಸಿ ಒಳಗೆ ನಡೆಯುವ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.

    ಈ ವೇಳೆ ಜಿಲ್ಲಾ ಮಟ್ಟದ ಉತ್ತಮ ಹಾಗೂ ವಿಶೇಷ ಪ್ರಶಸ್ತಿಗೆ ಭಾಜನರಾಗ 25 ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಅವರ ಭವಿಷ್ಯದ ಬಗ್ಗೆ ಕಾಳಜಿ ವಹಿಸಿ ಮಾರ್ಗದರ್ಶಿಗಳಾಗಿ ನಿಲ್ಲುವವರು ಶಿಕ್ಷಕರು. ಅವರಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಹಾಗೂ ದೇಶಪ್ರೇಮ ಬೆಳಸಿ ಉತ್ತಮ ಪ್ರಜೆಗಳನ್ನಾಗಿಸುವ ಜವಬ್ದಾರಿ ಶಿಕ್ಷಕರ ಮೇಲಿದೆ ಎಂದರು.

    ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರಾಗಿ ವಿದ್ಯಾರ್ಥಿಗಳ ಪ್ರೀತಿ ಪಾತ್ರರಾಗಿದ್ದರು. ಅವರ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆದರು. ಮುಂದೆ ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿಗಳಾಗಿ ಕೀರ್ತಿ ಹೊಂದಿರುವುದು ಇತಿಹಾಸ ಪುಟದಲ್ಲಿ ಸೇರಿದೆ. ಇವರ ಸ್ಮರಣಾರ್ಥ ಶಿಕ್ಷಕರ ದಿನಾಚರಣೆಯನ್ನು ಇಡೀ ರಾಷ್ಟ್ರದಲ್ಲಿ ವಿಜೃಭಣೆಯಿಂದ ಆಚರಿಸಲಾಗುತ್ತಿದೆ ಎಂದರು.

    ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಏನು ಬೇಕಾದರು ಮಾಡಬಹುದು, ಗುರು ಎಂಬ ಪದವು ಶ್ರೇಷ್ಠವಾದುದ್ದು, ಪ್ರತಿಯೊಂದು ರಂಗದಲ್ಲೂ ಗುರು ಇರುತ್ತಾರೆ, ಗುರುವಿನ ಅರ್ಶಿವಾದ ಇದ್ದರೆ ಏನನ್ನು ಬೇಕಾದರು ಸಾಧಿಸಬಹುದು. ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಈ ಫಲಿತಾಂಶ ಹೀಗೆ ಮುಂದುವರೆಯಬೇಕು ಎಂದು ಆಶಿಸಿದರು.

    ಇದನ್ನೂ ಓದಿ: ಜಿಲ್ಲಾ ಮಟ್ಟದ ಉತ್ತಮ, ವಿಶೇಷ ಶಿಕ್ಷಕರ ಪಟ್ಟಿ ಪ್ರಕಟ: ಸೆ.5 ರಂದು ಸನ್ಮಾನ

    ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಮಾತನಾಡಿ, ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡುವ ಶಿಕ್ಷಕರಿಗೆ ಮಾತ್ರ ಸಾಧ್ಯ. ಮಕ್ಕಳಿಗೆ ಬಹಳ ಸಮಾಧಾನದಿಂದ ಶಿಕ್ಷಣ ನೀಡಿದರೆ ದೇಶ ಭವಿಷ್ಯವನ್ನು ರೂಪಿಸುವಂತಹ ದೊಡ್ಡ ವ್ಯಕ್ತಿಗಳಾಗಿ ಬೆಳೆಯುತ್ತಾರೆ ಎಂದರು.

