Connect with us

    ವರದಕ್ಷಿಣೆ ಪಡೆದ ಆರೋಪ | 5 ವರ್ಷ ಜೈಲು, 4.70 ಲಕ್ಷ ದಂಡ

    ಚಿತ್ರದುರ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ

    ಕ್ರೈಂ ಸುದ್ದಿ

    ವರದಕ್ಷಿಣೆ ಪಡೆದ ಆರೋಪ | 5 ವರ್ಷ ಜೈಲು, 4.70 ಲಕ್ಷ ದಂಡ

    CHITRADURGA NEWS | 20 MARCH 2024

    ಚಿತ್ರದುರ್ಗ: ಪತ್ನಿ ಹಾಗೂ ಅವರ ಕುಟುಂಬದವರಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿ, ಈಗಾಗಲೇ ವರದಕ್ಷಿಣೆ ಪಡೆದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿಗೆ ವರದಕ್ಷಿಣೆ ನಿಷೇಧ ಕಾಯ್ದೆ ಅಡಿ 5 ವರ್ಷ ಜೈಲು ಶಿಕ್ಷೆ ಹಾಗೂ 4.70 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

    ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಮೂಲದ ಅಪ್ಜಪರ್ವಿನ್ ಎಂಬುವವರನ್ನು ಚಿತ್ರದುರ್ಗ ನಗರದ ಸೈಯದ್ ಸೈಫುಲ್ಲಾ 2016 ಡಿಸೆಂಬರ್ 15 ರಂದು ವಿವಾಹವಾಗಿದ್ದು, ಮದುವೆ ಕಾಲದಲ್ಲಿ ಹೆಣ್ಣಿನ ಕಡೆಯವರಿಂದ 5 ಲಕ್ಷ ರೂ. ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು.

    ಇದನ್ನೂ ಓದಿ: ಸಬ್ ಇನ್‍ಸ್‍ಪೆಕ್ಟರ್ ಹುದ್ದೆಗೆ ಅರ್ಜಿ

    ಅಪ್ಜಪರ್ವಿನ್ ಸಹೋಧರ ಅಜರುದ್ದೀನ್ ತಮ್ಮ ಬ್ಯಾಂಕ್ ಖಾತೆಯಿಂದ ಸೈಯದ್ ಸೈಫುಲ್ಲಾ ಖಾತೆಗೆ 4.50 ಲಕ್ಷ ರೂ. ಹಣ ವರ್ಗಾವಣೆ ಮಾಡಿ, 15 ತೊಲ ಬಂಗಾರದ ಆಭರಣ, ಗೃಹ ಬಳಕೆಯ ವಸ್ತುಗಳನ್ನು ಕೊಟ್ಟು ಮದುವೆ ಮಾಡಿದ್ದರು.

    ಮದುವೆಯಾದ ಆರಂಭದ ಸ್ವಲ್ಪ ದಿನ ಚೆನ್ನಾಗಿ ನೋಡಿಕೊಂಡು ಆನಂತರ 50 ಸಾವಿರ ವರದಕ್ಷಿಣೆ ತರುವಂತೆ ದೈಹಿಕ ಹಿಂಸೆ ನೀಡಿದ್ದಾರೆ.

    ಇದನ್ನೂ ಓದಿ: ಬೇಲಿಯ ಬೆಂಕಿಗೆ ತಾಯಿ ಮಕ್ಕಳ ಬಲಿ

    2019 ಆಗಸ್ಟ್ 19 ರಂದು ಆರೋಪಿತರು ಅಪ್ಜಪರ್ವಿನ್ ಮೇಲೆ ಮಾರಣಾಂತಿಕ ಹೆಲ್ಲೆ ನಡೆಸಿದ್ದಾರೆ. ಈ ಬಗ್ಗೆ ಚಿತ್ರದುರ್ಗ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ಈ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾ ವರದಕ್ಷಿಣೆ ಹಣ ಪಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ 1ನೇ ಆರೋಪಿ ಸೈಯದ್ ಸೈಫುಲ್ಲಾಗೆ ವರದಕ್ಷಿಣೆ ನಿಷೇಧ ಕಾಯ್ದೆ ಅನ್ವಯ 5 ವರ್ಷ ಸಾದಾ ಸಜೆ ಹಾಗೂ 5.70 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡದ ಮೊತ್ತದಲ್ಲಿ ಅಪ್ಜಪರ್ವಿನ್ ಅವರಿಗೆ 4.50 ಲಕ್ಷ ರೂ. ನೀಡುವಂತೆ ಸೂಚಿಸಲಾಗಿದೆ.

    ಇದನ್ನೂ ಓದಿ: ಮಗಳು ಮಮ್ಮಿ ನಿಮ್ಮ ಹೆಸರು ಟಿವಿಯಲ್ಲಿ ಬರ್ತಿದೆ ಅಂದಾಗ ಅಚ್ಚರಿಯಾಗಿತ್ತು 

    ಪ್ರಕರಣದಲ್ಲಿ ಪ್ರಧಾನ ಸರ್ಕಾರಿ ಅಭಿಯೋಜಕ ಬಿ.ಗಣೇಶ್ ನಾಯ್ಕ್ ವಾದ ಮಂಡಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top