ಕ್ರೈಂ ಸುದ್ದಿ
ಚಿತ್ರಹಳ್ಳಿ ಪೊಲೀಸರ ಕಾರ್ಯಾಚರಣೆ | ಐವರ ಬಂಧನ | 5 ಲಕ್ಷ ರೂ. ಮೌಲ್ಯದ ಶ್ರೀಗಂಧ ವಶ

CHITRADURGA NEWS | 14 FEBRUARY 2025
ಚಿತ್ರದುರ್ಗ: ಚಿತ್ರಹಳ್ಳಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಐದು ಜನ ಶ್ರೀಗಂಧ ಕಳ್ಳರನ್ನು ಬಂಧಿಸಿದ್ದು, 5 ಲಕ್ಷ ರೂ. ಮೌಲ್ಯದ 75 ಕೆಜೆ ಶ್ರೀಗಂಧ ವಶಕ್ಕೆ ಪಡೆದುಕೊಳ್ಳಲಾಗಿದೆ.
ಫೆ.10 ರಂದು ರಾತ್ರಿ ಚಿತ್ರಹಳ್ಳಿ ಪಿಎಸ್‍ಐ ಕಾಂತರಾಜು ಹಾಗೂ ತಂಡ ಗಸ್ತಿನಲ್ಲಿದ್ದಾಗ ಎಚ್.ಡಿ.ಪುರದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದವರನು ಹಿಡಿದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಎಮ್ಮೆ ಕಟ್ಟಿಹಾಕಿದ್ದಕ್ಕೆ ಮಚ್ಚಿನಿಂದ ಹಲ್ಲೆ | 10 ವರ್ಷ ಜೈಲು ಶಿಕ್ಷೆ
ಚಿತ್ರದುರ್ಗದ ಮಂಜುನಾಥ, ರವೀಂದ್ರ, ರಾಜೇಂದ್ರ, ಚಮನ್‍ಸಾಬ್ ಹಾಗೂ ಲಕ್ಕಿಹಳ್ಳಯ ಭೂತಪ್ಪ ಬಂಧಿತರಾಗಿದ್ದು, ಇವರ ಬಳಿ ಮಚ್ಚು, ಕಾರದ ಪುಡಿ, ರಾಡ್ ಸಿಕ್ಕಿವೆ.
ವಿಚಾರಣೆ ನಡೆಸಿದಾಗ ತಾವು ಬಚ್ಚಿಟ್ಟಿದ್ದ ಶ್ರೀಗಂಧದ ತುಂಡುಗಳ ಬಗ್ಗೆ ಬಾಯಿ ಬಿಟ್ಟಿದ್ದು, ಪೊಲೀಸರು ಎಲ್ಲವನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಆಂಧ್ರಪ್ರದೇಶದ ಹಗಲೇ ಎನ್ನುವ ಸ್ಥಳದಲ್ಲಿರುವ ಗಂಧದ ಎಣ್ಣೆ ತಯಾರಿಸುವ ಕಾರ್ಖಾನೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಬಂಧಿತರಿಂದ ವಶಪಡಿಸಿಕೊಂಡಿರುವ ಶ್ರೀಗಂಧ ಉಪ್ಪರಿಗೇನಹಳ್ಳಿಯ ದಿನೇಶ್ ಅವರ ತೋಟ ಹಾಗೂ ಸರ್ಕಾರಿ ಜಾಗದಲ್ಲಿ ಕಡಿದಿರುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನರೇಗಾ ತಾಂತ್ರಿಕಾ ಸಹಾಯಕ ಕೆಲಸದಿಂದ ವಜಾ
ಆರೋಪಿಗಳ ವಿಚಾರಣೆ ನಡೆಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಗದು ಬಹುಮಾನ ನೀಡಿದ್ದಾರೆ. ಹೊಳಲ್ಕೆರೆ ಸಿಪಿಐ ಚಿಕ್ಕಣ್ಣ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು ತಿಳಿಸಿದ್ದಾರೆ.
