CHITRADURGA NEWS | 10 AUGUST 2024

ಹೊಳಲ್ಕೆರೆ: ವ್ಯಕ್ತಿಗೆ ಸಾವು ಸಹಜ, ಸತ್ತ ನಂತರವೂ ಆತ ಮಾಡಿದ ಘನತೆವೆತ್ತ ಸಮಾಜಮುಖಿ ಕಾರ್ಯಗಳ ಮೂಲಕ ಸದಾ ನಮ್ಮೊಡನಿರುತ್ತಾರೆ, ಅಂಥವರ ಸಾಲಿಗೆ ಚಿತ್ರದುರ್ಗ ಬೃಹನ್ಮಠದ ಶೂನ್ಯಪೀಠ ಹಾಗೂ ಮುರುಗಿ ಪರಂಪರೆಯ ಮಹಾನುಭಾವರಿದ್ದು, ಅವರ ಸಾಧನೆಯು ಚಿರಸ್ಮರಣಿಯ ಎಂದು ಗುರುಮಠಕಲ್‌ನ ಖಾಸಾ ಮುರುಘಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಕ್ಲಿಕ್ ಮಾಡಿ ಓದಿ: Chitradurga fort: ಕೋಟೆಯ ಒನಕೆ ಓಬವ್ವನ ಕಿಂಡಿಯಲ್ಲಿ ಕುಸಿದು ಬಿದ್ದ ವ್ಯಕ್ತಿ | ಸಕಾಲಕ್ಕೆ ಹೊತ್ತು ತಂದು ಆಸ್ಪತ್ರೆ ಸೇರಿಸಿ ರಕ್ಷಿಸಿದ ಪ್ರವಾಸಿ ಮಿತ್ರರು

ಮುರುಘಾ ಮಠದಿಂದ ಹೊಳಲ್ಕೆರೆ ತಾಲ್ಲೂಕು ಗಿಲಿಕೇನಹಳ್ಳಿ ಗ್ರಾಮದಲ್ಲಿ ನಡೆದ ಅನುಭಾವ ಶ್ರಾವಣದ 3ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು,

ಸರ್ವಕ್ಷೇತ್ರಗಳಲ್ಲಿ ಶ್ರೀಮಠದ ಗುರುತರವಾದ ಕೊಡುಗೆ ಕಾಣಬಹುದಾಗಿದೆ. ಈ ಗ್ರಾಮವೂ ಸಹ ಪೀಠ ಪರಂಪರೆಯ ಜತೆಗೆ ಗುರುತಿಸಿಕೊಂಡಿರುವುದು ಸಹಿತವಾಗಿದೆ ಎಂದರು.

ರಾವಂದೂರು ಮುರುಘಾಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಮಾತನಾಡಿ, ಜನಮಾನಸದಲ್ಲಿ ಮುರುಘಾಮಠವು ಮುರಿಗಿಮಠವೆಂದೇ ಜನಜನಿತವಾಗಿದೆ. ಸಾರ್ವಜನಿಕರ ಹಿತಕ್ಕಾಗಿಯೇ ಶ್ರೀಮಠದ ಎಲ್ಲ ಕಾರ್ಯಗಳು ಯೋಜನೆಗಳು ಇವೆ. ಮಹಾತ್ಮರನ್ನು ನೆನೆಯುವ ಈ ಶ್ರಾವಣ ಒಳ್ಳೆಯದನ್ನೇ ಶ್ರಾವಣ ಮಾಡಿಕೊಳ್ಳಲು ಇರುವುದು ಎಂದು ತಿಳಿಸಿದರು.

ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಗಣ್ಯ ಪರಂಪರೆ ಹೊಂದಿರುವ ಮುರುಘಾಮಠವು ಸಾಮಾಜಿಕ, ಧಾರ್ಮಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತ ಬಂದಿದೆ. ಶ್ರೀಮಠವು ನಾಡಿನಾದ್ಯಂತ ಸ್ಥಾಪಿಸಿರುವ ಹಾಸ್ಟೆಲ್‌ಗಳಲ್ಲಿದ್ದು, ಓದಿದವರು ಸಮಾಜದಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು.

ಕ್ಲಿಕ್ ಮಾಡಿ ಓದಿ: Anjaneya Swamy festival; ಕಣಿವೆ ಆಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವ | ಶ್ರಾವಣ ಮಾಸದ ವಿಶೇಷ ಪೂಜೆ ಉತ್ಸವ

ಮುರುಘಾಮಠ ಗುರುಕುಲದ ಶ್ರೀ ಮುರುಘೇಶ ಸ್ವಾಮೀಜಿ ಮಾತನಾಡಿ, ಮುರುಘಾಮಠ ಎಂದರೆ ಅದೊಂದು ಶಕ್ತಿಪೀಠ, ಮುರಿಗಿ ಶಾಂತವೀರ ಸ್ವಾಮಿಗಳ ಗದ್ದುಗೆ ಪವಾಡ ಸದೃಶವಾದದ್ದು ಎಂದೇ ಜನ ಭಾವಿಸಿದ್ದಾರೆ. ಜನ ಯಾವುದನ್ನು ಸುಲಭವಾಗಿ ಪರಿಗಣಿಸಬಾರದು ಮತ್ತು ಅಲಕ್ಷ್ಯವಹಿಸಬಾರದು, ನಾವು ಜೀವನದಲ್ಲಿ ಅರಿತು ನಡೆಯಲಿಕ್ಕೆ ಮುರುಘಾಮಠವೇ ಸಾಕ್ಷಿ ಎಂದು ಹೇಳಿದರು.

ಶ್ರೀಮುರುಘಾಮಠ ಮತ್ತು ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮಿಗಳು ಮಾತನಾಡಿ, ಸಾಮಾಜಿಕ ಕಳಕಳಿಯೇ ಮುರುಘಾಮಠದ ಮೂಲ ಧ್ಯೇಯವಾಗಿತ್ತು. ಅದು ಈಗಲೂ ನಡೆದಿದೆ ಎಂದು ನುಡಿದರು.

ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಸಸಿ ನಡೆಲಾಯಿತು. ಬಸವೇಶ್ವರ ಆಸ್ಪತ್ರೆಯ ತಜ್ಞವೈದ್ಯರ ತಂಡ ಗ್ರಾಮದ 166 ಜನರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿ, ಔಷಧಿ ವಿತರಣೆ ಮಾಡಿದರು.

ಕ್ಲಿಕ್ ಮಾಡಿ ಓದಿ: loan facility; ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ | ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಈ ಸಂದರ್ಭದಲ್ಲಿ ಬಸವಕಲ್ಯಾಣದ ಶಿವಕುಮಾರ ಸ್ವಾಮಿಗಳು, ಹೊಳಲ್ಕೆರೆ ಒಂಟಿಕಂಬದ ಮುರುಘಾಮಠದ ತಿಪ್ಪೇರುದ್ರಸ್ವಾಮಿಗಳು, ಕಲ್ಕೆರೆಯ ಪೂರ್ಣಾನಂದ ಸ್ವಾಮಿಗಳು, ಅಲ್ಲಮಪ್ರಭು ಸಂಶೋಧನಾ ಕೇಂದ್ರದ ಡಾ. ವಿ. ನಾಗರಾಜ್ ಇದ್ದರು.

ಸಮಾರಂಭದಲ್ಲಿ ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ರಂಗಸ್ವಾಮಿ ಸ್ವಾಗತಿಸಿದರು. ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.