Connect with us

    ಸರ್ಕಾರದ ನಡೆಗೆ ಎಬಿವಿಪಿ ಆಕ್ರೋಶ | ಕ್ಷುಲ್ಲಕ ಕಾರಣ ಮುಂದಿಟ್ಟು ಗೊಂದಲ ಸೃಷ್ಟಿ

    ಮುಖ್ಯ ಸುದ್ದಿ

    ಸರ್ಕಾರದ ನಡೆಗೆ ಎಬಿವಿಪಿ ಆಕ್ರೋಶ | ಕ್ಷುಲ್ಲಕ ಕಾರಣ ಮುಂದಿಟ್ಟು ಗೊಂದಲ ಸೃಷ್ಟಿ

    CHITRADURGA NEWS | 20 FEBRUARY 2024
    ಚಿತ್ರದುರ್ಗ: ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎನ್ನುವ ಕುವೆಂಪು ಅವರ ಅರ್ಥಪೂರ್ಣ ವಾಕ್ಯವನ್ನು ಬದಲಾಯಿಸಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಜಿಲ್ಲಾ ಘಟಕ ಮಂಗಳವಾರ ಪ್ರತಿಭಟನೆ ನಡೆಸಿತು.

    ರಾಜ್ಯ ಸರ್ಕಾರ ರಾಜ್ಯದ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕೆಲವೊಂದು ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಗೊಂದಲವನ್ನು ಸೃಷ್ಟಿ ಮಾಡುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಶಾಲೆಗಳಲ್ಲಿ ಪರಂಪರೆಯಿಂದ ನಡೆದುಕೊಂಡು ಬಂದಿದ್ದ ಸರಸ್ವತಿ, ಗಣಪತಿ ಮೊದಲಾದ ರೀತಿಯ ಧಾರ್ಮಿಕ ಪೂಜೆಗಳನ್ನ ಮಾಡುವುದನ್ನು ನಿಷೇಧ ಮಾಡಿ ಗೊಂದಲವನ್ನು ಸೃಷ್ಟಿ ಮಾಡಿದೆ.

    ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಆ ಆದೇಶವನ್ನು ಹಿಂತೆಗೆದುಕೊಂಡಿದ್ದ ಸರ್ಕಾರ ಈಗ ಮತ್ತೆ ವಸತಿ ಶಾಲೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕರುನಾಡಿನ ಅಗ್ರಮಾನ್ಯ ಕವಿ ಕುವೆಂಪು ಅವರ ವಾಕ್ಯ ‘ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ’ ಎನ್ನುವ ಘೋಷಣೆಯನ್ನು ಬದಲಾವಣೆ ಮಾಡಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎನ್ನುವ ವಾಕ್ಯವನ್ನು ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಮನಸ್ಸಿಗೆ ಹಿತ ತಂದಿದೆ ಹಿರೇಗುಂಟನೂರು ಆಂಜನೇಯಸ್ವಾಮಿ ದೇವಸ್ಥಾನ | ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ

    ಈ ರೀತಿಯಾದ ತರ್ಕ ಶೂನ್ಯ ನಡೆಗಳಿಂದ ಸರ್ಕಾರವು ಸಾಹಿತ್ಯ ಸಂಸ್ಕೃತಿ ಶಿಕ್ಷಣ ವಿರೋಧಿ ನೀತಿಯನ್ನು ಅನುಸರಿಸುತ್ತಿರುವಂತೆ ಬಾಸವಾಗುತ್ತಿದೆ. ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು ಎಂದರೆ ಜ್ಞಾನ ದೇಗುಲವನ್ನೇ ಪ್ರಶ್ನಿಸಬೇಕೇ ? ಜ್ಞಾನವನ್ನು ಪ್ರಶ್ನಿಸಬೇಕೇ ? ಅಥವಾ ಜ್ಞಾನ ದೇಗುಲದಂಗಳದಲ್ಲಿ ಶ್ರದ್ಧೆಯೊಂದಿಗೆ ವಿನಯ ಪೂರ್ವಕವಾಗಿ ಜ್ಞಾನ ಸಂಪಾದಿಸಿ ಮೌಲ್ಯಯುತವಾಗಿ ಪ್ರಶ್ನಿಸುವ ಮನೋಭಾವವನ್ನು ರೂಡಿಸಿಕೊಳ್ಳಬೇಕೇ ? ಹೀಗೆ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಲ್ಲಿನ ವ್ಯಕ್ತಿತ್ವ ವಿನಯತೆ ವಿನಮ್ರತೆ ವಿದ್ವತ್‌ ಪೂರ್ಣತೆಯಿಂದ ಕೂಡಿರಬೇಕೇ ವಿನಹ ಗೂಂಡಾ ಪ್ರವೃತ್ತಿಯಿಂದಲ್ಲ ಹಾಗೊಂದು ವೇಳೆ ಧೈರ್ಯವಾಗಿ ಪ್ರಶ್ನಿಸು ಎನ್ನುವ ಸಾಲೇ ಬೇಕಿದ್ದರೆ ಭ್ರಷ್ಟ ಸಚಿವರ , ಅಧಿಕಾರಿ ವರ್ಗದವರ ಸರ್ಕಾರಿ ಕಚೇರಿಗಳಲ್ಲಿ ಹಾಕಿಸಿಕೊಳ್ಳಲಿ.

    ಒಬ್ಬ ಸದೃಢ ಸೃಜನಶೀಲ ವಿದ್ಯಾರ್ಥಿ ರೂಪುಗೊಳ್ಳಲು ಜ್ಞಾನಜ್ಯೋತಿಯ ಪ್ರಭೆಯು ಅತ್ಯವಶ್ಯಕ. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎನ್ನುವ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನವರ ಆಶಯದಂತೆ ಸರ್ಕಾರ ತನ್ನ ನಡೆಯನ್ನು ತಿದ್ದಿಕೊಳ್ಳಬೇಕು. ವಿಶ್ವಮಾನವ ಕುವೆಂಪುರವರ ಸಾಲುಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳಬೇಕೆಂದು ಆಗ್ರಹಿಸಿದೆ.

    ನಗರ ಕಾರ್ಯದರ್ಶಿ ಗೋಪಿ, ಕನಕರಾಜ.ಆರ್-ರಾಜ್ಯ ಕಾರ್ಯಕಾರಿಣಿ ಸದಸ್ಯರು, ಸುದರ್ಶನ್‍ನಾಯ್ಕ-ರಾಜ್ಯ ಕಾರ್ಯಕಾರಿಣಿ ಸದಸ್ಯರು, ಮಹಿಳಾ ಪ್ರಮುಖ್-ಚೈತ್ರ, ಮಹಿಳಾ ಸಹ ಪ್ರಮುಖ್-ಚಂದನ, ಸಾಮಾಜಿಕ ಜಾಲತಾಣ-ಚಿತ್ರಸ್ವಾಮಿ, ಕಾರ್ಯಕರ್ತರು-ಯುವರಾಜ್ ಹೆಗಡೆ, ದಾನೇಶ್, ಸುದೀಪ್, ಮಧು, ತಿಪ್ಪೇಸ್ವಾಮಿ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top