ಮುಖ್ಯ ಸುದ್ದಿ
ನಾಯಕನಹಟ್ಟಿ ಜಾತ್ರೆ ಮುಕ್ತಿ ಭಾವುಟ ಹರಾಜಿಗೆ ಅಡ್ವಾನ್ಸ್ ಚೆಕ್ ಕಡ್ಡಾಯ

CHITRADURGA NEWS | 14 MARCH 2025
ಚಿತ್ರದುರ್ಗ: ದೇವಾಲಯದ ರೂಢಿ ಮತ್ತು ಸಂಪ್ರದಾಯ ಧಾರ್ಮಿಕ ಪದ್ಧತಿಯಂತೆ ಮುಕ್ತಿಬಾವುಟವನ್ನು ಹರಾಜು ಮಾಡುತ್ತಾ ಬಂದಿದ್ದು, ಹಿಂದೂ ಧಾರ್ಮಿಕ ದತ್ತಿ ಇಲಾಖಾ ಕಾಯ್ದೆಯ ಸೆಕ್ಷನ್-58ರಂತೆ ರೂಢಿ ಸಂಪ್ರದಾಯಗಳನ್ನು ಎಲ್ಲ ಅಧಿಕಾರಿಗಳು ಪಾಲಿಸಬೇಕಾಗಿದೆ, ಅದರಂತೆ ಮುಕ್ತಿಬಾವುಟ ಹರಾಜು ನಡೆಸಲು ತೀರ್ಮಾನಿಸಲಾಗಿದೆ.
Also Read: ನಾಯಕನಹಟ್ಟಿ ಜಾತ್ರೆಗೆ ಏನೆಲ್ಲಾ ವ್ಯವಸ್ಥೆ ಆಗಿದೆ ನೋಡಿ..
ಮುಕ್ತಿಬಾವುಟ ಹರಾಜು ನಡೆಸುವ ಮುಂಚೆ ನೂರು ರೂಪಾಯಿ ಮುಖ ಬೆಲೆಯ ಛಾಪ ಕಾಗದ ತಯಾರಿಸಿಕೊಂಡು ಆಖೈರು ಹರಾಜುದಾರರನ್ನು 1ನೇ ಪಾರ್ಟಿಯಾಗಿ ಸಹಿ ಪಡೆಯಲು ಹಾಗೂ ವರ್ಷದೊಳಗೆ ಹರಾಜಿನ ಮೊತ್ತವನ್ನು ಸಲ್ಲಿಸಲು ಒಂದು ಅಡ್ವಾನ್ಸ್ ದಿನಾಂಕದ ಚೆಕ್‍ನ್ನು ಪಡೆದುಕೊಳ್ಳಲು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಅದರಂತೆಯೇ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಸಲಾಗುವುದು, ಈ ನಿಟ್ಟಿನಲ್ಲಿ ಹರಾಜು ಕೂಗುವವರು ಸಹಕರಿಸಬೇಕು.
Also Read: ನಾಯಕನಹಟ್ಟಿ ಜಾತ್ರೆಗೆ ಕ್ಷಣಗಣನೆ | ಮಾ.16 ರಂದು ದೊಡ್ಡ ರಥೋತ್ಸವ
ಮುಕ್ತಿಬಾವುಟ ಹರಾಜಿನ ಬಾಬ್ತು ಬಾಕಿ ಇರಿಸಿಕೊಂಡಿರುವವರೆಗಿ ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
