ಕ್ರೈಂ ಸುದ್ದಿ
ಅನ್ಯ ಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ ಆರೋಪ | ದೂರು – ಪ್ರತಿ ದೂರು ದಾಖಲು | ತಡರಾತ್ರಿ ಹಿಂದೂ ಸಂಘಟನೆಗಳ ಪ್ರತಿಭಟನೆ
CHITRADURGA NEWS | 19 APRIL 2024
ಚಿತ್ರದುರ್ಗ: ಗುರುವಾರ (ಏಪ್ರಿಲ್ 18)ರಂದು ರಾತ್ರಿ ಅನ್ಯ ಕೋಮಿನ ಯುವತಿಯನ್ನು ಬೈಕಿನಲ್ಲಿ ಕೂರಿಸಿಕೊಂಡು ಡ್ರಾಪ್ ನೀಡಿದ ಕಾರಣಕ್ಕೆ ಹಲ್ಲೆ ನಡೆಸಲಾಗಿದ್ದ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ.
ಡ್ರಾಪ್ ನೀಡುವುದಾಗಿ ಬೈಕಿನಲ್ಲಿ ಹತ್ತಿಸಿಕೊಂಡಿದ್ದ ಯುವಕನ ವಿರುದ್ಧ ಯುವತಿ ಕೂಡಾ ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಹಿರೇಗುಂಟನೂರು ದ್ಯಾಮಲಾಂಬ ದೇವಿ ಜಾತ್ರಾ ಮಹೋತ್ಸವ | ಸಿದ್ದತೆ ಪ್ರಾರಂಭ
ಘಟನೆಯ ಪೂರ್ಣ ವಿವರ ಇಲ್ಲಿದೆ;
ನಗರದ ಲಕ್ಷ್ಮೀ ಬಜಾರ್‍ನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿರುವ ಚಿತ್ರದುರ್ಗ ತಾಲೂಕು ಈರಜ್ಜನಹಟ್ಟಿ ಗ್ರಾಮದ ಯುವಕ ಉಮೇಶ್, ಕೆಲಸ ಮುಗಿಸಿ ಮನೆಗೆ ಹೋಗುವಾಗ, ಅದೇ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅನ್ಯ ಕೋಮಿನ ಯುವತಿ ಗಾಯತ್ರಿ ಭವನ ವೃತ್ತದಲ್ಲಿ ನಡೆದುಕೊಂಡು ಹೋಗುವುದನ್ನು ಗಮನಿಸಿ, ಕನಕ ವೃತ್ತದವರೆಗೆ ಬಿಟ್ಟು ಹೋಗುತ್ತೇನೆ ಎಂದು ಹೇಳಿ ಬೈಕ್ ಹತ್ತಿಸಿಕೊಂಡಿದ್ದಾನೆ.
ಸ್ವಲ್ಪ ದೂರ ಹೋಗುತ್ತಿದ್ದಂತೆ ಯಾರೋ ಐದು ಜನ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದು ಕನಕ ವೃತ್ತದ ಬಳ ಅಡ್ಡಗಟ್ಟಿ, ನಮ್ಮ ಏರಿಯಾದ ಹುಡುಗಿಯನ್ನು ಯಾಕೆ ಬೈಕಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ದುರ್ಗದಲ್ಲಿ ಯೋಗಿ ಆದಿತ್ಯನಾಥ್ ರೋಡ್ ಶೋ
ಅಷ್ಟರಲ್ಲಿ ಉಮೇಶ್ ಪರಿಚಯಸ್ಥರು ಆ ರಸ್ತೆಯಲ್ಲಿ ಬಂದಿದ್ದು, ಗಲಾಟೆ ಬಿಡಿಸಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾಗಿ ಉಮೇಶ್ ಪೊಲೀಸರಿಗೆ ಹೇಳಿಕೆ ನೀಡಿದ್ದು, ದೂರು ದಾಖಲಾಗಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾ ಆಸ್ಪತ್ರೆ ಎದುರು ರಾತ್ರಿ ಪ್ರತಿಭಟನೆ ನಡೆಸಿ, ಹಲ್ಲೆ ನಡೆಸಿದವರನ್ನು ಬಂಧಿಸಲು ಆಗ್ರಹಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ಪುತ್ರ ಉಮೇಶ್ ಕಾರಜೋಳ ಕೂಡಾ ಆಸ್ಪತ್ರೆಗೆ ಭೇಟಿ ನೀಡಿ ಯುವಕನ ಆರೋಗ್ಯ ವಿಚಾರಿಸಿದ್ದರು.