    ಸೈನಿಕರು, ಅಧಿಕಾರಿಗಳು, ನಾಯಕರು ಸೇರಿದಂತೆ ಎಲ್ಲರನ್ನೂ ತಯಾರು ಮಾಡುವ ಪವಿತ್ರ ಕೆಲಸ ಶಿಕ್ಷಕ ವೃತ್ತಿಯಾಗಿದೆ. ತಂದೆ-ತಾಯಿಗಳು ಮಕ್ಕಳನ್ನ ಮಾತ್ರ ಪ್ರೀತಿ ಮಾಡುತ್ತಾರೆ. ಶಿಕ್ಷಕರು ಎಲ್ಲಾ ಮಕ್ಕಳ ಮೇಲೆ ಪ್ರೀತಿಯಿಂದ ನೊಡುತ್ತಾರೆ ಎಂದರು.

    ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ಶಿಕ್ಷಕರ ದಿನಾಚರಣೆ ನಾವೆಲ್ಲರೂ ಶಿಕ್ಷಕರಿಗೆ ಗೌರವ ಸಲ್ಲಿಸುವ ಸಮಾರಂಭವಾಗಿದೆ. ಗುರುವಿನಲ್ಲೇ ದೇವರನ್ನು ಕಾಣುವ ದೇಶ ಅಂದರೆ ಅದು ಭಾರತ, ಬದುಕಿನ ಕೊನೆಯತನಕ ನೆನಪಿಸಿಕೊಳ್ಳುವುದು ಗುರುವನ್ನು ಮಾತ್ರ, ಮಕ್ಕಳನ್ನು ತಿದ್ದುವುದರ ಜೊತೆಗೆ ಅವರ ಜವಾಬ್ದಾರಿಯು ಕೂಡ ಶಿಕ್ಷಕರ ಮೇಲೆ ಇರುತ್ತದೆ. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಹೆಚ್ಚು ಇರುತ್ತದೆ, ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸುವುದು ಶಿಕ್ಷಕರು ಮಾತ್ರ, ಶಿಕ್ಷಣ ಕಲಿಸುವುದರ ಜೊತೆಗೆ ಸಮಾಜದ ಕೆಲಸಗಳನ್ನು ನಿರ್ವಹಿಸುತ್ತಾರೆ ಎಂದು ಹೇಳಿದರು.

    ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಬೆಳವಣಿಗೆಯಲ್ಲಿ ಹಾಗೂ ಸಮಾಜದಲ್ಲಿ ಬದುಕಲು ಎಲ್ಲಾ ಗುಣಗಳನ್ನು ಕಲಿಸುವುದು ಗುರುಗಳು ಮಾತ್ರ, ಗುರುವಿಲ್ಲ ಎಂದರೆ ಜೀವನದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಶಿಕ್ಷಕರು ಮಕ್ಕಳಿಗೆ ಶ್ರದ್ಧೆ ಹಾಗೂ ಮನಸ್ಸಿನಿಂದ ಶಿಕ್ಷಣವನ್ನು ಕಲಿಸುತ್ತಾರೆ. ನಿಮ್ಮ ಸಹಾಕರದಿಂದಲೇ ನಮ್ಮ ಭಾರತ ದೇಶ ಸಧೃಢವಾಗಿತ್ತಾದೆ. ಶಿಕ್ಷಕರು ದೊಡ್ಡ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಚಿತ್ರದುರ್ಗ ಜಿಲ್ಲೆ ಶೈಕ್ಷಣಿಕವಾಗಿ ಮೊದಲೇ ಸ್ಥಾನವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.

    ಸಿ.ಟಿ.ಇ ಪ್ರಾಂಶುಪಾಲರು ಟಿ.ಜಿ.ಲೀಲಾವತಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ಡಿಡಿಡಿಪಿಐ ಕೆ.ರವಿಶಂಕರ್ ರೆಡ್ಡಿ, ಡಯಟ್ ಉಪನಿರ್ದೇಶಕ ಎಂ.ನಾಸೀರುದ್ದೀನ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮತ್ತಿತರರಿದ್ದರು.

    (ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)

    (ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ  https://www.facebook.com/chitradurganews?mibextid=ZbWKwL)

    (ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ.

     https://chat.whatsapp.com/EQUQpKalYFT1fVcJDTDjCk)

     

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top