ಮುಖ್ಯ ಸುದ್ದಿ
Independence Day; ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ | ಸ್ವಾಗತ ಕಮಾನು, ದೀಪಾಲಂಕಾರದ ಮೆರುಗು
CHITRADURGA NEWS | 14 AUGUST 2024
ಚಿತ್ರದುರ್ಗ: 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲು ಜಿಲ್ಲೆಯಾದ್ಯಂತ ಸಕಲ ರೀತಿಯಲ್ಲೂ ಸಿದ್ಧತೆ ನಡೆದಿದೆ.
ಜಿಲ್ಲಾಡಳಿತದಿಂದ ಧ್ವಜಾರೋಹಣ ನಡೆಯುವ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ ಬುಧವಾರ ಮುಂಜಾನೆ ಸುರಿದ ಮಳೆಗೆ ಜಲಾವೃತಗೊಂಡಿತ್ತು. ಮಧ್ಯಾಹ್ನದ ಬಳಿಕ ನಗರಸಭೆ ಸಿಬ್ಬಂದಿ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸುಗಮವಾಗಿ ನಡೆಯಲು ಅನುವಾಗುವಂತೆ ಮಣ್ಣು ಹರಡುವ ಮೂಲಕ ಮೈದಾನವನ್ನು ಸಮತಟ್ಟುಗೊಳಿಸಿದರು. ಬೆಳಿಗ್ಗೆ ಬೆಳಿಗ್ಗೆ 9ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರೋತ್ಸವ ಸಂದೇಶ ನೀಡುವರು.
ಸ್ವಾತಂತ್ರೋತ್ಸವ ಆಚರಣೆಗೆ ಸಂಬಂಧಿಸಿದಂತೆ ವಿವಿಧ ಸಮಿತಿ ರಚಿಸಲಾಗಿದ್ದು, ಸಮಿತಿಗಳು ತಮ್ಮ ಹಂತದಲ್ಲಿ ಈಗಾಗಲೇ ಸಭೆ ನಡೆಸಿ ಭಾರತ ಸ್ವಾತಂತ್ರ್ಯೋತ್ಸವದ ಎಲ್ಲ ಕಾರ್ಯಕ್ರಮಗಳನ್ನು ಯೋಜಿತವಾಗಿ ರೂಪಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ಹೊರಕೆರೆ ದೇವರಪುರ ದೇವಸ್ಥಾನ | ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ
ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಸ್ವಾಗತ ಕಮಾನು, ದೀಪಾಲಂಕಾರ, ಧ್ವನಿವರ್ಧಕ ಮತ್ತು ಕುಡಿಯುವ ನೀರು ವ್ಯವಸ್ಥೆ, ತೋಟಗಾರಿಕೆ ಇಲಾಖೆಯಿಂದ ವಿವಿಧ ಬಗೆಯ ಆಕರ್ಷಣೆಯ ಹೂವಿನ ಕುಂಡಗಳನ್ನು ವೇದಿಕೆ ಹಾಗೂ ಧ್ವಜಸ್ತಂಭದ ಸುತ್ತಲು ಸಿಂಗರಿಸಲಾಗಿದೆ.
ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮದವರು, ಸಾರ್ವಜನಿಕರು ಆಸಿನರಾಗಲು ಪ್ರತ್ಯೇಕವಾಗಿ ಸೂಕ್ತ ಆಸನದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೈದಾನದಲ್ಲಿ ಅಗತ್ಯಕ್ಕೆ ಅನುಸಾರವಾಗಿ ತಾತ್ಕಾಲಿಕವಾಗಿ ಮೊಬೈಲ್ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.
ಪಥ ಸಂಚಲನಕ್ಕೆ ಪೊಲೀಸ್ ಸಿಬ್ಬಂದಿ, ಹೋಂ ಗಾರ್ಡ್, ಅರಣ್ಯ ಇಲಾಖೆ, ಅಬಕಾರಿ, ಎನ್‌ಸಿಸಿ ಹಾಗೂ ಪ್ರೌಢಶಾಲಾ ಮಕ್ಕಳು ಸೇರಿದಂತೆ ಉತ್ತಮ ತುಕಡಿಗಳನ್ನು ಪರೇಡ್‌ಗೆ ಸಜ್ಜುಗೊಳಿಸಲಾಗಿದ್ದು, ಪಥಸಂಚಲನದಲ್ಲಿ ಭಾಗಹಿಸುವ ತಂಡಗಳಿಗೆ ಈಗಾಗಲೇ ಉತ್ತಮವಾಗಿ ತರಬೇತಿ ನೀಡಿ, ಪಥಸಂಚಲನವನ್ನು ಬಹಳ ಶಿಸ್ತಿನಿಂದ ನಡೆಸಲು ಅಂತಿಮ ಹಂತದ ತಾಲೀಮು ನಡೆಸಿದ್ದಾರೆ.
ಕ್ಲಿಕ್ ಮಾಡಿ ಓದಿ: ಸ್ವಾತಂತ್ರ್ಯೊತ್ಸವ | ಹರ್ ಘರ್ ತಿರಂಗಾ ಅಭಿಯಾನ
ಜಿಲ್ಲೆಯಲ್ಲಿರುವ ವಿವಿಧ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪದಿಂದ ಅಲಂಕಾರ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳು ಹಾಗೂ ನಗರದ ವಿವಿಧ ವೃತ್ತಗಳಲ್ಲಿ ವಿದ್ಯುತ್ ದೀಪದಿಂದ ಅಲಂಕಾರ ಮಾಡಿದ್ದಾರೆ.
ಜಿಲ್ಲಾಧಿಕಾರಿ ಟಿ. ವೆಂಕಟೇಶ್, ನಗರಸಭೆ ಪೌರಾಯುಕ್ತೆ ರೇಣುಕಾ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.