ಮುಖ್ಯ ಸುದ್ದಿ
ಮೆದೇಹಳ್ಳಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಅನ್ನದಾನ
ಚಿತ್ರದುರ್ಗ ನ್ಯೂಸ್.ಕಾಂ: ನಗರದ ಪ್ರಮುಖ ಧಾರ್ಮಿಕ ಕ್ಷೇತ್ರ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ನಿತ್ಯ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದೇವಸ್ಥಾನದ 24ನೇ ವರ್ಷದ ಬ್ರಹ್ಮೋತ್ಸವ ಪೂಜಾ ಅಂಗವಾಗಿ ಮಾಲಾಧಾರಿಗಳಿಗೆ ನವೆಂಬರ್ 16 ರಿಂದ ಜನವರಿ 13 ರವರೆಗೆ ಅನ್ನದಾನ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ನಗರದ ಮಾತಾ ಏಜೇನ್ಸಿ ಮಾಲಿಕರು, ಉದ್ಯಮಿಗಳಾದ ಟಿ.ಮಹಾಂತೇಶ್ ನ.16 ಗುರುವಾರ ಅನ್ನದಾನಕ್ಕೆ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ: ಅಂತರ್ ರಾಜ್ಯ ಶ್ರೀಗಂಧ ಕಳ್ಳರ ಗ್ಯಾಂಗ್ ಅರೆಸ್ಟ್
ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶರಣ್‍ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಇದೇ ದಿನ ಬೆಳಗ್ಗೆ 11 ಗಂಟೆಗೆ ಅಯ್ಯಪ್ಪ ದೇವಸ್ಥಾನದಲ್ಲಿ ಗಣ ಹೋಮ ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮಗಳು ನೆರವೇರಲಿವೆ. ಮಧ್ಯಾಹ್ನ 12.30 ಗಂಟೆಗೆ ಪೂರ್ಣಾಹುತಿ ಆನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಪೂಜೆ, ಹೋಮ ಹಾಗೂ ಪೂರ್ಣಾಹುತಿಗೆ ಸೀರೆ, ಕುಪ್ಪಸ, ಬೆಲ್ಲ, ಅಕ್ಕಿ ದವಸ ಧಾನ್ಯಗಳನ್ನು ಭಕ್ತಾದಿಗಳು ಸಮರ್ಪಿಸಬಹುದು.
ದೇವಸ್ಥಾನದ ಆವರಣದಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕಲ ಭಕ್ತಾದಿಗಳು ಭಾಗವಹಿಸಲು ಅಧ್ಯಕ್ಷರಾದ ಶರಣ್‍ಕುಮಾರ್, ಕಾರ್ಯದರ್ಶಿ ಎಂ.ಪಿ. ವೆಂಕಟೇಶ್, ಅಧ್ಯಕ್ಷ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.