Connect with us

    ಕುರಿ, ಮೇಕೆ ಸಾಕಾಣಿಕೆಗೆ ಅರ್ಜಿ ಅಹ್ವಾನ

    ಸಾಂದರ್ಭಿಕ ಚಿತ್ರ

    ಮುಖ್ಯ ಸುದ್ದಿ

    ಕುರಿ, ಮೇಕೆ ಸಾಕಾಣಿಕೆಗೆ ಅರ್ಜಿ ಅಹ್ವಾನ

    CHITRADURGA NEWS | 17 JULY 2024

    ಚಿತ್ರದುರ್ಗ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದಿಂದ 2024-25ನೇ ಸಾಲಿಗೆ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 20+1 ಕುರಿ ಅಥವಾ ಮೇಕೆ ಸಾಗಣಿಕೆಗೆ ಅರ್ಜಿ ಆಹ್ವಾನಿಸಲಾಗಿದೆ.

    ಇದನ್ನೂ ಓದಿ: RAIN; ಬಾಗೂರಿನಲ್ಲಿ ಅತೀ ಹೆಚ್ಚು ಮಳೆ | ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ | ಇಲ್ಲಿದೆ ವರದಿ..

    ನಿಗಮದ ಕೃಷಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ನೊಂದಾಯಿಸಿಕೊAಡ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದವರು ಅರ್ಜಿ ಸಲ್ಲಿಸಬಹುದು. ಚಿತ್ರದುರ್ಗ ಜಿಲ್ಲೆಗೆ ಒಟ್ಟು 706 ಘಟಕಗಳನ್ನು ನೀಡಲು ಗುರಿ ನಿಗಧಿ ಮಾಡಲಾಗಿದೆ.

    ಪ್ರತಿ ಘಟಕ್ಕೆ ರೂ.1,75,000/- ವೆಚ್ಚ ನಿರ್ಧರಿಸಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರದಿಂದ ರೂ.43,750 ಸಹಾಯ ಧನ ನೀಡಲಾಗುವುದು. ಫಲಾನುಭವಿಗಳು ರೂ.43,750ಗಳ ವಂತಿಕೆ ನೀಡಬೇಕು. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ರೂ.87,500ಕ್ಕೆ ಶೇ.9.26ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರಕಲಿದೆ. ಫಲಾನುಭವಿಗಳು 20+1 ಕುರಿ ಅಥವಾ ಮೇಕೆಗಳನ್ನು ಖರೀದಿಸಿ ಸ್ವಂತವಾಗಿ ಸಾಗಾಣಿಕೆ ಮಾಡಬಹುದು.

    ಕುರಿ ಮತ್ತು ಉತ್ಪಾದಕರ ಸಹಕಾರ ಸಂಘಗಳಲ್ಲಿ ಅರ್ಜಿಗಳು ದೊರೆಯುತ್ತವೆ. ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಸಹಕಾರಿ ಸಂಘ ಅಥವಾ ಚಿತ್ರದುರ್ಗ ಪಶು ಆಸ್ಪತ್ರೆ ಆವರಣದಲ್ಲಿರುವ ನಿಗಮದ ಸಹಾಯಕ ನಿರ್ದೇಶಕ ಕಚೇರಿಗೆ ಜುಲೈ 31 ರ ಸಂಜೆ 5:30ರೊಳಗಾಗಿ ಸಲ್ಲಿಸಬಹುದು.

    ಇದನ್ನೂ ಓದಿ: BANGALORE; ಚಿತ್ರದುರ್ಗದ‌ ಅಭಿವೃದ್ಧಿ ಕುರಿತು ಬೆಂಗಳೂರಿನಲ್ಲಿ ಸಚಿವರು,‌ ಸಂಸದರ‌ ಸಭೆ

    ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08194-222718, 9448656231ಕ್ಕೆ ಸಂಪರ್ಕಿಸಬಹುದು ಅಥವಾ ಕಚೇರಿ ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top