ಮುಖ್ಯ ಸುದ್ದಿ
ವಾಹನ ಸವಾರರೇ ಎಚ್ಚರ…ಕೊರಕಲು ಬಿದ್ದಿವೆ ರಸ್ತೆಗಳು | ಕ್ರಮಕ್ಕೆ ಸ್ಥಳೀಯರ ಒತ್ತಾಯ
CHITRADURGA NEWS | 21 MAY 2024
ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ಭಾಗದಲ್ಲಿ ಸೋಮವಾರವೂ ಉತ್ತಮ ಮಳೆ ಸುರಿದಿದೆ. ಕೆಲ್ಲೋಡಿನ ವೇದಾವತಿ ಬ್ಯಾರೇಜ್ ಮೈದುಂಬಿ ಹರಿಯುತ್ತಿದೆ. ತಾಲ್ಲೂಕಿನ ವಿವಿಧೆಡೆ ಸಣ್ಣ ಪುಟ್ಟ ಹಳ್ಳ ಕೊಳ್ಳಗಳಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ.
ಮಳೆಯಿಂದಾಗಿ ಸಾಣೇಹಳ್ಳಿ–ಹುರುಳಿಹಳ್ಳಿ ರಸ್ತೆಯಲ್ಲಿ ಬೃಹತ್ ಕೊರಕಲು ಬಿದ್ದಿದೆ. ಮೇಲ್ಭಾಗದಲ್ಲಿ ರಸ್ತೆ ಕಂಡರು ಸಹ ಕೆಳಗಡೆ ಮಣ್ಣು ಸಂಪೂರ್ಣ ಕೊಚ್ಚಿ ಹೋಗಿದೆ. ಸ್ಥಳೀಯರು ರಸ್ತೆ ಮೇಲೆ ಕಲ್ಲುಗಳನ್ನು ಇಟ್ಟು ಅಪಾಯ ತಪ್ಪಿಸಿದ್ದಾರೆ.
ಹೊಸದುರ್ಗ– ತರೀಕರೆ ಸಂಪರ್ಕಿಸುವ ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚಾರ ನಡೆಸುತ್ತವೆ. ಕೂಡಲೇ ಸಂಬಂಧಪಟ್ಟವರು ಕ್ರಮವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ಕೋಟೆನಾಡಲ್ಲಿ ತಡರಾತ್ರಿ ಅಬ್ಬರಿಸಿದ ಮಳೆ | ಕೊಚ್ಚಿ ಹೋದ ರಸ್ತೆ ಕುಸಿದು ಬಿದ್ದ ಮನೆ
ಮಳೆಯಿಂದ ಜಮೀನುಗಳಲ್ಲಿ ನೀರು ನಿಂತಿದೆ. ಮಾಡದಕೆರೆ, ಜೋಡಿ ಶ್ರೀರಂಗಪುರ ಭೋವಿಹಟ್ಟಿ, ನೀರಗುಂದ, ಭಾಗಶೆಟ್ಟಿಹಳ್ಳಿ, ಗೊರವಿನಕಲ್ಲು, ಹೊಸದುರ್ಗ ಪಟ್ಟಣ ಸೇರಿ ವಿವಿಧೆಡೆ ಮನೆ ಹಾಗೂ ಬೆಳೆಗಳಿಗೆ ಹಾನಿಯಾಗಿದ್ದು, ಅಪಾರ ನಷ್ಟ ಉಂಟಾಗಿದೆ.