ತಾಲೂಕು
ಗುಡ್ಡದ ತಿಮ್ಮಪ್ಪನಿಗೆ ಅನ್ನದಕೋಟೆ | ಹರಿದು ಬಂದ ಭಕ್ತ ಸಾಗರ
Published on
ಚಿತ್ರದುರ್ಗ ನ್ಯೂಸ್.ಕಾಂ: ಹೊಳಲ್ಕೆರೆ ತಾಲೂಕಿನ ಕುಮ್ಮಿನಘಟ್ಟದ ಗುಡ್ಡದ ಮೇಲಿರುವ ಶ್ರೀ ಗುಡ್ಡದ ತಿಮ್ಮಪ್ಪ ದೇವಸ್ಥಾನದಲ್ಲಿ ಶನಿವಾರ ಮಹಾಲಯ ಅಮಾವಾಸ್ಯೆ ಅಂಗವಾಗಿ ಅನ್ನದ ಕೋಟೆ ಕಾರ್ಯಕ್ರಮ ಜರುಗಿತು.
ಮಹಾಲಯ ಅಮಾವಾಸ್ಯೆ ಪ್ರಯುಕ್ತ ಪ್ರತಿ ವರ್ಷದಂತೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅನ್ನದ ಕೋಟೆ ನಿರ್ಮಿಸಿ ಭಕ್ತರು ತಮ್ಮ ಹರಕೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಇದನ್ನೂ ಓದಿ: ಕೆರೆಯಲ್ಲಿ ಮುಳುಗಿ ದಡ ಸೇರಿದರೂ ಬಿಡದ ಜವರಾಯ
ದೇವಸ್ಥಾನದ ಮುಂಭಾಗದಲ್ಲಿ 6 ಅಡಿ ಅಗಲ 6 ಅಡಿ ಉದ್ದ 2 ಅಡಿ ಎತ್ತರದ ಅನ್ನದ ಕೋಟೆಯನ್ನು ನಿರ್ಮಿಸಿ ಅದಕ್ಕೆ ಬೆಲ್ಲ ಬಾಳೆಹಣ್ಣು, ದ್ರಾಕ್ಷಿ ಗೋಡಂಬಿ ತುಪ್ಪ ಎಳ್ಳು ಸೂಸಲು ಮತ್ತಿತರ ವಸ್ತುಗಳನ್ನು ಭಕ್ತರು ಸಮರ್ಪಣೆ ಮಾಡಿದರು.
ಮಹಾ ಮಂಗಳಾರತಿ ನಂತರ ದಾಸಯ್ಯನವರು ದೊಡ್ಡೆಡೆ ಸೇವೆ ಸಲ್ಲಿಸಿದರು. ಭಾಗವಹಿಸಿದ್ದ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
ಈ ಕಾರ್ಯಕ್ರಮದಲ್ಲಿ ಹೊಳಲ್ಕೆರೆಯ ಶಾಸಕರಾದ ಡಾ.ಎಂ. ಚಂದ್ರಪ್ಪ ಕೂಡಾ ಭಾಗವಹಿಸಿದ್ದರು.
Continue Reading
You may also like...
Related Topics:Annadakote, Chitradurga, Chitradurga Updates, Dr.M.Chandrappa, Guddada Thimmappa, Holalkere, Kannada Latest News, Kummanaghatta, Mahalaya Amavasye, ಅನ್ನದಕೋಟೆ, ಕನ್ನಡ ಲೇಟೆಸ್ಟ್ ನ್ಯೂಸ್, ಕುಮ್ಮನಘಟ್ಟ, ಗುಡ್ಡದ ತಿಮ್ಮಪ್ಪ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಡಾ.ಎಂ.ಚಂದ್ರಪ್ಪ, ಮಹಾಲಯ ಅಮಾವಾಸ್ಯೆ, ಹೊಳಲ್ಕೆರೆ
Click to comment