ಮುಖ್ಯ ಸುದ್ದಿ
ಜಿಲ್ಲಾ ಆಸ್ಪತ್ರೆ, ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

CHITRADURGA NEWS | 07 FEBRUARY 2025
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲಾ ಆಸ್ಪತ್ರೆಗೆ ವೈದ್ಯರು ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಎಸ್‍ಎನ್‍ಸಿಯು ಸೇರಿದಂತೆ ಎರಡು ಮಕ್ಕಳ ತಜ್ಞರ ಹುದ್ದೆಗಳಿದ್ದು, ವಯೋಮಿತಿ 65 ವರ್ಷದೊಳಗಿರಬೇಕು. ಒಂದು ಅರವಳಿಕೆ ತಜ್ಞರ ಹುದ್ದೆಯಿದ್ದು ಈ ಮೂರು ಹುದ್ದೆಗಳಿಗೆ 1.10 ಲಕ್ಷ ರೂ. ವೇತನ ನಿಗಧಿ ಮಾಡಲಾಗಿದೆ.

ಇದನ್ನೂ ಓದಿ: ಶ್ರೀರಾಮುಲುಗೆ ಪೈಪೋಟಿ ಕೊಡುವಷ್ಟು ದೊಡ್ಡ ನಾಯಕ ನಾನಲ್ಲ | ಬಿ.ವೈ.ವಿಜಯೇಂದ್ರ
ಎಚ್‍ಡಿಯು, ಐಸಿಯು ವೈದ್ಯಾಧಿಕಾರಿ 3 ಹುದ್ದೆಗಳಿದ್ದು, 50 ಸಾವಿರ ವೇತನ ನಿಗಧಿಯಾಗಿದೆ.
ಎಸ್‍ಎನ್‍ಸಿಯು ವೈದ್ಯರ ಹುದ್ದೆ ಒಂದು ಖಾಲಿಯಿದ್ದು, ಇದಕ್ಕೂ 50 ಸಾವಿರ ವೇತನ ನಿಗಧಿಯಾಗಿದೆ. ತಾಯಿ ಆರೋಗ್ಯ ವಿಭಾಗದ ವೈದ್ಯರ ಹುದ್ದೆ ಖಾಲಿಯಿದೆ.
ಎನ್‍ಆರ್‍ಸಿ ವಿಭಾಗದ ವೈದ್ಯರ ಹುದ್ದೆ ಒಂದು ಖಾಲಿಯಿದ್ದು, 50 ಸಾವಿರ ವೇತನವಿದೆ. ಐಸಿಯು ಹುದ್ದೆ ವೈದ್ಯರ ಪೋಸ್ಟ್‍ಗೆ 50 ಸಾವಿರ ವೇತನ ನಿಗಧಿಯಾಗಿದೆ.
ಇದನ್ನೂ ಓದಿ: B.Ed ಫಲಿತಾಂಶ | SRS ಕಾಲೇಜಿಗೆ ಮೂರು ರ್ಯಾಂಕ್
ಆಡಿಯೋಲಾಜಿಸ್ಟ್ ಹುದ್ದೆ ಒಂದು ಖಾಲಿಯಿದ್ದು, 30 ಸಾವಿರ ವೇತನ ನಿಗಧಿಯಾಗಿದೆ.
ಆರ್‍ಕೆಎಸ್‍ಕೆ ಆಪ್ತ ಸಮಾಲೋಚಕರ 2 ಹುದ್ದೆಗಳಿದ್ದು, ಸಾಮಾನ್ಯ ವರ್ಗಕ್ಕೆ 1, ಪರಿಶಿಷ್ಟ ಪಂಗಡಕ್ಕೆ 1 ಮೀಸಲಾಗಿದೆ. ವೇತನ 15939 ರೂ. ನಿಗಧಿಯಾಗಿದೆ.
ಹಿರಿಯ ಮಹಿಳಾ ಆಪ್ತ ಸಹಾಯಕಿ ಹುದ್ದೆ ನೆಹರು ನಗರ ಆರೋಗ್ಯ ಕೇಂದ್ರದಲ್ಲಿ ಖಾಲಿಯಿದ್ದು, 15397 ರೂ. ವೇತನ ನಿಗಧಿ ಮಾಡಲಾಗಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಜಿಲ್ಲಾ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಂಯೋಜಕ 1 ಹುದ್ದೆಯಿದ್ದು, 30 ಸಾವಿರ ವೇತನವಿದೆ.
ಸದರಿ ನೇಮಕಾತಿಗಳನ್ನು ಮೆರಿಟ್ ಕಂ ರೋಸ್ಟರ್ ಪದ್ಧತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಫೆಬ್ರವರಿ 20 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ 9449843104 ಸಂಪರ್ಕಿಸಲು ಕೋರಿದೆ.
