Connect with us

    ಜಾನುವಾರು ಕಳ್ಳರ ಬಂಧನ | 5 ವಾಹನ, ₹ 1,55,000 ವಶ

    crime

    ಕ್ರೈಂ ಸುದ್ದಿ

    ಜಾನುವಾರು ಕಳ್ಳರ ಬಂಧನ | 5 ವಾಹನ, ₹ 1,55,000 ವಶ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 04 JULY 2024
    ಚಿತ್ರದುರ್ಗ: ಅಂತರ ಜಿಲ್ಲಾ ಜಾನುವಾರು ಕಳ್ಳರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹ 1,55,000 ನಗದು ಮತ್ತು ಕೃತ್ಯಕ್ಕೆ ಬಳಸಿದ್ದ 5 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

    ಹೊಸದುರ್ಗದ ಕಲ್ಲೇಶ್ವರ ಬಡಾವಣೆ ನಿವಾಸಿ ತೌಫೀಕ್‌ (30),ಭದ್ರಾವತಿಯ ನವಾಜ್‌ ಪಾಷ (26) ಹಾಗೂ ಭದ್ರಾವತಿಯ ತಿಪ್ಪಲಾಪುರ ಕ್ಯಾಂಪ್‌ನ ದಾದಪೀರ್‌ (30) ಬಂಧಿತರು.

    ಜೂನ್‌ 17 ರಂದು ಹೊಸದುರ್ಗ ತಾಲ್ಲೂಕು ಜಾನಕಲ್‌ ಗ್ರಾಮದ ದಾದವಲಿ ಅವರ ಮನೆ ಮುಂಭಾಗದಲ್ಲಿ ಕಟ್ಟಿಹಾಕಿದ್ದ ಹಸು ಕಳ್ಳತನವಾಗಿದೆ ಎಂದು ಹೊಸದುರ್ಗ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

    ದನದ ವ್ಯಾಪಾರ ಮಾಡುತ್ತಿದ್ದ ಆರೋಪಿಗಳು ತಮ್ಮ ಮಾರುತಿ ರಿಟ್ಜ್‌ ಕಾರಿನಲ್ಲಿ ಹಗಲಿನಲ್ಲಿ ಹಳ್ಳಿಗಳಲ್ಲಿ ಸುತ್ತಾಡಿ ರಾತ್ರಿ ಸಮಯದಲ್ಲಿ ಕಳ್ಳತನದ ಮಾಡುತ್ತಿದ್ದರು. ಪೊಲೀಸರಿಗೆ ಅನುಮಾನ ಬಾರದಂತೆ ಕಳ್ಳತನಕ್ಕೆ ಮಹೀಂದ್ರಾ ಸ್ಕಾರ್ಪಿಯೋ, ಅಶೋಕ ಲೈಲಾಂಡ್, ಟಾಟಾ ಅರಿಯಾ ಮತ್ತು ಮಹೀಂದ್ರ ಝೈಲೋ ವಾಹನಗಳನ್ನು ಬಳಸಿಕೊಳ್ಳುತ್ತಿದ್ದರು. ಕಳ್ಳತನ ಮಾಡಿದ ದನಗಳನ್ನು ಗ್ರಾಮಗಳ ವಾರದ ಸಂತೆಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಬಂದ ಹಣವನ್ನು 3 ಜನರು ಹಂಚಿಕೊಳ್ಳುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.

    ಕ್ಲಿಕ್‌ ಮಾಡಿ ಓದಿ: ವಿಎಲ್‌ಟಿ, ಪ್ಯಾನಿಕ್‌ ಬಟನ್ ಅಳವಡಿಕೆ ಕಡ್ಡಾಯ | ನಿರ್ಲಕ್ಷಿಸಿದರೆ ₹ 1000 ದಂಡ ಖಚಿತ

    ಒಟ್ಟು 13 ಹಸುಗಳನ್ನು ಕಳ್ಳತನ ಮಾಡಿ ಹೊಳೆಹೊನ್ನೂರು, ಭದ್ರಾವತಿ ಸಂತೆಗಳಲ್ಲಿ 3,15,000 ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಆರೋಪಿತರಿಂದ ₹ 1,55,000 ನಗದು ವಶ ಪಡಿಸಿಕೊಂಡಿದ್ದಾರೆ. ಉಳಿದ ಹಣವನ್ನು ಖರ್ಚು ಮಾಡಿರುವುದಾಗಿ ತಿಳಿಸಿದ್ದಾರೆ.

    ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಹೀಂದ್ರಾ ಸ್ಕಾರ್ಪಿಯೋ, ಅಶೋಕ ಲೈಲಾಂಡ್‌, ಟಾಟಾ ಅರಿಯಾ, ಮಹೀಂದ್ರ
    ಝೈಲೋ ಹಾಗೂ ಮಾರುತಿ ರಿಟ್ಜ್‌ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

    ಕ್ಲಿಕ್‌ ಮಾಡಿ ಓದಿ: ವಾಹನ ಚಾಲಕರೇ ಎಚ್ಚರ…ನಗರದಲ್ಲಿ ಬಿಗಿಯಾಗಲಿದೆ ಟ್ರಾಫಿಕ್‌ ರೂಲ್ಸ್‌ | ಸಿದ್ಧವಾಗಿದೆ ಮಾಸ್ಟರ್‌ ಪ್ಲಾನ್‌

    ಹೊಸದುರ್ಗ ಪೊಲೀಸ್‌ ಠಾಣೆಯ ಪಿಐ ಎನ್‌.ತಿಮ್ಮಣ್ಣ, ಪಿಎಸ್‌ಐ ಗಳಾದ ಮಹೇಶ್‌ ಕುಮಾರ್‌, ಭೀಮನಗೌಡ ಪಾಟೀಲ್‌ ಹಾಗೂ ಸಿಬ್ಬಂದಿ ಜಯರಾಜ, ಕುಮಾರ್‌, ರಾಜಣ್ಣ, ತಿಪ್ಪೇಸ್ವಾಮಿ, ಗಂಗಾಧರ ಇವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೆಂದರ್ ಕುಮಾರ್ ಮೀನಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top