Connect with us

    ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಸರ್ಕಾರದಿಂದಲೇ ಅರ್ಜಿ ಆಹ್ವಾನ

    ಪರಿಶಿಷ್ಟ ವರ್ಗಗಳ ಇಲಾಖೆ

    ಮುಖ್ಯ ಸುದ್ದಿ

    ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಸರ್ಕಾರದಿಂದಲೇ ಅರ್ಜಿ ಆಹ್ವಾನ

    CHITRADURGA NEWS | 20 APRIL 2024

    ಚಿತ್ರದುರ್ಗ: ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ವರ್ಗದ(ಎಸ್.ಟಿ.) ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿಗೆ ದಾಖಲಿಸಲು, ಪರಿಶಿಷ್ಟ ವರ್ಗಗಳ ಇಲಾಖೆ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಮೇ.9 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಮೇ 21 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ.

    ಇದನ್ನೂ ಓದಿ : ಚಿತ್ರದುರ್ಗ ಜಿಲ್ಲೆಯಲ್ಲಿ 99 ಮಂದಿ ಮತದಾನ | ಯಾರು ಅಂತಿರಾ ಈ ಸುದ್ದಿ ನೋಡಿ..

    5ನೇ ತರಗತಿಯಲ್ಲಿ ಶೇ. 60 ಕ್ಕಿಂತ ಹೆಚ್ಚು ಅಂಕಗಳಿಸಿರುವ, ವಾರ್ಷಿಕವಾಗಿ, ಕುಟುಂಬದ ವರಮಾನ ರೂ.2.00 ಲಕ್ಷ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ಧೃಡೀಕೃತ ಅಂಕಪಟ್ಟಿಯನ್ನು ಅರ್ಜಿ ಜೊತೆಗೆ ಕಡ್ಡಾಯವಾಗಿ ಲಗತ್ತಿಸಬೇಕು. ಮುಖ್ಯೋಪಾಧ್ಯಯರು ಕಡ್ಡಾಯವಾಗಿ ಶೇಕಡವಾರು ನಮೂದಿಸಿದ ಅಂಕಪಟ್ಟಿಯನ್ನು ಮಾತ್ರ ಆಯ್ಕೆ ಪರಿಗಣಿಸಲಾಗುವುದು. ಅಂಕಪಟ್ಟಿಯಲ್ಲಿನ ಗ್ರೇಡ್‍ಅನ್ನು ನಮೂದಿಸಿದ್ದಲ್ಲಿ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.

    ಉಚಿತ ಅರ್ಹತಾ ಪರೀಕ್ಷಾ ಮೂಲಕ ವಿದ್ಯಾರ್ಥಿಗಳು ಆಯ್ಕೆ ಮಾಡಲಾಗುವುದು. ಪೋಷಕರು ಆಯ್ಕೆ ಮಾಡಿದ ಪ್ರತಿಷ್ಠಿತ ಶಾಲೆಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಲಾಗುವುದು. ವಿದ್ಯಾರ್ಥಿಗಳ ಶುಲ್ಕ ಮತ್ತು ನಿರ್ವಹಣಾ ವೆಚ್ಚವನ್ನು ಸರ್ಕಾರದ ನಿಯಮಗಳ ಅಡಿ ಪ್ರವೇಶ ಪಡೆದ ಶಾಲೆಯು ನಿಗಧಿ ಪಡಿಸಿದ ದರದಲ್ಲಿ ನೀಡಲಾಗುವುದು.

    ಇದನ್ನೂ ಓದಿ : ಕರ್ನಾಟಕ ಮೋದಿ ಸರ್ಕಾರದ ಕೊಡುಗೆ ಚೊಂಬು | ಚುನಾವಣೆಯಲ್ಲಿ ಪಾಠ ಕಲಿಸಲು ಸುರ್ಜೆವಾಲಾ ಕರೆ

    ಆಯಾ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಹಾಗೂ ಚಿತ್ರದುರ್ಗ ನಗರದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಅರ್ಜಿ ಪಡೆದುಕೊಳ್ಳಬಹುದು. ಅಪೂರ್ಣಗೊಂಡ ಹಾಗೂ ಅವಧಿ ಮೀರಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನಾಗೇಂದ್ರನಾಯ್ಕ್ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top