Connect with us

    ABVP ರಾಜ್ಯ ಕಾರ್ಯಕಾರಿಣಿ | NEP ರದ್ಧತಿ ವಿರುದ್ಧ ವಿರುದ್ಧ ಉಗ್ರ ಹೋರಾಟಕ್ಕೆ ತೀರ್ಮಾನ | ರಾಜ್ಯ ಕಾರ್ಯದರ್ಶಿ ಪ್ರೇಮಶ್ರೀ

    ಮುಖ್ಯ ಸುದ್ದಿ

    ABVP ರಾಜ್ಯ ಕಾರ್ಯಕಾರಿಣಿ | NEP ರದ್ಧತಿ ವಿರುದ್ಧ ವಿರುದ್ಧ ಉಗ್ರ ಹೋರಾಟಕ್ಕೆ ತೀರ್ಮಾನ | ರಾಜ್ಯ ಕಾರ್ಯದರ್ಶಿ ಪ್ರೇಮಶ್ರೀ

    ಚಿತ್ರದುರ್ಗ ನ್ಯೂಸ್. ಕಾಂ: ರಾಜ್ಯದ ಶೈಕ್ಷಣಿಕ ಪರಿಸ್ಥಿತಿ, ರಾಜ್ಯದ ವರ್ತಮಾನ  ಪರಿಸ್ಥಿತಿ ಹಾಗೂ ರಾಷ್ಟ್ರೀಯ ಶಿಕ್ಷಣ‌ ನೀತಿ-2020 ರದ್ದತಿಯನ್ನು ಖಂಡಿಸುವ ಮೂರು ನಿರ್ಣಯಗಳನ್ನು ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಎಬಿವಿಪಿ‌ ರಾಜ್ಯ ಕಾರ್ಯದರ್ಶಿ ಪ್ರೇಮಶ್ರೀ ಜೋಡಿದಾರ್ ತಿಳಿಸಿದರು.

    ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೊಡದೆ, ಭಾಗ್ಯಗಳಲ್ಲಿ‌ ಸರ್ಕಾರ ಮುಳುಗಿ ಹೋಗಿದೆ ಎಂದು ದೂರಿದರು.

    2020 ರಲ್ಲಿ ಜಾರಿಯಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು‌ ಕರ್ನಾಟಕದಲ್ಲೇ‌ ಮೊದಲು ಜಾರಿ ಮಾಡಿತ್ತು. ವಿದ್ಯಾರ್ಥಿಗಳು ಒಪ್ಪಿ ಮುನ್ನಡೆಯುತ್ತಿರುವಾಗ, ರಾಜ್ಯ ಸರ್ಕಾರ NEP ಬದಲಾಗಿ SEP ಜಾರಿ‌ ಮಾಡಲು ಆಯೋಗ ನೇಮಿಸಿದೆ.

    ಮೂರ್ನಾಲ್ಕು ವರ್ಷಗಳ‌ ಕಾಲ‌ ಚಿಂತನೆ ನಡೆಸಿ NEP ಜಾರಿ‌ ಮಾಡಲಾಗಿದೆ. ಆದರೆ, ರಾಜ್ಯ ಸರ್ಕಾರ ರಾಜಕೀಯ ಕಾರಣಕ್ಕೆ SEP ಜಾರಿ‌ ಮಾಡಲು ಮುಂದಾಗಿರುವುದು ಖಂಡನೀಯ ಎಂದರು.

    ರಾಜ್ಯದ ಶಿಕ್ಷಣ ವ್ಯವಸ್ಥೆ ರಕ್ಷಿಸಲು ಎಬಿವಿಪಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ‌ ಕೈಗೊಳ್ಳಲಿದೆ. ಸಹಿ ಸಂಗ್ರಹಿಸುವ ಅಭಿಯಾನ ನಡೆಸಲಿದೆ. ಸರ್ಕಾರ ಬದಲಾದ ತಕ್ಷಣ ಶಿಕ್ಷಣ ವ್ಯವಸ್ಥೆಯೇ ಬದಲಾಗಬೇಕಾಗಿಲ್ಲ. ಇದರಿಂದಾಗಿ ರಾಜ್ಯದ ವಿದ್ಯಾರ್ಥಿಗಳು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಆಸೆ ಬಿಡಬೇಕಾಗುತ್ತದೆ ಎಂದರು.

    ರಾಜ್ಯದಲ್ಲಿ‌ ಪೂರಕ ಶೈಕ್ಷಣಿಕ ವ್ಯವಸ್ಥೆ ಇಲ್ಲವಾಗಿದೆ. ವಿದ್ಯಾರ್ಥಿಗಳ‌ ಸಂಖ್ಯೆಗೆ‌ ಅನುಗುಣವಾಗಿ ಹಾಸ್ಟೆಲ್ ಇಲ್ಲ. ಈ‌ ಹಿನ್ನೆಲೆಯಲ್ಲಿ ಎಬಿವಿಪಿ ಹಾಸ್ಟೆಲ್‌ ಸಮೀಕ್ಷೆ ನಡೆಸಲಿದೆ.

    ನವೆಂಬರ್ 9 ಮತ್ತು 10 ರಂದು‌ ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ವಿದ್ಯಾರ್ಥಿ‌ ನಾಯಕರ ಸಮಾವೇಶ ಹಮ್ಮಿಕೊಂಡಿದ್ದು, ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿ, ಮುಂದಿನ ದಿನಗಳಲ್ಲಿ ಕಾಲೇಜು ಕ್ಯಾಂಪಸ್ ಗಳಲ್ಲಿ‌ ಆಗಬೇಕಾದ ಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ಮಾಡಕಾಗುವುದು ಎಂದು ವಿವರಿಸಿದರು.

    ಕೋಟೆನಾಡು ಚಿತ್ರದುರ್ಗದಲ್ಲಿ ಎಬಿವಿಪಿ ಸಂಘಟನಾತ್ಮಕ ಸಭೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಎರಡು ದಿನಗಳ ಕಾಲ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು. ಈ ಸಭೆಯಲ್ಲಿ ನಿರ್ಣಯಗಳು ಸೇರಿದಂತೆ ಹಲವು ಚರ್ಚೆಗಳು ನಡೆದಿವೆ ಎಂದು ತಿಳಿಸಿದರು.

    ಜಿಲ್ಲಾ ಸಂಚಾಲಕ‌ ಸಿದ್ದೇಶ್, ನಗರ‌ ಕಾರ್ಯದರ್ಶಿ ಗೋಪಿ, ವಿಭಾಗ‌ ಸಂಚಾಲಕ ವರುಣ್ ಸುದ್ದಿಗೋಷ್ಠಿಯಲ್ಲಿದ್ದರು.

    Continue Reading
    You may also like...
    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top