ಮುಖ್ಯ ಸುದ್ದಿ
POLICE; ಪೊಲೀಸರ ಮೇಲೆ ಕಲ್ಲು ತೂರಿದ್ದ ಗ್ಯಾಂಗ್ | ಆಂಧ್ರ ಮೂಲದ ಕಳ್ಳನ ಬಂಧನ
CHITRADUGR NEWS | 28 JULY 2024
ಚಿತ್ರದುರ್ಗ: ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಎಸ್ಕೇಪ್ ಆಗಿದ್ದ ಆಂಧ್ರಪ್ರದೇಶದ ಖತರ್‌ನಾಕ್ ಕಳ್ಳರ ಗ್ಯಾಂಗಿನ ಒಬ್ಬ ವ್ಯಕ್ತಿಯನ್ನು ನಾಯಕನಹಟ್ಟಿ ಪೊಲೀಸರು ಬಂಧಿಸಿದ್ದಾರೆ.
ಜುಲೈ 20 ಶನಿವಾರ ನಾಯಕನಹಟ್ಟಿಯಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಬೊಲೆರೊ ವಾಹನದ ಬೆನ್ನತ್ತಿದ್ದ ಪೊಲೀಸರಿಗೆ ಸಮೀಪದ ಕುದಾಪುರ ಬಳಿ ಕಳ್ಳರು ಪೊಲೀಸ್ ಜೀಪ್ ಮೇಲೆ ಕಲ್ಲು ತೂರಿ ತಪ್ಪಿಸಿಕೊಂಡಿದ್ದರು. ಈ ವೇಳೆ ಪೊಲೀಸ್ ಜೀಪ್‌ನ ಮುಂದಿನ ಗ್ಲಾಸ್ ಒಡೆದು ಹೋಗಿತ್ತು. ಅದೃಷ್ಟವಶಾತ್ ಪೊಲೀಸರು ಪಾರಾಗಿದ್ದರು.
ಇದನ್ನೂ ಓದಿ: ಕಲ್ಲು ತೂರಿದ ಕಳ್ಳರ ಗ್ಯಾಂಗ್ | ಗಾಳಿಯಲ್ಲಿ ಗುಂಡು ಹಾರಿಸಿದ ಪೊಲೀಸರು | ಸ್ಥಳಕ್ಕೆ SP ಭೇಟಿ
ಇದೇ ವೇಳೆ ನಾಯಕನಹಟ್ಟಿ ಪೊಲೀಸ್ ಠಾಣೆ ಪಿಎಸ್‌ಐ ಶಿವಕುಮಾರ್ 4 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಕುದಾಪುರದಿಂದ ಆಂಧ್ರ ಗಡಿವರೆಗೆ ಸುಮಾರು 25 ಕಿ.ಮೀ ಕಳ್ಳರ ಬೊಲೆರೋ ವಾಹನವನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ್ದರು.
ಆದರೆ, ಹಳ್ಳಿಗಳ ಒಳ ಹೊಕ್ಕು ಗಡಿ ದಾಟಿ ಹೋಗುವ ಮೂಲಕ ಕಳ್ಳರ ಗ್ಯಾಂಗ್ ತಪ್ಪಿಸಿಕೊಂಡು ಹೋಗಿದ್ದು ಭಾರೀ ಸುದ್ದಿಯಾಗಿತ್ತು.
ಒಂದೇ ವಾರದಲ್ಲಿ ಖತರ್‌ನಾಕ್ ಕಳ್ಳರ ಬಂಧನ:
ನಾಯಕನಹಟ್ಟಿಯಲ್ಲಿ ಹಂದಿ ಕಳ್ಳತನಕ್ಕೆ ಬಂದಿದ್ದ ಆಂಧ್ರಪ್ರದೇಶದ ಅನಂತಪುರ ಮೂಲದ ರಮಣ ಎಂಬ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಶAಕಿತನನ್ನು ಅಂದು ಬೊಲೆರೋ ಓಡಾಡಿದ್ದ ಜಾಗಕ್ಕೆ ಕರೆದೊಯ್ದು ಸ್ಥಳ ಮಹಜರ್ ನಡೆಸಿದ್ದಾರೆ.
ಇದನ್ನೂ ಓದಿ: ತಡರಾತ್ರಿ ಪೊಲೀಸರ ಆಪರೇಷನ್ ಹೇಗಿತ್ತು | ಕಳ್ಳರನ್ನು ಚೇಸಿಂಗ್ ಮಾಡಿದ್ದೇಗೆ | ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಮಾಹಿತಿ
ಬೊಲೆರೊ ವಾಹನದಲ್ಲಿ ಹಂದಿ ಕಳ್ಳತನಕ್ಕಾಗಿ 8 ಜನರ ತಂಡ ಬಂದಿದ್ದ ಶಂಕೆ ವ್ಯಕ್ತವಾಗಿದೆ. ಈ ತಂಡದಲ್ಲಿದ್ದ ಇನ್ನೂ 7 ಜನರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.