ಮುಖ್ಯ ಸುದ್ದಿ
DRUVA SARJA; ಕೋಟೆನಾಡಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ | ಎಲ್ಲೇಲ್ಲೂ ಮಾರ್ಟಿನ್ ಫೀವರ್

CHITRADURGA NEWS | 01 JULY 2024
ಚಿತ್ರದುರ್ಗ: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ( DRUVA SARJA) ನಟನೆಯ ಮಾರ್ಟಿನ್ ಸಿನಿಮಾ ಬಹು ನಿರೀಕ್ಷೆ ಮೂಡಿಸಿದೆ. ಚಿತ್ರತಂಡದಿಂದ ಸರಣಿ ಅಪ್‌ಡೇಟ್‌ಗಳು ಹೊರಬರುತ್ತಿವೆ. ಅಕ್ಟೋಬರ್ 11ರಂದು ಪ್ಯಾನ್ ಇಂಡಿಯಾ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಈ ಸಿನಿಮಾ ರಿಲೀಸ್ ಆಗಲಿದೆ. ಅದರಂತೆ ಆಗಸ್ಟ್ 5ರಂದು 13 ಭಾಷೆಗಳಲ್ಲಿ ಟ್ರೇಲರ್ ರಿಲೀಸ್ ಆಗಲಿದೆ. ಇದರ ಬೆನ್ನಲ್ಲೇ ಇದೀಗ ಕೋಟೆನಾಡಿಗೆ ಧ್ರುವ ಸರ್ಜಾ ಎಂಟ್ರಿ ಆಗುತ್ತಿದ್ದಾರೆ.
ಕ್ಲಿಕ್ ಮಾಡಿ ಓದಿ: Kannada kuvari; ಬಿ.ವಿ.ಸಮೃದ್ದಿಗೆ ‘ಕನ್ನಡ ಕುವರಿ’ ಪುರಸ್ಕಾರ
ಕೋಟೆನಾಡು ಚಿತ್ರದುರ್ಗಕ್ಕೆ ಆಗಸ್ಟ್ 2 ರಂದು (ಶುಕ್ರವಾರ) ಧ್ರುವ ಸರ್ಜಾ ಆಗಮಿಸುತ್ತಿದ್ದಾರೆ. ನಗರದ ಹೊರವಲಯದ ಮುರುಘಾ ಮಠಕ್ಕೆ ಆಗಮಿಸುತ್ತಿದ್ದು, ಈ ಸುದ್ದಿಯನ್ನು ಸ್ವತಃ ನಾಯಕ ಧ್ರುವ ಸರ್ಜಾ ರಿವೀಲ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.
ವೀಡಿಯೋ ನೋಡಿ: 👇
ಅಕ್ಟೋಬರ್ 11ರಂದು ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಈ ನಡುವೆ ಪ್ರಚಾರ ಕಣಕ್ಕಿಳಿದಿರುವ ತಂಡ, ಆಗಸ್ಟ್ 5ರಂದು ಸಂಜೆ 5.55ಕ್ಕೆ ಮಾರ್ಟಿನ್ ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆ.
ಈ ವರೆಗೂ ಪ್ಯಾನ್ ಇಂಡಿಯಾ ಸಿನಿಮಾಗಳೆಂದರೆ ಐದು ಭಾಷೆಗಳಲ್ಲಿ ಸಿನಿಮಾಗಳು ತೆರೆಗೆ ಬರುತ್ತಿದ್ದವು. ಅದರಂತೆ 5 ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆ ಮಾಡಿದ ಉದಾಹರಣೆಗಳೇ ಹೆಚ್ಚು. ಆದರೆ, ಮಾರ್ಟಿನ್ ಮಾತ್ರ ಅದರಲ್ಲಿಯೂ ಕೊಂಚ ಡಿಫರೆಂಟ್. ಅಂದರೆ, ಒಂದಲ್ಲ ಎರಡಲ್ಲ ಬರೋಬ್ಬರಿ 13 ಭಾಷೆಗಳಲ್ಲಿ ಮಾರ್ಟಿನ್ ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಜತೆಗೆ ಬಂಗಾಳಿ, ಕೊರಿಯಾ, ಅರೇಬಿಕ್, ರಷ್ಯನ್, ಚೈನೀಸ್, ಇಂಗ್ಲೀಷ್ ಸೇರಿ ಒಟ್ಟು 13 ಭಾಷೆಗಳಲ್ಲಿ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ.
ಕ್ಲಿಕ್ ಮಾಡಿ ಓದಿ: SupreemCourt; ಸುಪ್ರೀಂಕೋರ್ಟ್ ತೀರ್ಪು | ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಅಭೂತಪೂರ್ವ ಗೆಲುವು | ಗೋವಿಂದ ಕಾರಜೋಳ
ಮಾರ್ಟಿನ್ ಸಿನಿಮಾದ ಟ್ರೇಲರ್‌ಅನ್ನು ಮುಂಬೈನಲ್ಲಿ ರಿಲೀಸ್ ಮಾಡಲು ನಿರ್ಮಾಪಕ ಉದಯ್ ಕೆ ಮೆಹ್ತಾ ಪ್ಲಾನ್ ಮಾಡಿದ್ದಾರೆ. ಅದರಂತೆ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ದೇಶದ ವಿವಿಧ ಮೂಲೆಗಳಿಂದ ಪತ್ರಕರ್ತರು ಆಗಮಿಸುತ್ತಿದ್ದರು. ಇದೀಗ ಮಾರ್ಟಿನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಯಾರಾಗಿರುವುದರಿಂದ ವಿದೇಶಿ ಪತ್ರಕರ್ತರನ್ನೂ ಚಿತ್ರತಂಡ ಆಹ್ವಾನಿಸಿದೆ.
