Connect with us

    ಸ್ಟೇಡಿಯಂ ರಸ್ತೆಯಲ್ಲಿ ಭಗತ್ ಸಿಂಗ್ ಜನ್ಮ ದಿನಾಚರಣೆ ಆಚರಿಸಿದ ಎಬಿವಿಪಿ

    ಭಗತ್ ಸಿಂಗ್ ಜನ್ಮ ದಿನಾಚರಣೆ ಆಚರಿಸಿದ ಎಬಿವಿಪಿ

    ಮುಖ್ಯ ಸುದ್ದಿ

    ಸ್ಟೇಡಿಯಂ ರಸ್ತೆಯಲ್ಲಿ ಭಗತ್ ಸಿಂಗ್ ಜನ್ಮ ದಿನಾಚರಣೆ ಆಚರಿಸಿದ ಎಬಿವಿಪಿ

    ಚಿತ್ರದುರ್ಗ ನ್ಯೂಸ್.ಕಾಂ: ನಗರದ ಸ್ಟೇಡಿಯಂ ರಸ್ತೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಅಪ್ರತಿಮ ಕ್ರಾಂತಿಕಾರಿ ಹುತಾತ್ಮ ಭಗತ್‍ಸಿಂಗ್ ಜನ್ಮ ದಿನಾಚರಣೆ ಆಚರಿಸಿದರು.

    ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಭಗತ್‍ಸಿಂಗ್ ಕುರಿತು ಮಾತನಾಡುತ್ತಾ, ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಿ ಬ್ರಿಟೀಷರಿಗೆ ತಲೆನೋವಾಗಿದ್ದ ಭಗತ್‍ಸಿಂಗ್ ಅವರನ್ನು ನೇಣಿಗೇರಿಸಲಾಯಿತು ಎಂದು ಸ್ಮರಿಸಿದರು.

    ಇದನ್ನೂ ಓದಿ: ವದ್ದಿಕೆರೆ ಸಿದ್ದಪ್ಪನ ದೇಗುಲದ ಹುಂಡಿ ಎಣಿಕೆ: ದಾಖಲೆ ಪ್ರಮಾಣದ ಹಣ ಸಂಗ್ರಹ

    ಭಗತ್‍ಸಿಂಗ್ ತಾಯಿ ವಿದ್ಯಾವತಿ ಮತ್ತು ತಂದೆ ಕಿಶನ್‍ಸಿಂಗ್, ಭಗತ್ ಮೇಲೆ ಅತೀವ ಪ್ರಭಾವ ಬೀರಿದ್ದರು. ಲಾಹೋರ್ ಪಿತೂರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕರ್ತಾರ್‍ಸಿಂಗ್ ಸರಭ್ ಅವರನ್ನು 1915 ರಲ್ಲಿ ಅವರ 20 ನೇ ವಯಸ್ಸಿನಲ್ಲೇ ನೇಣಿಗೇರಿಸಲಾಗಿತ್ತು.

    ರಾಷ್ಟ್ರ ವಿಮೋಚನೆಯೊಂದೇ ನನ್ನ ಗುರಿ. ಯಾವುದೇ ವ್ಯಕ್ತಿ, ರಾಷ್ಟ್ರ, ಧರ್ಮ ಅಥವಾ ಜನಾಂಗದ ಮೇಲೆ ದ್ವೇಷ ಸಾಧಿಸಲು ನಾನಾವುದನ್ನೂ ಮಾಡಿಲ್ಲ. ನನಗೆ ಬೇಕಾಗಿರುವುದೊಂದೆ – ಸ್ವಾತಂತ್ರ್ಯ. ಅದೊಂದೇ ನನ್ನ ಕನಸು” ಎಂಬ ಸರಭ್‍ರ ಕೊನೆಗಾಲದ ಮಾತುಗಳು ಅವರಲ್ಲಿ ಕ್ರಾಂತಿಯ ಉದ್ದೀಪನ ಹಚ್ಚಿದ್ದವು. ಇದು ಭಗತ್‍ಸಿಂಗ್ ಅವರಲ್ಲಿ ಕ್ರಾಂತಿಯ ಕಿಡಿ ಹಚ್ಚಿತ್ತು. ಅವರ ಈ ಗುಣಗಳನ್ನು ಇಂದಿನ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

    ಭಗತ್ ಸಿಂಗ್ ಜನ್ಮ ದಿನಾಚರಣೆ ಆಚರಿಸಿದ ಎಬಿವಿಪಿ

    ಭಗತ್ ಸಿಂಗ್ ಜನ್ಮ ದಿನಾಚರಣೆ ಆಚರಿಸಿದ ಎಬಿವಿಪಿ

    ಕಾರ್ಯಕ್ರಮದಲ್ಲಿ ನಗರ ಕಾರ್ಯದರ್ಶಿ ಆರ್.ಗೋಪಿ, ಮಹಿಳಾ ಪ್ರಮುಖರಾದ ಚೈತ್ರಾ, ಸಹಪ್ರಮುಖರಾದ ಅನಿತಾ, ಹಾಸ್ಟೆಲ್ ಪ್ರಮುಖ್ ಮನೋಜ್, ಕಾರ್ಯಕರ್ತರಾದ ತರುಣ್, ದಯಾನಂದ, ಸುದೀಪ್, ಮೋಹನ್, ಬ್ರಿಜೇಶ್ ಮತ್ತಿತರರು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top