ಇದನ್ನೂ ಓದಿ: ಹಿರೇಗುಂಟನೂರು ದ್ಯಾಮಲಾಂಬ ದೇವಿ ಜಾತ್ರಾ ಮಹೋತ್ಸವ | ಸಿದ್ದತೆ ಪ್ರಾರಂಭ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಕೂಡಾ ಆಸ್ಪತ್ರೆಗೆ ಭೇಟಿ ನೀಡಿ ಯುವಕನ ಬಳಿ ಮಾಹಿತಿ ಪಡೆದುಕೊಂಡಿದ್ದರು.
ಟ್ವಿಸ್ಟ್ ಪಡೆದುಕೊಂಡ ಡ್ರಾಪ್ ಪ್ರಕರಣ:
ಇದಾದ ಬಳಿಕ ರಾತ್ರಿ 11.15ಕ್ಕೆ ವೇಳೆಗೆ ಚೇಳಗುಡ್ಡ ಮೂಲದ, ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿ ಕೋಟೆ ಪೊಲೀಸ್ ಠಾಣೆಗೆ ಬಂದು ಪ್ರತಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ವದ್ದೀಕೆರೆ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ | 22 ರಂದು ಬ್ರಹ್ಮ ರಥೋತ್ಸವ
ನಾನು ಕೆಲಸ ಮಾಡುವ ಬಟ್ಟೆ ಅಂಗಡಿಯಲ್ಲೇ ಕೆಲಸ ಮಾಡಿಕೊಂಡಿರುವ ಉಮೇಶಣ್ಣ ಎಂಬುವವರು, ರಾತ್ರಿ ನಾನು ಕೆಲಸ ಮುಗಿಸಿ ಮನೆಗೆ ನಡೆಕೊಂಡು ಹೋಗುವಾಗ ಬೈಕಿನಲ್ಲಿ ಬಂದು ಕನಕ ವೃತ್ತದ ಬಳಿ ಬಿಟ್ಟು ಹೋಗುತ್ತೇನೆ ಬಾ ಎಂದು ಕರೆದರು. ಆದರೆ, ನಾನು ಬೇಡ ನಡೆದುಕೊಂಡು ಹೋಗುತ್ತೇನೆಂದೆ. ಆದರೆ, ಎಷ್ಟು ದೂರ ನಡೆದು ಹೋಗುತ್ತೀಯಾ ಬಾ ಎಂದು ಕರೆದರು.
ನಾನು ಬೈಕ್ ಹತ್ತಿಕೊಂಡು ಹೋದೆ. ಆದರೆ, ಕನಕ ವೃತ್ತದಲ್ಲಿ ನಿಲ್ಲಿಸದೇ ಮುಂದೆ ಕರೆದುಕೊಂಡು ಬಂದರು. ನಾನು ನಿಲ್ಲಿಸಿ ಅಣ್ಣ ಎಂದು ಹೇಳಿದರೂ ಕೇಳಲಿಲ್ಲ. ಚಂದ್ರವಳ್ಳಿ ಕ್ರಾಸ್‍ವರೆಗೆ ಬಂದಾಗ ನನ್ನ ಮೈ ಕೈ ಮುಟ್ಟಿ ಅಸಭ್ಯವಾಗಿ ನಡೆದುಕೊಂಡರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಭರ್ಜರಿ ಜಿಗಿತ | ಒಂದೇ ದಿನ 1500 ರೂ. ಹೆಚ್ಚಳ
ಈ ವೇಳೆ ನಾನು ಜೋರಾಗಿ ಕೂಗಿಕೊಂಡಿದ್ದು, ಅಲ್ಲಿಯೇ ಇದ್ದ ನನ್ನ ಅಣ್ಣನ ಸ್ನೇಹಿತರು ತಕ್ಷಣ ಬಂದು ಅಡ್ಡಗಟ್ಟಿ ಬೈಕಿನಿಂದ ಇಳಿಸಿ, ಆ ಹುಡುಗಿ ಕೂಗಿಕೊಂಡರೂ ಬೈಕ್ ನಿಲ್ಲಿಸದೆ ಹೋಗುತ್ತಿದ್ದೀಯಾ ಎಂದು ಬೈದಾಡಿದರು.
ಉಮೇಶಣ್ಣ ನನ್ನನ್ನು ಕನಕ ವೃತ್ತದಲ್ಲಿ ಇಳಿಸದೇ ಮುಂದಕ್ಕೆ ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.